ಹಾಸನ: ಲೋಕಸಭಾ ಚುನಾವಣೆ ಹತ್ತಿರವಿರುವಾಗಲೇ ಹಾಸನ ಸಂಸದರಾಗಿದ್ದ ಪ್ರಜ್ವಲ್ ರೇವಣ್ಣರಿಗೆ ಕಂಟಕ ಎದುರಾಗಿದೆ. ಸಂಸದ ಸ್ಥಾನದಿಂದ ವಜಾಗೊಂಡಿದ್ದಾರೆ. ಇದೀಗ ಹೈಕೋರ್ಟ್ ನಲ್ಲೂ ಹಿನ್ನಡೆಯಾಗಿದೆ. ಸಂಸದ ಸ್ಥಾನದ ಆಯ್ಕೆ ಅಸಿಂಧು ಎಂದು ಅಮಾನತು ಮಾಡಿದ್ದ ಆದೇಶ ವಜಾಗೊಳಿಸಲು ಹಾಕಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕಾರ ಮಾಡಿದೆ.
ಮಧ್ಯಂತರ ರಿಲೀಫ್ ಮಾಡಲು ಹೈಕೋರ್ಟ್ ತಿರಸ್ಕಾರ ಮಾಡಿದೆ. ಅಮಾನತು ಆದೇಶ ಸಂಬಂಧ ಸುಪ್ರೀಂ ಕೋರ್ಟ್ ಗೆ ಮಧ್ಯಂತರ ಅರ್ಜಿ ಸಲ್ಲಿಸುವವರೆಗೂ ಆ ಆದೇಶ ತಡೆ ನೀಡುವಂತೆ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು. ವಿಚಾರಣೆ ನಡೆಸಿದ್ದ ನ್ಯಾ. ಕೆ ನಟರಾಜನ್ ತೀರ್ಪು ಕಾಯ್ದಿರಿಸಿದ್ದರು. ಇಂದು ತೀರ್ಪು ಪ್ರಕಟವಾಗಿದ್ದು, ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ್ದಾರೆ.
ದೂರುದಾರ ವಕೀಲ ದೇವರಾಜೇಗೌಡ ಮಾತನಾಡಿದ್ದು, ತೀರ್ಪು ನೀಡಿದ ದಿನವೇ ಪ್ರಜ್ವಲ್ ಅರ್ಜಿ ಸಲ್ಲಿಕೆ ಮಾಡಬೇಕಿತ್ತು. ತಾಂತ್ರಿಕ ದೋಷ ಎಂದು ಕಾರಣ ಹೇಳಿ ನಾಲ್ಕು ದಿನಗಳು ತಡವಾಗಿ ಅರ್ಜಿ ಸಲ್ಲಿಸಿದರು. ಪ್ರಜ್ವಲ್ ಸದಸ್ಯತ್ವ ರದ್ದುಗೊಳಿಸಲು ಎ ಮಂಜು ಅರ್ಜಿ ಹಾಕಿದ್ದರು. ಸತ್ಯಕ್ಕೆ ಸಿಕ್ಕ ಜಯ ಎಂದು ಹೇಳುತ್ತೇನೆ ಎಂದಿದ್ದಾರೆ.