ಪದಕ ವಿಜೇತ ಕ್ರೀಡಾಪಟುಗಳಿಗೆ ನೀಡುವ ಗೌರವ ಧನಕ್ಕೆ ಮೀಸಲಾತಿ ಬೇಡ : ಎನ್.ಡಿ.ಕುಮಾರ್

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆ.30  : ಪದಕ ವಿಜೇತ ಕ್ರೀಡಾಪಟುಗಳಿಗೆ ನೀಡುವ ಗೌರವ ಧನಕ್ಕೆ ಮೀಸಲಾತಿ ಬೇಡ. ಎಲ್ಲಾ ಕ್ರೀಡಾಪಟುಗಳಿಗೆ ಸಮಾನವಾಗಿ ನೀಡಬೇಕೆಂದು ಅಂತರಾಷ್ಟ್ರೀಯ ಕ್ರೀಡಾಪಟು ಹಾಗೂ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್ ಹೇಳಿದರು.

ಹಾಕಿ ಮಾಂತ್ರಿಕ ಧ್ಯಾನ್‍ಚಂದ್ ಹುಟ್ಟುಹಬ್ಬವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸುತ್ತಿರುವುದರಿಂದ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಗೆ ಜಾತಿ ಸೋಂಕು ಇರಬಾರದು. ಎಲ್ಲಾ ಜಾತಿ ಧರ್ಮದವರನ್ನು ಬೆಸೆಯುವ ಶಕ್ತಿ ಕ್ರೀಡೆಗಿದೆ. ಆದುದರಿಂದ ಪದಕ ವಿಜೇತ ಕ್ರೀಡಾಪಟುಗಳಿಗೆ ನೀಡುವ ಗೌರವ ಧನಕ್ಕೆ ಮೀಸಲಾತಿ ಅಗತ್ಯವಿಲ್ಲ. ಧ್ಯಾನ್‍ಚಂದ್‍ಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಕೊಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಸುಚೇತ ನೇಲವಗಿ, ಅಂತರಾಷ್ಟ್ರೀಯ ಕ್ರೀಡಾಪಟು ನಾಗಭೂಷಣ್, ತರಬೇತುದಾರರಾದ ಮುಹಿಬುಲ್ಲಾ, ಅಕ್ರಮ್ ನಾಗ್‍ತೆ, ಸಾಧಿಕ್, ಅಪ್ಪು, ನಿವೃತ್ತ ದೈಹಿಕ ಶಿಕ್ಷಕ ಜಯಣ್ಣ ಇನ್ನು ಮೊದಲಾದವರು ಈ ಸಂದರ್ಭದಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *