ಚಂದ್ರಯಾನ 3 ಯಶಸ್ಸಿಗಾಗಿ ಚಿತ್ರದುರ್ಗ, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಹಲವೆಡೆ ವಿಶೇಷ ಪೂಜೆ

2 Min Read

 

ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಂ ಲ್ಯಾಂಡರ್ ಲ್ಯಾಂಡ್ ಆಗೋದಕ್ಕೆ ಇನ್ನೂ ಕೆಲವೇ ಗಂಟೆಗಳು ಬಾಕಿ ಇದೆ. ಈ ಸುಂದರ ಘಳಿಗೆಯನ್ನು ವೀಕ್ಷಿಸಲು ಬೆಂಗಳೂರಿನ ನೆಹರು ತಾರಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಈ ಗಳಿಗೆಯನ್ನು ಕಣ್ತುಂಬಿಕೊಳ್ಳಬಹುದು. ಜೊತೆಗೆ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್ ಆಗಲೆಂದು ಬಹುತೇಕ ಕಡೆಯಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.

ವಿಶ್ವ ಹಿಂದೂ ಪರಿಷದ್ ಬಜರಂಗದಳ ನೇತೃತ್ವದಲ್ಲಿ ಆನೆ ಬಾಗಿಲು ಶ್ರೀ ಗಣಪತಿ ದೇವಸ್ಥಾನದಲ್ಲಿ ಚಂದ್ರಯಾನ 3 ಯಶಸ್ವಿಯಾಗಲೆಂದು ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ, ಹಿಂದೂ ಮಹಾಗಣಪತಿಯ ಅಧ್ಯಕ್ಷರಾದ ಜಿ.ಎಂ. ಸುರೇಶ್. ಸಮಿತಿಯ ಮಾರ್ಗದರ್ಶಕರಾದ ಬದ್ರಿನಾಥ್, ಪಿ.ರುದ್ರೇಶ್, ಜಿಲ್ಲಾ ಕಾರ್ಯದರ್ಶಿ ವಿಶ್ವ ಹಿಂದೂ ಪರಿಷದ್, ಕೇಶವ್ ಜಿಲ್ಲಾ ಸಹ ಕಾರ್ಯದರ್ಶಿ , ಸಂದೀಪ್ ಜಿಲ್ಲಾ ಸಂಯೋಜಕರು ಬಜರಂಗದಳ, ಶ್ರೀನಿವಾಸ್ ನಗರ ಅಧ್ಯಕ್ಷರು ವಿಶ್ವ ಹಿಂದೂ ಪರಿಷದ್, ರಂಗಸ್ವಾಮಿ ನಗರ ಸಹ ಕಾರ್ಯದರ್ಶಿ ,ಶಶಿಧರ್ ಗ್ರಾಮಾಂತರ ಅಧ್ಯಕ್ಷರು ವಿಶ್ವ ಹಿಂದೂ ಪರಿಷದ್, ಬಜರಂಗದಳ ಪ್ರಮುಖರಾದ ವಿಠಲ್,ರಾಜೇಶ್, ಕಿಶೋರ್, ಪ್ರಮೋದ್ ,ಸಂಪತ್ , ಇದ್ದರು.

ಚಿತ್ರದುರ್ಗದ ನೀಲಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

 

ಇನ್ನೂ ಶಿವಮೊಗ್ಗದ ಜಿಲ್ಲೆಯ ಸಾಗರ ತಾಲೂಕಿನ ಸಿಗಂಧೂರು ಚೌಡೇಶ್ವರಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ದುರ್ಗಾ ಸಪ್ತಸತಿ ಪಾರಾಯಣ, ಚಂಡಿಕಾ ಹೋಮ ಮಾಡಲಾಗಿದೆ. ಎಲ್ಲರೂ ವಿಕ್ರಂ ಲ್ಯಾಂಡರ್ ಸೇಫ್ ಆಗಿ ಲ್ಯಾಂಡ್ ಆಗಲಿ ಎಂದೇ ಪ್ರಾರ್ಥಿಸಿದ್ದಾರೆ.

ಹುಬ್ಬಳ್ಳಿಯ ಶ್ರೀಸಿದ್ದರೂಢ ಮಠದಲ್ಲೂ ಪೂಜೆ ನಡೆದಿದೆ. ಕರ್ನಾಟಕ ರಕ್ಷಣಾ ವೇದಿಕೆಯವರಿಂದ ಪೂಜೆ ನಡೆದಿದ್ದು, ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಿದ್ದಾರೆ. ರಾಕೆಟ್ ಭಾವಚಿತ್ರವಿಡಿದು ಯಶಸ್ಸಿಗಾಗಿ ಪ್ರಾರ್ಥಿಸಿದ್ದಾರೆ.

ಇನ್ನು ಬೆಂಗಳೂರಿನ ಗವಿಗಂಗಾದರೇಶ್ವರ ದೇವಸ್ಥಾನದಲ್ಲಿ ಹೋಮ-ಹವನ ನಡೆಯುತ್ತಿದೆ.  ಇವತ್ತು ಇಡೀ ವಿಶ್ವವೇ ಗಮನಿಸುವ ಸನ್ನಿವೇಶ ಬಂದಿದೆ. ಚಂದ್ರನ ಮೇಲೆ ಚಂದ್ರಯಾನ-3 ಯಶಸ್ವಿಯಾಗಲಿ ಎಂದು ಪೂಜೆ ಮಾಡಲಾಗಿದೆ. ನವಗ್ರಹಗಳ ಪೂಜೆ ಹಾಗೂ ಚಂದ್ರ ಹೋಮ ನಡೆಯುತ್ತಿದೆ. ಸುಮಾರು ಒಂದು ಗಂಟೆಗಳ ಕಾಲ ಹೋಮ ನಡೆಯಲಿದೆ. ಯಾವುದೇ ಅಡೆತಡೆಗಳು ಬಾರದಂತೆ ನಿರ್ವಿಘ್ನವಾಗಿ ಚಂದ್ರಯಾನ ಕ್ಕೆ ಯಶಸ್ಸು ಸಿಗಲಿ ಎಂದು ಪ್ರಧಾನ ಆರ್ಚಕ ಸೋಮಸುಂದರ ದೀಕ್ಷಿತ್ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *