ಬೆಂಗಳೂರು: ಕಾಂಗ್ರೆಸ್ ನಾಯಕರು ಲೋಕಸಭಾ ಚುನಾವಣೆಗಾಗಿ ಭರ್ಜರಿ ಕಸರತ್ತು ನಡೆಸುತ್ತಿದೆ. ಅದರಲ್ಲೂ ಕಾಂಗ್ರೆಸ್ ಬಿಟ್ಟು ಹೋದವರನ್ನ ಮತ್ತೆ ಕಾಂಗ್ರೆಸ್ ಗೆ ಕರೆತರುವ ಕೆಲಸವಾಗುತ್ತಿದೆ. ಇದರ ನಡುವೆ ಬಿಜೆಪಿ ನಾಯಕರು ಹೈ ಅಲರ್ಟ್ ಆಗಿದ್ದಾರೆ. ಕೆಲವರನ್ನು ಬಿಜೆಪಿಯಲ್ಲಿಯೆ ಉಳಿಸಿಕೊಳ್ಳಲು ಮೂಲ ಬಿಜೆಪಿಗರಿಗೆ ಶಿಕ್ಷೆ ನೀಡಲು ಮುಂದಾಗಿದೆ. ಅದರಲ್ಲೂ ಎಸ್ ಟಿ ಸೋಮಶೇಖರ್ ಅವರನ್ನು ಉಳಿಸಿಕೊಳ್ಳುವುದಕ್ಕಾಗಿಯೇ ಕೆಲವರನ್ನು ಉಚ್ಛಾಟನೆ ಮಾಡಿದೆ.
ಎಸ್ ಟಿ ಸೋಮಶೇಖರ್ ಅವರನ್ನು ತಮ್ಮ ಪಕ್ಷದಲ್ಲಿಯೇ ಉಳಿಸಿಕೊಳ್ಳುವುದಕ್ಕಾಗಿ, ಸರಣಿ ಸಭೆ ನಡೆಸುತ್ತಿದ್ದಾರೆ. ಅದರಲ್ಲೂ ಸೋಮಶೇಖರ್ ಅವರು ಅಸಮಾಧನ ಹೊರ ಹಾಕಿದವರನ್ನೇ ಬಿಜೆಪಿ ಉಚ್ಛಾಟನೆ ಮಾಡಿದೆ. ಯಶವಂತಪುರದ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಮಾರೇಗೌಡ, ಮಾಜಿ ಉಪಾಧ್ಯಕ್ಷ ಧನಂಜಯ ಅವರನ್ನು ಉಚ್ಛಾಟನೆ ಮಾಡಿ, ಪಕ್ಷ ಆದೇಶ ಹೊರಡಿಸಿದೆ.
ಈ ಇಬ್ಬರು ಯಶವಂತಪುರ ಕ್ಷೇತ್ರದಲ್ಲಿಯೇ ಸೋಮಶೇಖರ್ ವಿರುದ್ಧ ಕೆಲಸ ಮಾಡುತ್ತಿದ್ದರು ಎಂದು ಅಸಮಾಧಾನ ಮಾಡಿಕೊಂಡಿದ್ದರು. ಅಷ್ಟೇ ಅಲ್ಲ ಇತ್ತಿಚೆಗೆ ಸೋಮಶೇಖರ್ ಅವರ ಭಾವಚಿತ್ರವಾಕಿ ಹುಟ್ಟುಹಬ್ಬ ಆಚರಣೆ ಮಾಡಲಾಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದ ಆರೋಪವೂ ಕೇಳಿ ಬಂದಿತ್ತು. ಇವರಿಬ್ಬರ ಮೇಲೆ ಎಸ್ ಟಿ ಸೋಮಶೇಖರ್ ಅಸಮಾಧಾನ ಹೊರ ಹಾಕಿದ್ದರು. ಇದೀಗ ಆ ಇಬ್ಬರನ್ನು ಪಕ್ಷದಿಂದ ಹೊರ ಹಾಕಿ, ಸೋಮಶೇಖರ್ ಅವರಿಗೆ ಸಮಾಧಾನ ಮಾಡಲು ಬಿಜೆಪಿ ಯತ್ನಿಸುತ್ತಿದೆ ಎನ್ನಲಾಗುತ್ತಿದೆ.