ಅಂತೂ ಕೋಟ್ಯಾಂತರ ಭಾರತೀಯರು ಕಾಯುತ್ತಿದ್ದ ಕೊನೆ ಕ್ಷಣ ಯಶಸ್ವಿಯಾಗಿದೆ. ಚಂದ್ರಯಾನ 3 ಯಶಸ್ವಿಯಾಗಿ, ಲ್ಯಾಂಡ್ ಆಗಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಇಡೀ ಭಾರತೀಯರು ಸಂತಸ ಪಟ್ಟಿದ್ದಾರೆ, ಹೆಮ್ಮೆ ಪಟ್ಟಿದ್ದಾರೆ. ಯಾಕಂದ್ರೆ ಇಂಥದ್ದೊಂದು ಐತಿಹಾಸಿಕ ದಾಖಲೆ ಮಾಡಿದ್ದು ಭಾರತವೇ ಮೊದಲು ಎಂಬ ಹೆಮ್ಮೆ.
ಇಸ್ರೋ ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಅವರು ಧನ್ಯವಾದ ತಿಳಿಸಿದ್ದಾರೆ. ಇದೇ ವೇಳೆ ಮಾತನಾಡಿರುವ ಪ್ರಧಾನಿ ಮೋದಿ, ಚಂದ್ರನ ಅಂಗಳದಲ್ಲಿ ಸೂಸುತ್ರವಾಗಿ ವಿಕ್ರಂ ಲ್ಯಾಂಡರ್ ಇಳಿದಿದೆ. ಇದೊಂದು ಐತಿಹಾಸಿಕ ಕ್ಷಣ. ಈಗ ಭಾರತ ಚಂದ್ರನ ಮೇಲಿದೆ. ಇಸ್ರೋ ವಿಜ್ಞಾನಿಗಳು ಇತಿಹಾಸ ಸೃಷ್ಟಿಸಿದ್ದಾರೆ. ಐತಿಹಾಸಿಕ ಕ್ಷಣಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಬಹುದೂರದಲ್ಲಿರುವ ಚಂದ್ರನ ತಲುಪಲು ನಾವೂ ಯಶಸ್ವಿಯಾಗಿದ್ದೇವೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಸಲ್ಲುತ್ತದೆ ಎಂದಿದ್ದಾರೆ.
ಇದು ನಮ್ಮ ಯಶಸ್ಸು ಮಾತ್ರವಲ್ಲ ನಿಮ್ಮೆಲ್ಲರ ಗೆಲುವು. ಇಂದಿನಿಂದ ಚಂದ್ರ ಬಗೆಗಿನ ಕಥೆಗಳು ಬದಲಾಗುತ್ತವೆ. ಚಂದ್ರನ ಬಗೆಗಿರುವ ಊಹಾಪೋಹಗಳು ಬದಲಾಗುತ್ತವೆ ಎಂದು ಖುಷಿಯಿಂದ ಮಾತನಾಡಿದ್ದಾರೆ. ಇದೇ ವೇಳೆ ಚಂದ್ರಯಾನ 3 ಗಾಗಿ ಕಷ್ಟಪಟ್ಟ ಎಲ್ಲಾ ವಿಜ್ಞಾನಿಗಳು ತಮ್ಮ ಅನುಭವ ತೋಡಿಕೊಂಡಿದ್ದಾರೆ. ಮನಸ್ಸಿನಲ್ಲಿದ್ದ ಭಾರವನ್ನ ಇಳಿಸಿ ಎಲ್ಲರೂ ನಿರಾಳರಾಗಿದ್ದಾರೆ.