ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆ.24 : ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದಿರುವುದಕ್ಕೆ ವಾಸವಿ ಕ್ಲಬ್ ಹಾಗೂ ಅವೋಪ, ವಾಸವಿ ವಿದ್ಯಾಸಂಸ್ಥೆ, ಆರ್ಯವೈಶ್ಯ ಸಂಘದಿಂದ ಒನಕೆ ಒಬವ್ವ ವೃತ್ತದ ಮುಂಭಾಗ ಗುರುವಾರ ಸಂಭ್ರಮಿಸಿ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.
ವಾಸವಿ ಕ್ಲಬ್ ಅಧ್ಯಕ್ಷರಾದ ಎಲ್.ಆರ್.ಲಕ್ಷ್ಮಣ್, ಅವೋಪ ಅಧ್ಯಕ್ಷ ಪಿ.ಎಲ್.ಸುರೇಶ್‍ರಾಜು ಇವರುಗಳು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ನೇತೃತ್ವದಲ್ಲಿ ವಿಜ್ಞಾನಿಗಳು ಚಂದ್ರನಲ್ಲಿ ನೌಕೆ ಇಳಿಸಿ ಇಡಿ ವಿಶ್ವವೇ ಭಾರತದ ಬಗ್ಗೆ ಹೆಮ್ಮೆ ಪಡುವಂತೆ ಶ್ರಮಿಸಿರುವುದು ದೊಡ್ಡ ಸಾಧನೆ ಎಂದು ಗುಣಗಾನ ಮಾಡಿದರು.
ತಿಪ್ಪೇಸ್ವಾಮಿ, ಲಿಂಗಂ ಶ್ರೀನಿವಾಸ್, ಎಸ್.ನಾಗರಾಜ್, ಕೋಟೇಶ್ವರಗುಪ್ತ, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಸತ್ಯನಾರಾಯಣಶೆಟ್ಟಿ, ಕಾರ್ಯದರ್ಶಿ ಅಜಯ್‍ಕುಮಾರ್ ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.
ಚಿತ್ರದುರ್ಗ : ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್ ಆಗಿರುವುದಕ್ಕೆ ಸಿ.ಎನ್.ಸಿ. ಪಿ.ಯು.ಕಾಲೇಜಿನಲ್ಲಿ ಗುರುವಾರ ಸಂಭ್ರಮಾಚರಿಸಲಾಯಿತು.ಕಾಲೇಜಿನ ಡೀನ್ ಗೋಪಾಲ್, ಪ್ರಾಚಾರ್ಯರಾದ ಬಿ.ನಾಗರಾಜ್, ಬೋಧಕ ವರ್ಗದವರು ಹಾಜರಿದ್ದು, ವಿದ್ಯಾರ್ಥಿಗಳಿಗೆ ಸಿಹಿ ಹಂಚಿದರು.
ಇಸ್ರೋ ಹೆಸರಿನಂತೆ ವಿದ್ಯಾರ್ಥಿಗಳು ಕುಳಿತು ಸಂಭ್ರಮಿಸಿದ್ದು, ವಿಶೇಷವಾಗಿತ್ತು.
ಚಂದ್ರಯಾನ 3 ಯಶಸ್ವಿಯಾಗುವ ಮೂಲಕ ಇಸ್ರೋ ಅದ್ಭುತ ಸಾಧನೆ ಮಾಡಿದೆ. ಇಡೀ ವಿಶ್ವವೇ ಎದುರು ನೋಡುತ್ತಿದ್ದ ಚಂದ್ರಯಾನ 3 ಯಶಸ್ವಿಯಾಗಿದೆ. ಪ್ರದರ್ಶನಗಳ ಸಾಧನೆಗೆ ಬಾಪೂಜಿ ಸಮೂಹ ಸಂಸ್ಥೆ ಎಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಶುಭ ಕೋರಿದರು.