ವರದಿ ಮತ್ತು ಫೋಟೋ
ಸುರೇಶ್ ಪಟ್ಟಣ್
ಮೊ : 98862 95817
ಸುದ್ದಿಒನ್, ಚಿತ್ರದುರ್ಗ(ಸೆ.02) : ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್‍ವತಿಯಿಂದ 38ನೇ ರಾಷ್ಟ್ರೀಯ ನೇತ್ರದಾನದ ಪಾಕ್ಷಿಕ ಅಂಗವಾಗಿ ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್‍ನ ಸ್ಥಾಪನಾಧ್ಯಕ್ಷರಾದ ಶ್ರೀಮತಿ ಗಾಯತ್ರಿ ಶಿವರಾಮ್‍ರವರು ಶನಿವಾರ ಸರ್ಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಪ್ರಾಚಾರ್ಯ ರಮೇಶ್‍ರವರಿಗೆ ನೇತ್ರದಾನದ ಬಗ್ಗೆ ಮಾಹಿತಿ ಇರುವ ಭಿತ್ತಿ ಪತ್ರವನ್ನು ನೀಡುವ ಮೂಲಕ ನೇತ್ರದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಗಾಯತ್ರಿಯವರು ನೇತ್ರದಾನ ಬಹಳ ಮುಖ್ಯವಾದ ದಾನವಾಗಿದೆ. ನಮ್ಮ ಸಾವಿನ ನಂತರವು ನಮ್ಮ ಕಣ್ಣುಗಳು ಜೀಂವತವಾಗಿ ಇರಬೇಕಾದರೆ ನಿಮ್ಮ ಮರಣದ ನಂತರ ನಿಮ್ಮ ಕಣ್ಣುಗಳನ್ನು ದಾನ ಮಾಡುವುದರ ಮೂಲಕ ಇಬ್ಬರು ಅಂಧರಿಗೆ ನೇತ್ರವನ್ನು ಅಳವಡಿಸಲಾಗುವುದು ಇದರಿಂದ ಇಬ್ಬರ ಬದುಕಿಗೆ ದಾರಿ ದೀಪವಾದಂತೆ ಆಗಲಿದೆ ಎಂದರು.
ರೋಟರಿ ಕ್ಲಬ್ ಫೋರ್ಟ್ ಅಧ್ಯಕ್ಷ ಎಂ ಗಿರೀಶ್ ಮಾತನಾಡಿ ನೇತ್ರ ಮಾನವನಿಗೆ ಅತಿ ಅಮೂಲ್ಯವಾದ ಆಂಗವಾಗಿದೆ ಮಾನವ ತನ್ನ ದೇಹದಲ್ಲಿ ಬೇರೆ ಅಂಗಗಳು ಉನಾದರೂ ಸಹಾ ಬದುಕನ್ನು ನಡೆಸಬಹುದಾಗಿದೆ ಆದರೆ ನೇತ್ರ ಇಲ್ಲವಾದರೇ ನಮ್ಮ ಬದುಕನ್ನು ನಡೆಸಲು ಬೇರೆಯವರ ಸಹಾಯವನ್ನು ಪಡೆಯವುದು ಅನಿವಾರ್ಯವಾಗುತ್ತದೆ ಎಂದ ಅವರು ನಾವು ಸತ್ತ ನಂತರ ನಮಗೆ ಕಣ್ಣುಗಳ ಆವಶ್ಯಕತೆ ಇರುವುದಿಲ್ಲ ಈ ಹಿನ್ನಲೆಯಲ್ಲಿ ನಮ್ಮ ಕಣ್ಣುಗಳನ್ನು ನಮ್ಮ ಮರಣದ ನಂತರ ಬೇರೆಯವರಿಗೆ ದಾನ ಮಾಡುವುದರ ಮೂಲಕ ಇಬ್ಬರು ಅಂಧರಿಗೆ ಸಹಾಯ ಮಾಡಿದಂತೆ ಆಗುತ್ತದೆ ಇದರ ಮಹತ್ವದ ಬಗ್ಗೆ ನಿಮ್ಮ ಮನೆಗಳಲ್ಲಿ ತಿಳಿಸಿ ಎಂದರು.
ಕಾರ್ಯಕ್ರಮದಲ್ಲಿ ಐ ಬ್ಯಾಂಕ್ ಅಧ್ಯಕ್ಷರಾದ ಪಿ.ಬಿ.ಶಿವರಾಮ್, ಐ ಬ್ಯಾಂಕ್ ಕಾರ್ಯದರ್ಶಿ ಟಿ.ವಿ.ಸ್ವಾಮಿ, ಸಂಚಾಲಕರಾದ ಎಸ್. ವೀರೇಶ್ ಹಾಗೂ ಕಾಲೇಜಿನ ಮಹಿಳಾ ಪ್ರಾಧ್ಯಾಪಕರು ಹಾಜರಿದ್ದರು.