Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನವೋದಯ ವಿದ್ಯಾಲಯ: ಬಾಲಕಿಯರಿಗೆ ವೈಜ್ಞಾನಿಕ ಸಲಕರಣೆ ವಿತರಣೆ

---Advertisement---

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ, ಆ.21: ಹಿರಿಯೂರು ತಾಲ್ಲೂಕಿನ ಉಡುವಳ್ಳಿಯ ಜವಾಹರ ನವೋದಯ ವಿದ್ಯಾಲಯದಲ್ಲಿ ಈಚೆಗೆ ಕೇಂದ್ರ ಸರ್ಕಾರದ ವಿಜ್ಞಾನ  ಮತ್ತು ತಂತ್ರಜ್ಞಾನ ವಿಭಾಗದ ಅಡಿಯಲ್ಲಿ ಬಾಲಕಿಯರಿಗೆ ವೈಜ್ಞಾನಿಕ ಅರಿವು ಮತ್ತು ವೈಜ್ಞಾನಿಕ ಸಬಲೀಕರಣ ಕಾರ್ಯಕ್ರಮದಲ್ಲಿ ನವೋದಯ ವಿದ್ಯಾಲಯದ ಬಾಲಕಿಯರಿಗೆ ವೈಜ್ಞಾನಿಕ ಸಲಕರಣೆಗಳ ಕಿಟ್ ವಿತರಿಸಲಾಯಿತು.

ಬಾಲಕಿಯರಿಗೆ ವೈಜ್ಞಾನಿಕ ಅರಿವು ಮೂಡಿಸುವ ಮತ್ತು  ವೈಜ್ಞಾನಿಕವಾಗಿ ಲಿಂಗ ತಾರತಮ್ಯ ತೊಡೆದು ಹಾಕುವುದು ಈ ಕಾರ್ಯಕ್ರಮದ ವಿಶೇಷವಾಗಿದೆ. ಈ ಕಾರ್ಯಕ್ರಮದಡಿಯಲ್ಲಿ ನವೋದಯ ವಿದ್ಯಾಲಯದ 50  ಬಾಲಕಿರಿಗೆ ವೈಜ್ಞಾನಿಕ ಸಲಕರಣೆಗಳ ಕಿಟ್‍ನ್ನು ವಿದ್ಯಾಲಯದ ಪ್ರಾಂಶುಪಾಲ ಡ್ಯಾನಿಯಲ್ ರೇತನ್ ಕುಮಾರ ವಿತರಿಸಿದರು.

“ಬಾಲಕಿಯರ ವೈಜ್ಞಾನಿಕ ಮನೋಭಾವ ಸದೃಡಗೊಳಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ.  ಬಾಲಕಿಯರು ಈ ವೈಜ್ಞಾನಿಕ ಸಲಕರಣೆ ಬಳಸಿಕೊಂಡು ಚಟುವಟಿಕೆಗಳ ಮೂಲಕ ಕಲಿಯುತ್ತಾರೆ. ಈ ವೈಜ್ಞಾನಿಕ ಸಲಕರಣೆಗಳನ್ನು ಸದುಪಯೋಗ ಪಡಿಸಿಕೊಳ್ಳಿ. ಇದರಿಂದ  ನಿಮ್ಮ ವೈಜ್ಞಾನಿಕ ಮನೋಭಾವ ಮತ್ತು ಕ್ರಿಯಾಶಿಲತೆ ಹೆಚ್ಚಾಗುತ್ತದೆ ಎಂದು ನವೋದಯ ವಿದ್ಯಾಲಯದ ಪ್ರಾಂಶುಪಾಲ ಡ್ಯಾನಿಯಲ್ ರೇತನ್ ಕುಮಾರ ತಿಳಿಸಿದರು.

ವಿಜ್ಞಾನಜೋತಿ  ಕಾರ್ಯಕ್ರಮದ ಅಡಿಯಲ್ಲಿ  ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...