ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದೆ. ಇವತ್ತು ಬರುತ್ತೆ, ನಾಳೆ ಬರುತ್ತೆ ಅಂತ ಮಳೆಗಾಗಿ ಕಾದಿದ್ದೇ ಆಯ್ತು. ಆದ್ರೆ ಮಳೆ ಮಾತ್ರ ಬರಲೇ ಇಲ್ಲ. ಆಗಸ್ಟ್ 24 ರಿಂದ ರಾಜ್ಯದ ಹಲವೆಡೆ ಮಳೆಯಾಗುತ್ತೆ ಎಂದು ಹವಮಾನ ಇಲಾಖೆ ಮುನ್ಸೂಚನೆಯನ್ನು ನೀಡಿತ್ತು. ಆದರೆ ಹೇಳಿದ ಸಮಯಕ್ಕೆ ಮಳೆ ಕೂಡ ಬರಲಿಲ್ಲ. ಮೋಡದತ್ತ ರೈತರು ಕಣ್ಣು ಬಿಟ್ಟು ಕೂತಿದ್ದಾರೆ.
ರಾಜ್ಯದಲ್ಲಿ ಜೂನ್ ನ ಆರಂಭದಲ್ಲೇ ವರುಣಾನ ಆಗಮನ ತಡವಾಗಿದ್ದು, ಆಗಸ್ಟ್ ಮೊದಲ ವಾರದಲ್ಲೇ ರಾಜ್ಯದಲ್ಲಿ ಮಳೆಯ ಕೊರತೆ ಎದುರಾಗಿದ್ದು,ಜಲಾಶಯಗಳಲ್ಲಿಯೂ ನೀರಿನ ಮಟ್ಟ ಕಡಿಮೆಯಾಗಿದೆ. ಇನ್ನೂ ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ಒಳನಾಡಿನ ಹಲವೆಡೆ ಮಳೆಯಾಗುವ ಸಾಧ್ಯತೆ ಇದ್ದು, ನೈಋತ್ಯ ಮುಂಗಾರು ರಾಜ್ಯದಲ್ಲಿ ದುರ್ಬಲವಾಗಿತ್ತು.
ಮುಂಗಾರು ಮಳೆ ಈಗ ಕೈಕೊಟ್ಟಿದೆ. ಬೀಜ ಬಿತ್ತನೆ ಮಾಡಬೇಕೆಂದು ಕಾಯುತ್ತಿದ್ದ ರೈತರು ಬೇಸತ್ತು ಮನೆಗೆ ಬಂದಿದ್ದಾರೆ. ಈ ವಾರವಾದರೂ ಮಳೆ ಬಂದ್ರೆ ಹಾಗೋ ಹೀಗೋ ಬೀಜ ಬಿತ್ತನೆ ಮಾಡಬಹುದು ಎಂಬ ಆಸೆಯಿಂದ ಕಾಯುತ್ತಿದ್ದಾರೆ. ಮುಂದಿನ ವಾರ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.