ಹುಬ್ಬಳ್ಳಿ: ನಕಲಿ ಬಿಪಿಎಲ್ ಕಾರ್ಡ್ ದಾರರಿಗೆ ಇಲಾಖೆ ಬಿಸಿಮುಟ್ಟಿಸಲು ಪ್ಲ್ಯಾನ್ ಮಾಡಿತ್ತು. ಇದೀಗ ಅದರಂತೆ ಹುಬ್ಬಳ್ಳಿ ಧಾರವಾಡದಲ್ಲಿ ನಕಲಿ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಿದೆ. ಅದು ಸುಮಾರು 4 ಲಕ್ಷಕ್ಕೂ ಅಧಿಕಾ ಕಾರ್ಡ್ ಗಳು ರದ್ದಾಗಿವೆ.
ಬಡತನ ರೇಖೆಗಿಂತ ಕೆಳಗಿರುವವರಿಗೆ ಈ ಸೌಲಭ್ಯ ಸಿಗಲಿ ಎಂದು ಸರ್ಕಾರ ಸೌಲಭ್ಯ ತಂದಿದೆ. ಆದರೆ ಫಲಾನುಭವಿಗಳಿಗಿಂತ ಉಳ್ಳವರೇ ಹೆಚ್ಚಿನ ಕಾರ್ಡ್ ಗಳನ್ನು ಹೊಂದಿದ್ದಾರೆ. ಹೀಗಾಗಿ ಅಂಥವರನ್ನೇ ಇಲಾಖೆ ಟಾರ್ಗೆಟ್ ಮಾಡಿದ್ದು, ಕೇವಲ 15 ದಿನದಲ್ಲಿ ಸುಮಾರು 4.59 ಲಕ್ಷ ಕಾರ್ಡ್ ಗಳು ಡಿಲೀಟ್ ಆಗಿದೆ.
ಇಷ್ಟು ಕಾರ್ಡ್ ದಾರರು ಕಳೆದ ತಿಂಗಳು ಪಡಿತರವನಗನು ಪಡೆದಿದ್ದರು. ಇದೀಗ ಸೂಕ್ತ ದಾಖಲೆಗಳನ್ನು ಪರಿಶೀಲನೆ ಮಾಡಿದ ಇಲಾಖೆ, ಸೂಕ್ತ ಕ್ರಮ ಕೈಗೊಂಡಿದೆ. ಮೃತರ ಹೆಸರಿನಲ್ಲಿಯೂ ಪಡಿತರ ಪಡೆಯುತ್ತಿದ್ದರು. ಈ ಸಂಬಂಧ ದೂರು ನೀಡಿದ್ದರು. ಈ ಹಿನ್ನೆಲೆ ಮೃತರ ಮಾಹಿತಿ ಕಲೆ ಹಾಕಲಾಗಿತ್ತು. ಅದರಂತೆ ಸುಮಾರು 4.59 ಲಕ್ಷ ಕಾರ್ಡ್ ಗಳು ಡಿಲೀಟ್ ಆಗಿದೆ.
ರಾಜ್ಯದಲ್ಲಿ 1.27 ಕೋಟಿ ಬಿಪಿಎಲ್ ಕಾರ್ಡ್‌ಗಳಿದ್ದು, 4.36 ಕೋಟಿ ಜನರಿಗೆ ಅನುಕೂಲವಾಗಿದೆ. ಆಹಾರ ಮತ್ತು ನಾಗರಿಕ ಇಲಾಖೆಯ ಜಂಟಿ ನಿರ್ದೇಶಕ ಗ್ಯಾನೇಂದ್ರಕುಮಾರ್ ಗೋನ್ವಾರ್ ಮಾಹಿತಿ ನೀಡಿದ್ದಾರೆ. ಬಿಪಿಎಲ್ ಕಾರ್ಡ್ ಗಳನ್ನು ಉಳ್ಳವರು ಹೊಂದಿರುವುದು ಇದು ಮೊದಲೇನು ಅಲ್ಲ. ಬಹಳ ವರ್ಷಗಳಿಂದಾನೂ ಈ ಆರೋಪ ಎಲ್ಲಾ ಜಿಲ್ಲೆಗಳಲ್ಲೂ ಕೇಳಿ ಬಂದಿದೆ. ಇದೀಗ ಹುಬ್ಬಳ್ಳಿ – ಧಾರವಾಡದಲ್ಲಿ ಇದಕ್ಕೊಂದು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.