ಭಾರತ ಹೆಮ್ಮೆ ಪಡುವಂತ ಚಂದ್ರಯಾನ 3 ಸಕ್ಸಸ್ ಆಗಿದೆ. ವಿಕ್ರಂ ಲ್ಯಾಂಡರ್ ತನ್ನ ಕೆಲಸ ಶುರು ಮಾಡಿದೆ. ಇದೀಗ ಚಂದ್ರಯಾನ 3 ಯಶಸ್ಸಿನ ಕ್ರೆಡಿಟ್ ತೆಗೆದುಕೊಳ್ಳುವುದಕ್ಕೆ ನಾ ಮುಂದು ತಾ ಮುಂದು ಅಂತಿದ್ದಾರೆ. ನಾನು ಇಸ್ರೋ ವಿಜ್ಞಾನಿ, ನಾನೇ ವಿಕ್ರಂ ಲ್ಯಾಂಡರ್ ತಯಾರು ಮಾಡಿದ್ದು ಎಂದು ಹೇಳಿದ ವ್ಯಕ್ತಿಯೊಬ್ಬ ಅರೆಸ್ಟ್ ಆಗಿದ್ದಾನೆ.
ಗುಜರಾತ್ ಪೊಲೀಸರು ಮೆಹುಲ್ ತ್ರಿವೇದಿ ಎಂಬಾತನನ್ನು ಬಂಧಿಸಿದ್ದಾರೆ. ಈತ ಚಂದ್ರಯಾನ 3ರ ಕ್ರೆಡಿಟ್ ತಾನೇ ತೆಗೆದುಕೊಳ್ಳುತ್ತಿದ್ದ. ವಿಕ್ರಂ ಲ್ಯಾಂಡರ್ ತಯಾರಿಸಿದ್ದು ನಾನೇ ಎಂದು ಹೇಳುವ ಮೂಲಕ, ಸಂದರ್ಶನಗಳನ್ನು ನೀಡುತ್ತಿದ್ದ. ಅಷ್ಟೇ ಅಲ್ಲ ಇಸ್ರೋದ ಪುರಾತನ ವಿಜ್ಞಾನ ಅಪ್ಲಿಕೇಷನ್ ಇಲಾಖೆಯಲ್ಲಿ ಸಹಾಯಕ ಮುಖ್ಯಸ್ಥನಾಗಿರುವುದಾಗಿ ನಕಲಿ ನೇಮಕಾತಿ ಪತ್ರವನ್ನು ಸಹ ಹೊಂದಿದ್ದ.
ಈ ವಿಚಾರ ತಿಳಿಯುತ್ತಿದ್ದಂತೆ ಗುಜರಾತ್ನ ಸೂರತ್ ನಲ್ಲಿ 40 ವರ್ಷದ ತ್ರಿವೇದಿಯ ಬಂಧನವಾಗಿದೆ. ಪೊಲೀಸರ ವಿಚಾರಣೆಯಲ್ಲಿ ಆತ ತಪ್ಪೊಪ್ಪಿಕೊಂಡಿದ್ದು, ತನ್ನ ಟ್ಯೂಷನ್ ತರಗತಿ ಜನಪ್ರಿಯಗೊಳಿಸುವುದಕ್ಕಾಗಿ ಈ ರೀತಿ ಮಾಡಿರುವುದಾಗಿ ಹೇಳಿದ್ದಾನೆ.
ಚಂದ್ರನ ದಕ್ಷಿಣ ಅಂಗಳದಲ್ಲಿ ವಿಕ್ರಂ ಹಾಗೂ ಪ್ರಗ್ಯಾನ್ ಕಾರ್ಯ ನಿರ್ವಹಿಸುತ್ತಿದ್ದು, ಸದ್ಯ ಇಸ್ರೋದ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಮೊದಲ ದೇಶ ನಮ್ಮ ಭಾರತ ಎಂಬ ಹೆಗ್ಗಳಿಕೆ ಇದೆ.