ಇತ್ತಿಚೆಗೆ ರಾಜ್ಯ ರಾಜಕೀಯದಲ್ಲಿ ಲೋಕಸಭಾ ಚುನಾವಣೆಗಾಗಿ ಪೈಪೋಟಿ ನಡೆಯುತ್ತಿದೆ. ಅದರಲ್ಲೂ ಬಿಜೆಪಿ ಸೋಲಿಸಲು ವಿಪಕ್ಷಗಳು ಒಂದಾಗಿದ್ದರೆ, ಇತ್ತ ಕಾಂಗ್ರೆಸ್ ಸೋಲಿಸಲು ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಂದಾಗಿದೆ. ಮೈತ್ರಿ ಬಗ್ಗೆ ಈಗಾಗಲೇ ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಕೋಡಿಶ್ರೀ ಮಠದ ಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.
ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಅವರು ಆಗಾಗ ಸಮಾಜದಲ್ಲಿನ ಆಗುಹೋಗುಗಳು ಬಗ್ಗೆ ಭವಿಷ್ಯ ನುಡಿಯುತ್ತಿರುತ್ತಾರೆ. ಆ ಭವಿಷ್ಯ ಸಾಕಷ್ಟು ಬಾರಿ ನಿಜವಾಗಿದೆ. ಇದೀಗ ಮೈತ್ರಿ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,’ಅದುವ ಅವರವರ ವಿಚಾರ. ಈ ವಿಚಾರದ ಬಗ್ಗೆ ಏನನ್ನು ಹೇಳುವುದಕ್ಕೆ ಆಗುವುದಿಲ್ಲ. ದೇಶದ ಬಗ್ಗೆ ಈ ಹಿಂದೆಯೂ ಹೇಳಿದ್ದೆ. ದೊಡ್ಡ ದೊಡ್ಡ ನಗರಗಳಿಗೆ ಆಪತ್ತು ಕಾದಿದೆ ಎಂದು. ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಅಸ್ಥಿರತೆ ಕಾಡಲಿದೆ. ಯುಗಾದಿ ನಂತರ ಏನಾಗುತ್ತೋ ಕಾದು ನೋಡೋಣಾ’ ಎಂದು ಅಚ್ಚರಿಯ ಮಾತುಗಳನ್ನು ಹೇಳಿದ್ದಾರೆ.
ಇನ್ನು ರಾಜ್ಯದಲ್ಲಿ ಮಳೆಯಿಲ್ಲದ ರೈತ ಕಂಗಲಾಗಿದ್ದಾನೆ. ಈಗಲೂ ಭರವಸೆಯಿಂದಾನೇ ನೋಡುತ್ತಿದ್ದಾರೆ. ಆದರೆ ಮಳೆ ಹಾಗೊಮ್ಮೆ ಬಂದು ಹೀಗೊಮ್ಮೆ ಕೈಕೊಡುತ್ತಿದೆ. ಹೀಗಾಗಿ ರಾಜ್ಯದ ಬರದ ಪರಿಸ್ಥಿತಿ ಬಗ್ಗೆಯೂ ಕೋಡಿಶ್ರೀ ಮಾತನಾಡಿದ್ದಾರೆ. ‘ಮನುಷ್ಯ ಮಾಡಿದ ತಪ್ಪುಗಳಿಗೆ ದೇವರು ಕ್ಷಮಿಸುತ್ತಾನೆ. ಆದರೆ ಮನುಷ್ಯ ಮಾಡಿದ ಪಾಪ ಕರ್ಮಗಳು ಮನುಷ್ಯನನ್ನು ಕ್ಷಮಿಸುವುದಿಲ್ಲ. ಮನುಷ್ಯನ ಪಾಪ ಕರ್ಮಗಳೇ ಇಂಥಹ ಪರಿಸ್ಥಿತಿಗೆ ಕಾರಣ. ಮನುಷ್ಯನ ಕರ್ಮಬಾಧೆ ಹೆಚ್ಚಿದಾಗ, ಇಂತಹ ಪಾಪ ಕರ್ಮಗಳನ್ನು ಸಾಮೂಹಿಕವಾಗಿ ಅನುಭವಿಸಬೇಕಾಗುತ್ತದೆ’ ಎಂದಿದ್ದಾರೆ.