ಸುದ್ದಿಒನ್ ವೆಬ್ ಡೆಸ್ಕ್
ಇದು ಭಾರತೀಯರ ಕನಸು. ಇಸ್ರೋದಿಂದ ಆರಂಭವಾದ ಚಂದ್ರಯಾನ 3 ಯಶಸ್ಸಿಗೆ ಕೆಲವೇ ಗಂಟೆಗಳು ಬಾಕಿ ಇದೆ. ವಿಕ್ರಂ ಲ್ಯಾಂಡರ್ ಇಂದು ಕೂಡ ಹೊಸದಾಗಿ ಫೋಟೋಗಳನ್ನು ಕಳುಹಿಸಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯಲು ಮತ್ತಷ್ಟು ಹತ್ತಿರವಾಗಿರುವ ವಿಕ್ರಂ ಹೊಸ ಫೋಟೋ ಸೆರೆಹಿಡಿದು ಕಳುಹಿಸಿದೆ.
Chandrayaan-3 Mission:
Here are the images of
Lunar far side area
captured by the
Lander Hazard Detection and Avoidance Camera (LHDAC).This camera that assists in locating a safe landing area — without boulders or deep trenches — during the descent is developed by ISRO… pic.twitter.com/rwWhrNFhHB
— ISRO (@isro) August 21, 2023
ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಮತ್ತು ಅವಾಯ್ ಡೆನ್ಸ್ ಕ್ಯಾಮಾರ ಈ ಫೋಟೋಗಳನ್ನು ಸೆರೆ ಹಿಡಿದು ಕಳುಹಿಸಿದೆ. ಈ ಕ್ಯಾಮಾರ ಮೂಲಕವೇ ಸಾಕಷ್ಟು ಉಪಯೋಗವಾಗಲಿದೆ. ಚಂದ್ರನ ಮೇಲೆ ಗುಂಡಿ, ಕುಳಿ ಸೇರಿದಂತೆ ಯಾವುದೇ ಅಡ್ಡಿಇಲ್ಲದೆ ಸೇಫ್ ಲ್ಯಾಂಡಿಂಗ್ ಮಾಡಲು ಪ್ರದೇಶವನ್ನು ಹುಡುಕಲು ಇದು ನೆರವಾಗುತ್ತದೆ.
ಚಂದ್ರಯಾನ-3ಅನ್ನು ಜುಲೈ 14ರಂದು ಉಡಾವಣೆ ಮಾಡಲಾಗಿತ್ತು. ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಆಗುವ ಅಮೃತಘಳಿಗೆಗೆ ಕ್ಷಣಗಣನೆ ಆರಂಭ ಆಗಿದೆ. ಇಡೀ ವಿಶ್ವವೇ ಇಸ್ರೋದ ಸಾಧನೆ ನೋಡಲು ಕಾತರಗೊಂಡಿದೆ. ಆಗಸ್ಟ್ 23 ರಂದು ಸಂಜೆ 6 ಗಂಟೆಗೆ ನೌಕೆ ಸಾಫ್ಟ್ ಲ್ಯಾಂಡಿಂಗ್ ಆಗಲಿದೆ. ಈ ಒಂದು ಗಳಿಗೆಗಾಇ ಎಲ್ಲರೂ ಕಾಯುತ್ತಿದ್ದಾರೆ. ಇಸ್ರೋ ಅಂತು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಈ ಯೋಜನೆಯನ್ನು ಕಾಪಾಡುತ್ತಿದೆ. ಆ ಕ್ಷಣಕ್ಕೆ ಇನ್ನು ಒಂದೇ ದಿನ ಬಾಕಿ ಇದೆ.
Chandrayaan-3 Mission:
Here are the images of
Lunar far side area
captured by the
Lander Hazard Detection and Avoidance Camera (LHDAC).This camera that assists in locating a safe landing area — without boulders or deep trenches — during the descent is developed by ISRO… pic.twitter.com/rwWhrNFhHB
— ISRO (@isro) August 21, 2023