ಮೈಸೂರು: ಈ ಬಾರಿಯ ನಾಡಹಬ್ಬ ದಸರಾ ಉತ್ಸವಕ್ಕೆ ಶುಭಾರಂಭ ಸಿಕ್ಕಿದೆ. ಇಂದಿನಿಂದ ಅರಮನೆ ನಗರಕ್ಕೆ ಗಜಪಡೆಗಳು ಎಂಟ್ರಿಯಾಗಿವೆ. ಅರಮನೆಗೆ ಗಜಪಡೆಯ ಸ್ವಾಗತ ಕೋರಲಾಗಿದೆ.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ ಮಾತನಾಡಿದ್ದು, ಈ ಬಾರಿ ಅದ್ದೂರಿಯಾಗಿ ಮೈಸೂರು ದಸರಾ ಆಚರಣೆ ಮಾಡಲಾಗುತ್ತದೆ. 30 ಕೋಟಿ ಅನುದಾನ ಕೊಡುವಂತೆ ಸಿಎಂ ಗೆ ಮನವಿ ಮಾಡಿದ್ದೇವೆ. 9 ಆನೆಗಳು ಕಾಡಿನಿಂದ ನಾಡಿಗೆ ಬರುತ್ತಿವೆ. ಇನ್ನೂ ಐದು ಆನೆಗಳು ಮತ್ತೊಂದು ತಂಡ ಅರಮನೆಗೆ ಬರಲಿದೆ. ಮಾವುತರು ಹಾಗೂ ಕಾವಾಡಿಗಳಿಗೆ ಪ್ರೋತ್ಸಾಹ ನೀಡುತ್ತೇವೆ. ದಸರಾ ವೀಕ್ಷಣೆಗೆ ದೇಶ ವಿದೇಶಗಳಿಂದ ಲಕ್ಷಾಂತರ ಜನ ಬರುತ್ತಾರೆ ಎಂದು ವೀರನ ಹೊಸ ಹಳ್ಳಿಯಲ್ಲಿ ಸಚಿವ ಮಹದೇವಪ್ಪ ಹೇಳಿಕೆ ನೀಡಿದ್ದಾರೆ.
ದಸರಾ ಬಗ್ಗೆ ಸಚಿವ ಈಶ್ವರ್ ಖಂಡ್ರೆ ಮಾತನಾಡಿದ್ದು, ಘೋಷಣೆ ದಸರಾ ಗಜ ಪಯಣಕ್ಕೆ ವಿದ್ಯುಕ್ತ ಚಾಲನೆ ಕೊಟ್ಟಿದ್ದೇವೆ. ಈ ಬಾರಿ ಹೊಸದಾಗಿ ಅಂಜನ್ ಎಂಬ ಆನೆಯೂ ಸೇರ್ಪಡೆಯಾಗಿದೆ ಎಂದಿದ್ದಾರೆ.