ವರದಿ : ಕೆ.ಎಂ. ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ: ಉತ್ಕೃಷ್ಟ ರಾಮಾಯಣ ರಚಿಸಿದ ಆದಿಕವಿ ವಾಲ್ಮೀಕಿರವರ ಮಾರ್ಗದರ್ಶನದಂತೆ ಪ್ರತಿಯೊಬ್ಬರು ನಡೆದಾಗ ಉತ್ತಮ ಪ್ರಜೆಗಳಾಬಹುದೆಂದು ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಪಿ.ಎಲ್.ಸುರೇಶ್‍ರಾಜು ತಿಳಿಸಿದರು.
ವಾಸವಿ ವಿದ್ಯಾಸಂಸ್ಥೆಯಲ್ಲಿ ನಡೆದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.
ಆರಂಭದಲ್ಲಿ ಸುಲಿಗೆಮಾಡಿಕೊಂಡು ಜೀವಿಸುತ್ತಿದ್ದ ವಾಲ್ಮೀಕಿ ನಂತರ ಮನಪರಿವರ್ತನೆಯಾಗಿ ಅದ್ಬುತವಾದ ರಾಮಾಯಣ ಬರೆಯಲು ಸಾಧ್ಯವಾಯಿತು. ಗುರು-ಹಿರಿಯರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ನಡೆದಾಗ ಮಾತ್ರ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಂಡು ನಾಯಕತ್ವ ಗುಣಬೆಳೆಸಿಕೊಳ್ಳಬಹುದು. ಮಹರ್ಷಿ ವಾಲ್ಮೀಕಿರವರು ಕೇವಲ ನಾಯಕ ಜನಾಂಗಕ್ಕೆ ಸೀಮಿತಲ್ಲ. ಇಡಿ ಮನುಕುಲಕ್ಕೆ ಅತ್ಯುತ್ತಮವಾದ ಸಂದೇಶ ನೀಡಿದ್ದಾರೆ ಎಂದು ಸ್ಮರಿಸಿದರು.
ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಉಪಾಧ್ಯಕ್ಷ ಎನ್.ಶಶಿಧರ ಗುಪ್ತ, ಮುಖ್ಯ ಶಿಕ್ಷಕರುಗಳು, ಶಿಕ್ಷಕ/ಶಿಕ್ಷಕಿಯರು ಹಾಗೂ ಸಿಬ್ಬಂದಿಯವರು ವಾಲ್ಮೀಕಿ ಜಯಂತಿಯಲ್ಲಿ ಪಾಲ್ಗೊಂಡಿದ್ದರು.
ವಾಲ್ಮೀಕಿ ಜಯಂತಿ ಪ್ರಯುಕ್ತ ರೋಟರಿ ಕ್ಲಬ್‍ನವರು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.