ಚಂದ್ರಯಾನ 3 ಸಕ್ಸಸ್ ಖುಷಿಯಲ್ಲಿ ಭಾರತ ತೇಲುತ್ತಿದೆ. ಇದರ ನಡುವೆ ಚಂದ್ರನ ಮೇಲೂ ಚೀನಾ ಭಾರತದ ಮೇಲೆ ಕಣ್ಣಿಟ್ಟಿದೆ ಎನ್ನಲಾಗಿದೆ. ಯಾಕಂದ್ರೆ ಚಂದ್ರನ ಅಂಗಳದಲ್ಲಿ ಚೀನಾ ಕಳುಹಿಸಿರುವ ರೋವರ್ ಭಾರತಕ್ಕೆ ಮುಖಾಮುಖಿಯಾಗಲಿದೆಯಾ ಎಂಬ ಪ್ರಶ್ನೆ ಎದುರಾಗಿದೆ.
ಇಸ್ರೋ ಸದ್ಯ ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ಚಲನೆಯತ್ತ ಗಮನ ನೀಡಿದೆ. ಇನ್ನು ಹತ್ತು ದಿನಗಳ ಕಾಲ ಮಾತ್ರ ಸಂಶೋಧನೆಗೆ ಅವಕಾಶವಿದೆ. ಯಾಕಂದ್ರೆ ಪ್ರಗ್ಯಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್ ಕಾರ್ಯನಿರ್ವಹಿಸೋದು ಸೂರ್ಯನ ಬೆಳಕಿನಿಂದ . ಇನ್ನು ಹತ್ತು ದಿನಗಳ ಬಳಿಕ ಚಂದ್ರನಲ್ಲಿ ಕತ್ತಲು ಆವರಿಸುತ್ತದೆ. -200 ಸೆಲ್ಸಿಯಸ್ ಗಿಂತ ಕಡಿಮೆ ತಾಪಮಾನ ಉಂಟಾಗುವ ಕಾರಣದಿಂದ ವಿಕ್ರಂ ಹಾಗೂ ಪ್ರಗ್ಯಾನ್ ನಿಷ್ಕ್ರೀಯಗೊಳ್ಳಲಿವೆ. ಹೀಗಾಗಿ ಅಷ್ಟರೊಳಗೆ ತನ್ನ ಸಂಶೋಧನೆಯನ್ನು ನಡೆಸಬೇಕಾಗಿದೆ.
ಇನ್ನು ಚಂದ್ರನ ಮೇಲೆ ಚೀನಾ 2019ರಲ್ಲಿಯೇ ತನ್ನ U2 2 ರೋವರ್ ಅನ್ನು ಲ್ಯಾಂಡ್ ಮಾಡಿತ್ತು. ಆದರೆ ಚಂದ್ರನ ಮೇಲೆ ಕತ್ತಲು ಆವರಿಸಿದಾಗ ಚೀನಾದ ರೋವರ್ ನಿಷ್ಕ್ರೀಯಗೊಂಡಿದೆ. ಆದ್ರೆ ಈಗ ಚಂದ್ರನ ಮೇಲೆ ಸೂರ್ಯನ ಕಿರಣಗಳು ಬೀಳುತ್ತಿರುವ ಕಾರಣ ಮತ್ತೆ ಸಕ್ರೀಯಗೊಳ್ಳಲಿದೆ. ಹೀಗಾಗಿ ಚಂದ್ರನ ಮೇಲೂ ಮುಖಾ ಮುಖಿಯಾಗಲಿದೆಯಾ ಎನ್ನಲಾಗುತ್ತಿದೆ. ಆದ್ರೆ ಇಸ್ರೋ ವಿಜ್ಞಾನಿಗಳ ಪ್ರಕಾರ ಭಾರತದ ಪ್ರಗ್ಯಾನ್ ರೋವರ್ ಹಾಗೂ ಚೀನಾದ U2 2 ರೋವರ್ ನಡುವೆ 1948 ಕಿಲೋಮೀಟರ್ ಅಂತರವಿದೆ ಎನ್ನಲಾಗಿದೆ. ಹೀಗಾಗಿ ಚೀನಾ ಮತ್ತು ಭಾರತದ ರೋವರ್ ಪರಸ್ಪರ ಭೇಟಿಯಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ.