ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಆ. 21 :
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಮಳೆ ಕೊರತೆಯಾಗಿ ಎಲ್ಲಾ ಬೆಳೆಗಳು ನಷ್ಟವಾಗಿರುವುದರಿಂದ ಚಿತ್ರದುರ್ಗ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆಯನ್ನು ನಡೆಸಿತು.
ಈ ವರ್ಷ ಬಹಳ ವಿಳಂಬವಾಗಿ ಮಳೆಗಾಲ ಪ್ರಾರಂಭವಾಗಿದ್ದಲ್ಲದೆ ರೈತರ ಬಿತ್ತನೆ ಕೈಗೊಳ್ಳಲು ಬಹಳ ವಿಳಂಬವಾಯಿತು, ನಂತರ ಬೆಳೆಗಳ ಬೆಳವಣಿಗೆಗೆ ತಕ್ಕಂತೆ ಮಳೆ ಬಾರದೆ ಬಿತ್ತಿದ ಎಲ್ಲಾ ಬೆಳೆಗಳು ಈಗಾಗಲೇ ಎಲ್ಲಾ ಕಡೆ ಒಣಗಲು ಪ್ರಾರಂಭಿಸಿವೆ. ಕೆಲ ಭಾಗಗಳಲ್ಲಿ ಈ ದಿನವೇ ಮಳೆ ಬಂದರೂ ಬೆಳೆಯಾಗುವುದಿಲ್ಲ. ಅಲ್ಲದೇ ಹಿಂಗಾರು ಬಿತ್ತನೆಗೂ ವಿಳಂಬವಾಗುತ್ತಿದೆ. ಅಲ್ಲದೆ ಈಗಾಗಲೆ ಬೇಸಿಗೆಯಂತಹ ವಾತಾವರಣ ನಿರ್ಮಾಣವಾಗಿ ಭೂಮಿಯಲ್ಲಿ ತೇವಾಂಶದ ತೀವ್ರ ಕೊರತೆಯುಂಟಾಗಿದೆ. ಪರಿಣಾಮವಾಗಿ ಬಿತ್ತನೆ ಮಾಡಿದ ಎಲ್ಲಾ ರೈತರೂ ಸಾಲದ ಸುಳಿಗೆ ಸಿಲುಕಿಕೊಂಡಿದ್ದಾರೆ. ಆ ಕಾರಣ ಕೂಡಲೆ ಕರ್ನಾಟಕ ಸರ್ಕಾರ ಚಿತ್ರದುರ್ಗ ಜಿಲ್ಲೆಯನ್ನು ಬರಗಾಲ ಪೀಡಿತವೆಂದು ಘೋಷಿಸಿ ಅಗತ್ಯ ಕ್ರಮಗಳನ್ನು ಕೈಗೊಂಡು ರೈತರ ನೆರವಿಗೆ ಧಾವಿಸಬೇಕೆಂದು ಚಿತ್ರದುರ್ಗ ಜಿಲ್ಲಾ ರೈತರ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ತಡವಾಗಿ ಪ್ರಾರಂಭವಾಗಿ ಜುಲೈ ತಿಂಗಳಲ್ಲಿ ಅಲ್ಪ ಪ್ರಮಾಣದ ಮಳೆ ಬಿದ್ದ ಪರಿಣಾಮ ರೈತರು ಮೆಕ್ಕೆಜೋಳ, ಶೇಂಗಾ, ರಾಗಿ, ಸೂರ್ಯಕಾಂತಿ ಅನೇಕ ಮಳೆಯಾಶ್ರಿತ ಭಿತ್ತನೆ ಮಾಡಿ ಸುಮಾರು 20 ದಿನಗಳು ಕಳೆದರು ಮಳೆ ಬಂದಿರುವುದಿಲ್ಲ. ಹುಟ್ಟಿದ ಬೆಳೆಗಳಿಗೆ ಬಿಸಿಲಿನ ತಾಪ ಹೆಚ್ಚಾದ ಪರಿಣಾಮ ಬೆಳೆಗಳೆಲ್ಲಾ ಒಣಗಲು ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ.
ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆ ಇರುವ ರೈತರಿಗೆ ಅನುಕೂಲ ಮಾಡಲು ಗುಣಮಟ್ಟದ ಅಗತ್ಯ ವಿದ್ಯುತ್ ಸರಬರಾಜು ಮಾಡಲು ಸಂಪೂರ್ಣ ಕ್ರಮ ಕೈಗೊಳ್ಳಬೇಕು. ರೈತರು ಗುಳೇ ಹೋಗುವುದನ್ನು ತಪ್ಪಿಸಲು ಗ್ರಾಮೀಣ, ಉದ್ಯೋಗ ಖಾತ್ರಿಗಳಿಗೆ ಕಡ್ಡಾಯವಾಗಿ ಯಂತ್ರಗಳ ಬಳಕೆಯನ್ನು ನಿಷೇಧಿಸಿ, ಜನರಿಗೆ ಕೆಲಸ ಒದಗಿಸಬೇಕು ದನಕರುಗಳಿಗೆ ಪ್ರತಿ ಹಳ್ಳಿಗೆ ಮೇವಿನ ಸರಬರಾಜು ಮಾಡಬೇಕು. ಬೆಳೆನಷ್ಟವಾದ ಎಲ್ಲಾ ರೈತರಿಗೆ ಬೆಳೆ ವಿಮೆ ಮತ್ತು ನಷ್ಟ ಪರಿಹಾರವನ್ನು ತುರ್ತಾಗಿ ಒದಗಿಸಬೇಕು.
ಬ್ಯಾಂಕುಗಳು: ರೈತರ ಸಾಲಗಳ ವಸೂಲಿಗೆ ಯಾವುದೇ ಕಿರುಕುಳ ಕೊಡದೇ ಇರುವುದು ಮತ್ತು ಸರ್ಕಾರ ಈ ವರ್ಷದ ಬೆಳೆಸಲು ಮನ್ನಾ ಮಾಡುವುದು.ಈ ವರ್ಷ ಮಳೆ ಕೊರತೆಯಿಂದ ತೋಟಗಾರಿಕೆ ಬೆಳೆಗಳಿಗೆ ಮಳೆ ಕೊರತೆಯುಂಟಾಗುವ ಕಾರಣ ಬೋರ್‍ಟೆಲ್‍ಗಳಲ್ಲಿ ನೀರಿನ ಕೊರತೆಯುಂಟಾಗುತ್ತದೆ. ಹೀಗಾಗಿ ಎಲ್ಲಾ ತೋಟಗಾರಿಕೆ ಬೆಳೆಗಳ ರೈತರಿಗೆ ನಷ್ಟ ಪರಿಹಾರವನ್ನು ಕೊಡಲು ಕೈ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಭದ್ರಾ ಮೇಲ್ದಂಡೆಯಂತಹ ಮತ್ತು ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮಗಳ ಮುಖಾಂತರ ಶಾಶ್ವತ ಬರ ವಿರೋಧ ಕ್ರಮಗಳನ್ನು ಕೈಗೊಳ್ಳಬೇಕು. ಮತ್ತು ಕಡಿಮೆ ನೀರಿನಲ್ಲಿ ಬೆಳೆಸುವ ಸಿರಿಧಾನ್ಯಗಳ ಬೆಳೆಗಳಿಗೆ ಪ್ರೋತ್ಸಾಹಿಸ ಸಹಾಯಧನ ಕೊಡಬೇಕು. ಜಿಲ್ಲೆಯ ಅಕ್ಷಯ ಪಾತ್ರೆ ವಾಣಿವಿಲಾಸ ಸಾಗರವನ್ನು ತುಂಬಿಸಿ ಜಿಲ್ಲೆಯನ್ನು ಶಾಶ್ವತ ಸಮಗ ನೀರಾವರಿ ಮಾಡುವ ಮುಖಾಂತರ ಜಿಲ್ಲೆಯ ರೈತರನ್ನು ಬರಗಾಲದ ದವಡೆಯಿಂದ ಪಾರು ಮಾಡಬೇಕು.
ಹೊಳಲ್ಕೆರೆ ತಾಲ್ಲೂಕಿನಲ್ಲಿ ಅರಣ್ಯಾಧಿಕಾರಿಗಳು ಟಿ, ಎಮ್ಮಿಗನೂರಿನಿಂದ ಕಂಡಿ ಸರದವರೆಗೆ ಇರುವ ರೂಢಿಗತ ಪಾರಿಯನ್ನು ಅಕ್ರಮವಾಗಿ ಜಾಲರಿ ಬೇಲಿಯನ್ನು ನಿರ್ಮಿಸಿ ಸುಮಾರು 40 ಜನ ರೈತರ ಕೃಷಿ ಕಾರ್ಯಗಳಿಗೆ ತೊಂದರೆ ಮಾಡಿದ್ದಾರೆ. ಆದ್ದರಿಂದ ಈ ಅರಣ್ಯಾಧಿಕಾರಿಗಳ ದುರಾಡಳಿತದ ವಿರುದ್ಧ ಶಿಸ್ತಿನ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕು.
ಚಿತ್ರದುರ್ಗ ತಾಲ್ಲೂಕು ನೋಂದಾವಣೆ ಕಛೇರಿಯಲ್ಲಿ ಬಹಳ ಭ್ರಷ್ಟಚಾರ ನಡೆಯುತ್ತಿದ್ದು, ರೈತರಿಗೆ ಮಧ್ಯವರ್ತಿಗಳಾದ ಅಭಿಷೇಕ್ ಮತ್ತು ತಿಪ್ಪೇಸ್ವಾಮಿ ಹಾಗೂ ಇತರೆ ಮಧ್ಯವರ್ತಿಗಳಿಂದ ನೊಂದಾವಣೆಯಾದ ಪತ್ರಗಳಿಗೆ ಹಣ ವಸೂಲಿ ಯನ್ನು ನಗದಾಗಿ ಮತ್ತು ಫೋನ್ ಪೇ ಯಾಗಿ ಹಣವನ್ನು ಪಡೆದಿರುತ್ತಾರೆ. ಸದರಿಯವರ ವಿರುದ್ಧ ಸೂಕ್ತ ಕಾನೂನು ಕ್ರಮ ವಹಿಸಬೇಕು ಕೂಡಲೇ ರೈತರಿಗೆ ರೈತರ ಬೆಳೆ ವಿಮೆ ಬೆಳೆ ಪರಿಹಾರವನ್ನು ಬಿಡುಗಡೆ ಮಾಡಬೇಕು. ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡಬೇಕು. ಬರಗಾಲ ಇರುವುದಿಂದ ಕೂಡಲೇ ಜಾನುವಾರುಗಳಿಗೆ ಗೋಶಾಲೆ ತೆರೆಯಬೇಕು. ಎಂದು ಒತ್ತಾಯಿಸಲಾಯಿತು.
ಜಿಲ್ಲೆಯಲ್ಲಿ ಮಳೆಯು ಬಾರದಿದ್ದು ಇಲ್ಲಿ ಯಾವುದೇ ನದಿ, ಚಾನಲುಗಳು ಇಲ್ಲದಿರುವ ಬೋರ್ ವೆಲ್‍ನ್ನು ನಂಬಿಕೊಂಡು ರೈತರು ತರಕಾರಿ ಮತ್ತು ಹೂವುಗಳು ಬೆಳೆಗಳನ್ನು ಹಾಕಿಕೊಂಡಿದ್ದು, ಸರಿಯಾದ ಸಮರ್ಪಕವಾದ ವಿದ್ಯುತ್ ವಿತರಣೆಯಾಗುತ್ತಿಲ್ಲ.
ಸುಮಾರು 20 ದಿನಗಳಿಂದ ದಿನಕ್ಕೆ 7ಗಂಟೆ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿ ಪ್ರಸ್ತುತ ಸರಿಯಾಗಿ ಮೂರು ಗಂಟೆಯಾಗಿ ಕಾಲವು ಸಹ ವಿದ್ಯುತ್ ಒದಗಿಸುತ್ತಿಲ್ಲ. ರೈತರು ವಿದ್ಯುತ್ ನಂಬಿಕೊಂಡು ಬೋರ್‍ವಲ್ ನಂಬಿಕೊಂಡು ಈ ಕಡೆ ಮಳೆಯು ಇಲ್ಲ ವಿದ್ಯುತ್ ಸರಿಯಾಗಿ ನೀಡುತ್ತಿಲ್ಲ. ಆದ್ದರಿಂದ ತಾವುಗಳು ಕೂಡಲೇ ಕ್ರಮವಹಿಸಿ ರೈತರಿಗೆ 7ಗಂಟೆ ಸಮರ್ಪಕವಾದ ವಿದ್ಯುತ್‍ನ್ನು ಒದಗಿಸಬೇಕು ಹಾಗೂ ಬೋರ್‍ವೆಲ್‍ಗಳಿಗೆ ಆಧಾರ್ ಲಿಂಕ್ ಮಾಡುತ್ತಿದೆ. ಇದನ್ನು ಕೂಡಲೇ ತಡೆಹಿಡಿಯುವಂತೆ ಒತ್ತಾಯಿಸಲಾಯಿತು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಡಿ.ಎಸ್.ಹಳ್ಳಿ ಮಲ್ಲಿಕಾರ್ಜನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮರೆಡ್ಡಿ, ತಾಲ್ಲೂಕು ಅಧ್ಯಕ್ಷರಾದ ಧನಂಜಯ, ಮುಖಂಡರಾದ ಈಚಘಟ್ಟದ ಸಿದ್ದವೀರಪ್ಪ, ಶೇಷಣ್ಣ ರೆಡ್ಡಿ, ಶಂಕರಲಿಂಗಪ್ಪ, ದಿವ್ಯ ಜ್ಯೋತಿ, ಬಸವರಾಜು, ರುದ್ರಪ್ಪರೆಡ್ಡಿ, ಮಂಜುನಾಥ್, ಸತೀಶ್, ರವಿಶಂಕರ್ ಸತೀಶ್, ಪಿ.ಭೂತಯ್ಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಎಂಬಿತಿಪ್ಪೇಸ್ವಾಮಿ, ನಾಗರಾಜು, ಹಂಪಣ್ಣ, ತಿಪ್ಪೇಸ್ವಾಮಿ, ರೆಹಮಾನ್ ನೂರುಲ್ಲಾ ಸಾಬ್, ರಾಜಣ್ಣ, ದಸ್ತಗಿರ್ ಸಾಬ್, ಗೌಸ್ ಪೀರ್, ಕುಮಾರಸ್ವಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು.