Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಂದ್ರಯಾನ 3: ಚಂದ್ರಯಾನದ ಭವ್ಯ ಯಶಸ್ಸಿನಿಂದ ನನ್ನ ಜೀವನ ಧನ್ಯವಾಯಿತು : ಪ್ರಧಾನಿ ಮೋದಿ

Facebook
Twitter
Telegram
WhatsApp

 

ಬಾಹ್ಯಾಕಾಶದಲ್ಲಿ ಭಾರತ ರಾರಾಜಿಸುತ್ತಿದೆ. ಯಾವುದೇ ದೇಶಕ್ಕೆ ಅಸಾಧ್ಯವಾಗದ ದಕ್ಷಿಣ ಧ್ರುವದಲ್ಲಿ ಇಳಿಯುವ ಮೂಲಕ ಇಸ್ರೋ ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸಿದೆ. ಚಂದ್ರಯಾನ 3 ಉಡಾವಣೆ ಯಶಸ್ವಿ ಕ್ಷಣ ಇಡೀ ಭಾರತವೇ ರೋಮಾಂಚನಗೊಂಡಿತ್ತು. ಭಾರತ ಹಾಗೂ ಇಡೀ ವಿಶ್ವವೇ ಕುತೂಹಲದಿಂದ ಕಾಯುತ್ತಿದ್ದ ಅತ್ಯಂತ ಪ್ರತಿಷ್ಠಿತ ಚಂದ್ರಯಾನ 3 ಉಡಾವಣೆ ಯಶಸ್ವಿಯಾಗಿದೆ.

ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ವಿಜ್ಞಾನಿಗಳೊಂದಿಗೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಅಭೂತಪೂರ್ವ ಕ್ಷಣವನ್ನು ವೀಕ್ಷಿಸಿದರು. ಚಂದ್ರಯಾನ 3 ಲ್ಯಾಂಡರ್ ಚಂದ್ರನಲ್ಲಿ ಯಶಸ್ವಿಯಾಗಿ ಮುಟ್ಟಿದ ಕ್ಷಣವನ್ನು ಪ್ರಧಾನ ಮಂತ್ರಿಗಳು ಇಸ್ರೋ ವಿಜ್ಞಾನಿಗಳೊಂದಿಗೆ ಆಚರಿಸಿದರು.

ಚಂದ್ರನ ಮೇಲೆ ಚಂದ್ರಯಾನ 3 ಇಳಿಯುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಯಶಸ್ವಿ ಉಡಾವಣೆಯಾದ ತಕ್ಷಣ ಇಸ್ರೋ ವಿಜ್ಞಾನಿಗಳನ್ನು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಈ ಯಶಸ್ಸು ಇಸ್ರೋ ವಿಜ್ಞಾನಿಗಳ ಅವಿರತ ಶ್ರಮಕ್ಕೆ ಸಿಕ್ಕ ಫಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಐತಿಹಾಸಿಕ ಘಟನೆಗಳನ್ನು ಕಂಡು ಹೆಮ್ಮೆ ಪಡುತ್ತೇನೆ ಎಂದರು.

ಚಂದ್ರಯಾನ ಉಡಾವಣೆಯಲ್ಲಿ ಭಾಗಿಯಾದ ಇಸ್ರೋ ವಿಜ್ಞಾನಿಗಳು ಮತ್ತು ತಂಡಕ್ಕೆ ನನ್ನ ಅಭಿನಂದನೆಗಳು. ಈ ಅದ್ಭುತ ಕ್ಷಣಕ್ಕಾಗಿ ನಾನು ಹಲವು ವರ್ಷಗಳಿಂದ ಕಾಯುತ್ತಿದ್ದೆ.
140 ಕೋಟಿ ಭಾರತೀಯರು ಚಂದ್ರಯಾನದ ಯಶಸ್ಸಿಗಾಗಿ ಕಾಯುತ್ತಿದ್ದರು. ಪ್ರಪಂಚದ ಯಾವುದೇ ದೇಶಕ್ಕಿಂತ ಮೊದಲು ನಾವು ಚಂದ್ರನ ದಕ್ಷಿಣ ಧ್ರುವದ ಮೇಲೆ ಹೆಜ್ಜೆಯನ್ನಿಟ್ಟಿದ್ದೇವೆ.  ಚಂದ್ರಯಾನದ ಭವ್ಯ ಯಶಸ್ಸಿನಿಂದ ನನ್ನ ಜೀವನ ಧನ್ಯವಾಯಿತು. ಈ ಗೆಲುವು ದೇಶವೇ ಹೆಮ್ಮೆಪಡುವಂತ ಅಭೂತಪೂರ್ವ ಕ್ಷಣವಾಗಿದೆ.

ಚಂದ್ರಯಾನದ ಗೆಲುವು ನವ ಭಾರತದ ಗೆಲುವು. ಬ್ರಿಕ್ಸ್ ಸಭೆಗಳಲ್ಲಿ ಭಾಗವಹಿಸಲು ಹೋದರೂ ನನ್ನ ಮನಸ್ಸು ಚಂದ್ರಯಾನದತ್ತಲೇ ಇತ್ತು. ಹಲವು ವರ್ಷಗಳಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದೇನೆ. ಈ ಗೆಲುವಿನೊಂದಿಗೆ ಭಾರತ ಹೊಸ ಇತಿಹಾಸ ನಿರ್ಮಿಸಿದೆ. ಇದು ಅಮೃತ ಯುಗದಲ್ಲಿ ಭಾರತದ ಮೊದಲ ಪ್ರಮುಖ ವಿಜಯವಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಈವರೆಗೆ ಯಾವ ದೇಶವೂ ಸಾಧಿಸದ ಯಶಸ್ಸನ್ನು ನಾವು ಸಾಧಿಸಲು ಇಸ್ರೋ ವಿಜ್ಞಾನಿಗಳ ಪರಿಶ್ರಮವೇ ಕಾರಣ. ಭಾರತ ಸಾಧಿಸಿರುವ ಈ ಅದ್ಭುತ ಗೆಲುವು ಭಾರತಕ್ಕೆ ಮಾತ್ರವಲ್ಲ. ಸಮಸ್ತ ಮನುಕುಲಕ್ಕೆ ಸೇರಿದ್ದು ಎಂದು ಮೋದಿ ಹೇಳಿದರು.

ಈ ಯಶಸ್ಸಿನೊಂದಿಗೆ ಚೀನಾ, ರಷ್ಯಾ ಮತ್ತು ಅಮೆರಿಕದ ನಂತರ ಚಂದ್ರನ ಮೇಲೆ ಕಾಲಿಟ್ಟ ನಾಲ್ಕನೇ ದೇಶವಾಯಿತು. ಆದರೆ ದಕ್ಷಿಣ ಧ್ರುವಕ್ಕೆ ಕಾಲಿಟ್ಟ ಮೊದಲ ದೇಶ ಎಂಬ ಹೆಗ್ಗಳಿಕೆ ಭಾರತಕ್ಕಿದೆ. 2019 ರಲ್ಲಿ ಚಂದ್ರಯಾನ 2 ವಿಫಲವಾದ ನಂತರ, ಇಸ್ರೋ ಚಂದ್ರಯಾನ 3 ಅನ್ನು ಸವಾಲಾಗಿ ತೆಗೆದುಕೊಂಡಿತು. ರಷ್ಯಾದ ಲೂನಾ 25 ರ ಇತ್ತೀಚಿನ ವೈಫಲ್ಯದ ನಂತರ, ಇಡೀ ಜಗತ್ತು ಭಾರತದ ಚಂದ್ರಯಾನ 3 ಅನ್ನು ಕುತೂಹಲದಿಂದ ಕಾಯುತ್ತಿತ್ತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಸವ ಜಯಂತಿ ಅಂಗವಾಗಿ ಚಿತ್ರದುರ್ಗದಲ್ಲಿ ಬೈಕ್ ರ್ಯಾಲಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 09  : ಸಾಂಸ್ಕøತಿಕ ನಾಯಕ ವಿಶ್ವಗುರು ಬಸವೇಶ್ವರರ ಜಯಂತಿ ಅಂಗವಾಗಿ ವೀರಶೈವ ಸಮಾಜದಿಂದ ಗುರುವಾರ

ಮುಂಗಾರು, ಸಂಭಾವ್ಯ ಪ್ರಕೃತಿ ವಿಕೋಪ ನಿಯಂತ್ರಣ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ : ಮೇ 09 : ಶೀಘ್ರದಲ್ಲಿ ಮುಂಗಾರು ಆರಂಭಗೊಳ್ಳುವ ನಿರೀಕ್ಷೆ ಇದ್ದು, ಜಿಲ್ಲೆಯಲ್ಲಿ ಸಂಭಾವ್ಯ ಪ್ರಕೃತಿ ವಿಕೋಪಗಳ ನಿಯಂತ್ರಣಕ್ಕೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸದಾ ಸನ್ನದ್ಧರಾಗಿರುವಂತೆ ಜಿಲ್ಲಾಧಿಕಾರಿ

ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಅಧಿಸೂಚನೆ ಪ್ರಕಟ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ : ಮೇ 09 : ಜೂನ್ 21ರಂದು ವಿಧಾನ ಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಅವರ ನಿವೃತ್ತಿಯಿಂದ ತೆರವಾಗಲಿರುವ ಸ್ಥಾನಕ್ಕೆ ಚುನಾವಣಾ ಆಯೋಗ ಜೂನ್ 03ರಂದು ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಸಲು

error: Content is protected !!