ಇಡೀ ಭಾರತವೇ ಕಾಯುತ್ತಿರುವಂತ ಸುಂದರ ಗಳಿಗೆಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇದೆ. ಇಂದು ಸಂಜೆ ಚಂದ್ರ ದಕ್ಷಿಣ ಧ್ರುವದ ಮೇಲೆ ವಿಕ್ರಂ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಗೆ ಸಮಯ ನಿಗದಿಯಾಗಿದೆ. ಈಗಾಗಲೇ ಭಾರತದಾದ್ಯಂತ ಎಲ್ಲರೂ ಚಂದ್ರಯಾನ 3 ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ದೇವರುಗಳಿಗೆ ವಿಶೇಷ ಪೂಜೆ ಮಾಡಿಸಿದ್ದಾರೆ. ಇದೀಗ ಚಂದ್ರಯಾನ 3 ಬಗ್ಗೆ ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಕೋಡಿಮಠದ ಶ್ರೀಗಳ ಭವಿಷ್ಯ ಬಹುತೇಕ ಸಮಯದಲ್ಲಿ ನಿಜವಾಗಿದೆ. ಈಗ ಚಂದ್ರಯಾನ3 ಬಗ್ಗೆ ನುಡಿದಿರುವ ಭವಿಷ್ಯವೂ ನಿಜವಾಗಲಿದೆ ಎಂದು ಭಕ್ತರು ನಂಬಿದ್ದಾರೆ. ಭಾರತ್ ಮಹತ್ವಪೂರ್ಣ ಚಂದ್ರಯಾನ3 ಯಶಸ್ವಿಯಾಗಲಿದೆ ಎಂದು ಹೇಳಿದ್ದಾರೆ. ಕೋಡಿಮಠದ ಶ್ರೀಗಳ ಈ ಭವಿಷ್ಯವಾಣಿ ಕೇಳಿ ಇಸ್ರೋ ಅಧಿಕಾರಿಗಳಿಗೆ ಕೊಂಚ ನಿರಾಳವೆನಿಸಿದೆ.
ಈವರೆಗೂ ಚಂದ್ರನ ಅಂಗಳದಲ್ಲಿ ಮೂರು ದೇಶಗಳು ಮಾತ್ರ ಯಶಸ್ವಿಯಾಗಿ ನೌಕೆಯನ್ನು ಇಳಿಸಿವೆ. ಅಮೆರಿಕ, ಚೀನಾ, ರಷ್ಯಾ ನಂತರ ಚಂದ್ರನ ಮೇಲೆ ನೌಕೆ ಇಳಿಸುವ ನಾಲ್ಕನೇ ದೇಶವಾಗಲು ಭಾರತ ಕಾತರವಾಗಿದೆ. ಚಂದ್ರನ ದಕ್ಷಿಣ ಧೃವದಲ್ಲಿ ಚಂದ್ರಯಾನ 3 ನೌಕೆ ಇಳಿಯಲಿದ್ದು, ಸಾಫ್ಟ್ ಲ್ಯಾಂಡಿಂಗ್ ಮಾಡಿದರೆ, ಈ ಭಾಗದಲ್ಲಿ ನೌಕೆ ಇಳಿಸಿದ ಮೊದಲ ದೇಶವಾಗಲಿದೆ. ಇಂದು ಸಂಜೆ ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗಲಿದ್ದಾನೆ.