ಬೆಂಗಳೂರು: ನಾನಾ ಬೇಡಿಕೆಗಳ ಆಗ್ರಹಕ್ಕೆ ಒತ್ತಾಯಿಸಿ ಇಂದು ಆಟೋ ಚಾಲಕರು, ಖಾಸಗಿ ಬಸ್ ಮಾಲೀಕರು, ಕ್ಯಾಬ್ ಡ್ರೈವರ್ ಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಮಧ್ಯರಾತ್ರಿಯಿಂದಾನೇ ಬೆಂಗಳೂರಿನಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿದೆ. ಏರ್ಪೋರ್ಟ್ ಹೋಗುವವರಿಗೂ ಇದು ಸಂಕಷ್ಟ ತಂದೊಡ್ಡಿದೆ.
ಬೆಂಗಳೂರಿನ ಮಹಾನಗರದಲ್ಲಿ ಬಸ್ ಗಿಂತ ಹೆಚ್ಚಾಗಿ ಆಟೋ, ಕ್ಯಾಬ್ ಗಳನ್ನೇ ನಂಬಿಕೊಂಡಿರುವವರು ಹೆಚ್ಚು. ಈ ಪ್ರತಿಭಟನೆಯಿಂದಾಗಿ ಎಷ್ಟೋ ಜನ ನಡೆದುಕೊಂಡೇ ಕೆಲವೊಂದು ಜಾಗ ತಲುಪಬೇಕಾಗಿ ಬಂದಿದರ. ಶಕ್ತಿ ಯೋಜನೆಯಿಂದಾಗಿ ನಮಗೆ ನಷ್ಟ ಆಗ್ತಿದೆ ಎಂದು ಸರ್ಕಾರದ ವಿರುದ್ಧ ಖಾಸಗಿ ಬಸ್ ಮಾಲೀಕರು ಹಾಗೂ ಆಟೋ ಡ್ರೈವರ್ ಗಳು ರೊಚ್ಚಿಗೆದ್ದಿದ್ದಾರೆ.
ಇನ್ನು ಈ ಪ್ರತಿಭಟನೆಯ ಬಿಸಿ ಮಾಜಿ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆಗೂ ತಟ್ಟಿದೆ. ಕ್ಯಾಬ್ ಗಳ ಪ್ರತಿಭಟನೆಯಿಂದಾಗಿ ಮನೆಗೆ ಹೋಗಲು, ಬಿಎಂಟಿಸಿ ಬಸ್ ಅನ್ನೇ ಹತ್ತಿದ್ದಾರೆ. ಕೆಂಪೇಗೌಡ ಏರ್ಪೋರ್ಟ್ ನಿಂದ ಅನಿಲ್ ಕುಂಬ್ಳೆ ಬಸ್ ನಲ್ಲಿ ಪ್ರಯಾಣ ಮಾಡಿದ್ದಾರೆ. ಪ್ರತಿಭಟನೆಯಿಂದಾಗಿ ಜನರಿಗೆ ಕಷ್ಟವಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಇಂದು ಹೆಚ್ಚುವರಿ ಬಸ್ ಗಳನ್ನು ಬಿಟ್ಟಿದೆ.