ಮಳೆ ಇಲ್ಲದೆ ಇದ್ದರೂ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರು ಮಾತ್ರ ನಿಂತಿಲ್ಲ. ದಿನೇ ದಿನೇ ಕಾವೇರಿಯ ಒಡಲು ಮಾತ್ರ ಬತ್ತುತ್ತಿದೆ. ಸದ್ಯ ಕಾವೇರಿಯಲ್ಲಿರುವುದು ಕೇವಲ 106 ಅಡಿ ಮಾತ್ರ. ಕಾವೇರಿಯ ಒಡಲು ಬರಿದಾಗುತ್ತಿರುವ ಹಿನ್ನೆಲೆ ಮಂಡ್ಯದ ರೈತರು ಹೋರಾಟದ ಮೇಲೆ ಹೋರಾಟ ಮಾಡುತ್ತಿದ್ದಾರೆ. ಆದ್ರೂ ಕ್ಯಾರೆ ಎನ್ನುತ್ತಿಲ್ಲ.
ರಾಜ್ಯದಲ್ಲಿ ಮಳೆ ಇಲ್ಲದೆ ಬಿತ್ತನೆ ಬೀಜ ಹಾಕುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಹೊಲ ಉಳುಮೆ ಮಾಡಿ, ಮಳೆಗಾಗಿ ಕಾಯುತ್ತಾ ಕೂತಿದ್ದಾರೆ ರೈತರು. ಇದರ ನಡುವೆ ತಮಿಳುನಾಡು ಮಾತ್ರ ನಮಗೆ ಬರಬೇಕಾದ ಕಾವೇರಿ ನೀರನ್ನು ನೀಡಲೇಬೇಕೆಂದು ಹಠ ಮಾಡಿ, ನೀರು ಪಡೆಯುತ್ತಿದೆ. ಕಾವೇರಿಯಲ್ಲಿಯೇ ನೀರು ಇಲ್ಲದೆ ಇದ್ದರು, ಇಂದು 15.375 ಕ್ಯೂಸೆಕ್ ನೀರನ್ನು ಬಿಡಲಾಗಿದೆ.
ತಮಿಳುನಾಡಿಗೆ ನೀರು ಬಿಡುತ್ತಿರುವುದು ಕರ್ನಾಟಕ ರೈತರಿಗೆ ಬೇಸರ ತರಿಸಿದೆ. ಮಳೆ ಉತ್ತಮವಾಗಿದ್ದರೆ, ಕೆಆರ್ಎಸ್ ನಲ್ಲಿ ಬೇಕಾದಷ್ಟು ನೀರು ಇದ್ದರೆ ಬಿಡಲಿ, ಯಾವುದೇ ಬೇಸರ ಇಲ್ಲ. ಆದ್ರೆ ಈಗ ನಮ್ಮಲ್ಲಿಯೇ ಕುಡಿಯುವುದಕ್ಕೆ, ವ್ಯವಸಾಯಕ್ಕೆ ನೀರು ಸಮಸ್ಯೆಯಾಗುವ ಸಾಧ್ಯತೆ ಇದೆ. ಈ ಸಮಯದಲ್ಲೂ ನೀರು ಹರಿಸಿದರೆ ಹೇಗೆ ಅನ್ನೋದು ಹಲವರ ಅಭಿಪ್ರಾಯ.
ಮಂಡ್ಯ ಸಂಸದೆ ಸುಮಲತಾ ಕೂಡ ಈ ವಿಚಾರವಾಗಿ ಮಾತನಾಡಿದ್ದರು. ಈ ಬಗ್ಗರ ಗಮನ ನೀಡುತ್ತೇವೆ. ಕೇಂದ್ರ ಸರ್ಕಾರಕ್ಕೂ ಪತ್ರದ ಮೂಲಕ ಮನವಿ ಮಾಡುತ್ತೇವೆ ಎಂದಿದ್ದರು. ಅದಷ್ಟೇ ಅಲ್ಲ ರಾಜ್ಯ ಸರ್ಕಾರ ಕೂಡ ಬುಧವಾರ ಸರ್ವಪಕ್ಷಗಳ ಸಭೆ ಕರೆದಿದೆ. ಅಂದು ಎಲ್ಲವನ್ನು ಚರ್ಚೆ ನಡೆಸಲಿದ್ದಾರೆ.