ಮೈಸೂರು: ನಾಡಹಬ್ಬ ದಸರಾಗೆ ಈಗಾಗಲೇ ತಯಾರಿ ಶುರುವಾಗಿದೆ. ಅಕ್ಟೋಬರ್ 15 ರಿಂದ ಅಕ್ಟೋಬರ್ 24ರ ತನಕ ದಸರಾ ಉತ್ಸವ ನಡೆಯಲಿದೆ. ಹೀಗಾಗಿ ಇಂದಿನಿಂದಲೇ ತಯಾರಿ ಶುರುವಾಗಿದೆ. ಗಜಪಡೆಗಳ ಸ್ವಾಗತಕ್ಕೆ ಮೈಸೂರು ನಗರ ಸಜ್ಜಾಗಿದೆ.
ಸೆಪ್ಟೆಂಬರ್1 ರಿಂದ ಗಜಪಯಣ ಸಮಾರಂಭ ಆರಂಭವಾಗುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಗಜಪಡೆ ಮೈಸೂರಿಗೆ ಆಗಮಿಸಲಿದೆ. ಗಜಪಡೆ ವಾಸ್ತವ್ಯಕ್ಕಾಗಿ ಈಗಾಗಲೇ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಾಣ ಮಾಡಿದೆ. ದಸರಾ ಆನೆಗಳಿಗೆ ಮಾತ್ರವಲ್ಲ, ಮಾವುತರು, ಅವರ ಕುಟುಂಬಸ್ಥರಿಗೂ ಶೆಡ್ ಗಳ ನಿರ್ಮಾಣ ಮಾಡಲಾಗುತ್ತಿದೆ.
ಆನೆಗಳ ಜೊತೆಗೆ ಮಾವುತರು, ಕಾವಾಡಿಗಳು ಕೂಡ ಮೈಸೂರಿಗೆ ಅಗಮಿಸಲಿದ್ದಾರೆ. ಸಾಂಪ್ರದಾಯಿಕವಾಗಿ ಗಜಪಡೆಗೆ ಜಿಲ್ಲಾಡಳಿತ ಸ್ವಾಗತ ಕೋರಲಿದೆ. ಜಂಬೂಸವಾರಿ ಮೆರವಣಿಗೆಗೆ ಕ್ಯಾಪ್ಟನ್ ಅಭಿಮನ್ಯು ರೆಡಿಯಾಗುತ್ತಿದ್ದು, 750 ಕೆಜಿಯ ಚಿನ್ನದ ಅಂಬಾರಿ ಹೊತ್ತು ಹೆಜ್ಜೆ ಹಾಕಲಿದ್ದಾನೆ ಅಭಿಮನ್ಯು.