ಕರ್ನಾಟಕದಲ್ಲಿ ಮಳೆಯ ಪರಿಸ್ಥಿತಿ ಹೇಗಿದೆ ಅನ್ನೋದು ತಿಳಿದಿದ್ದರು ಸಹ ತಮಿಳುನಾಡು ತನ್ನ ಕ್ಯಾತೆ ನಿಲ್ಲಿಸಿಲ್ಲ. ನಮಗೆ ಬರಬೇಕಾದ ನೀರನ್ನು ಬಿಡಬೇಕು ಎಂದು ತಮಿಳುನಾಡು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಇಂದು ತುರ್ತು ಅರ್ಜಿ ವಿಚಾರಣೆ ಮಾಡುವುದಕ್ಕೆ ತಿಳಿಸಿತ್ತು. ಅದರಂತೆ ಸುಪ್ರೀಂ ಕೋರ್ಟ್ ನಲ್ಲಿ ಹೊಸ ಪೀಠ ರಚನೆ ಮಾಡಿ, ಆ ಮೂಲಕ ಸಮಸ್ಯೆಗಳನ್ನು ಹೊಸ ಪೀಠದ ಮುಂದೆ ಹೇಳಿಕೊಳ್ಳಲು ಸೂಚಿಸಿದೆ.
ಈ ಕಡೆ ತಮಿಳುನಾಡಿನ ನಡೆಗೆ ಕೋಪಗೊಂಡ ಮಂಡ್ಯ, ಮೈಸೂರು ಜನ ಇದೀಗ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ನಾಯಕರು ಇಂದು ಪ್ರತಿಭಟನೆಗೆ ಮುಂದಾಗಿದ್ದಾರೆ. ಪ್ರತಿಭಟನೆಯಲ್ಲಿ ಮೈಸೂರು, ಬೆಂಗಳೂರು ಸಂಸದರು ಭಾಗಿಯಾಗಿದ್ದು, ತೇಜಸ್ವಿ ಸೂರ್ಯ, ಪಿಸಿ ಮೋಹನ್, ಸುಮಲತಾ ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ.
ಈಗಾಗಲೇ ರೈತರೆಲ್ಲ ಪ್ರತಿಭಟನೆ ನಡೆಸಿದ್ದರು. ಇಂದು ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯ ಸರ್ಕಾರದ ನಡೆಯನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರು ಬಿಡುಗಡೆ ವಿರೋಧಿಸಿ, ಮಂಡ್ಯದ ಸಂಜಯ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.