ಚೆನ್ನೈ: ಇತ್ತಿಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸನಾತನ ಧರ್ಮದ ವಿಚಾರವಾಗಿ ಸಾಕಷ್ಟು ಚರ್ಚೆಯಾಗಿತ್ತಿದೆ. ಅದರಲ್ಲೂ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಕೆ ಮಾಡಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಇದೀಗ ಉದಯನಿಧಿ ಸ್ಟಾಲಿನ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
#கலைஞர்100 pic.twitter.com/d9pO9Blyxb
— Udhay (@Udhaystalin) September 9, 2023
ಕಟ್ಟರ್ ಹಿಂದೂ ವಿರೋಧಿ ಎಂದೇ ಖ್ಯಾತಿ ಪಡೆದಿರುವ ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ಮಾತನಾಡಿರುವ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ‘ಹಿಂದುಳಿದ ಜಾತಿಗಳಿಗೆ ಮೇಲ್ವರ್ಗದವರು ವಿದ್ಯೆಯನ್ನು ನಿರಾಕರಿಸಿದರು. ವಿದ್ಯೆ ಕಲಿತರೆ ನಿಮಗೆ ಶಾಪ ತಟ್ಟಲಿದೆ ಎಂದು ಬೆದರಿಕೆ ಹಾಕಿದ್ದರು. ಅದಕ್ಕೆ ನಾವ್ಯಾರು ಹೆದರಲಿಲ್ಲ. ವಿದ್ಯೆ ಕಲಿಯಬೇಕು ಎಂದುಕೊಂಡಿರೋ ಕೆಳಜಾತಿಯ ಜನ ನರಕಕ್ಕೆ ಹೋಗಲಿದ್ದಾರೆ ಎಂದು ಹೆದರಿಸಿದ್ರು. ಒಂದು ವೇಳೆ ಯಾರಾದರೂ ಅವರಿಗೆ ಗೊತ್ತಿಲ್ಲದೆ ವಿದ್ಯೆ ಕಲಿತರೆ ಅಂಥವರ ನಾಲಿಗೆ ಕತ್ತರಿಸುತ್ತಿದ್ದರು.
ಕತ್ತರಿಸಿ ನಾಲಿಗೆಯನ್ನು ಸುಟ್ಟು ಹಾಕುತ್ತಿದ್ದರು. ಅದು ಅಂದು ಮಾತ್ರವಲ್ಲ, ಇಂದು ಕೂಡ ಮನುಧರ್ಮವನ್ನು ಪಾಲಿಸುವವರು ಅದನ್ನೇ ಹೇಳುತ್ತದೆ. ಹೀಗಾಗಿ ಪೆರಿಯಾರ್ ಮನುಧರ್ಮ ಶಾಸ್ತ್ರವನ್ನು ಸುಟ್ಟರು, ಅಂಬೇಡ್ಜರ್ ವಿರುದ್ಧ ಹೋರಾಟ ನಡೆಸಿದರು ಎಂದು ಕರುಣಾನಿಧಿ ಅವರು ಮಾತಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.