ಬೆಂಗಳೂರು: ಶಿಕ್ಷಣ ಉದ್ಯಮವಾಗಿ ಬಹಳ ವರ್ಷಗಳೇ ಕಳೆದು ಹೋಯ್ತು. ಅದರಲ್ಲೂ ಇತ್ತಿಚೆಗಂತು ಪ್ರೀ ನರ್ಸರಿ, ಎಲ್ಕೆಜಿ, ಯುಕೆಜಿ ಮಕ್ಕಳಿಗೆ ಕಟ್ಟೋ ಶುಲ್ಕದಲ್ಲಿ ನಾವೆಲ್ಲಾ ಮಾಸ್ಟರ್ ಡಿಗ್ರಿ ಮುಗಿಸಿದ್ವಿ ಅನ್ಸುತ್ತೆ. ಪೋಷಕರಂತೂ ಶಾಲೆಗಳಲ್ಲಿನ ಶುಲ್ಕಕ್ಕೆ ಸುಸ್ತಾಗಿ ಹೋಗಿದ್ದಾರೆ. ಆದ್ರೆ ಈಗ ಆ ಪೋಷಕರಿಗೆಲ್ಲಾ ಶಿಕ್ಷಣ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ.
ಇನ್ಮುಂದೆ ಸರ್ಕಾರಿ ಶಾಲೆಗಳಲ್ಲೂ ಪ್ರೀ ನರ್ಸರಿ ಆರಂಭವಾಗ್ತಾ ಇದೆ. ರಾಜ್ಯದ 262 ಶಾಲೆಗಳಲ್ಲಿ ಪ್ರೀ ನರ್ಸರಿ ತರಗತಿಗಳನ್ನು ಆರಂಭಿಸಲು ಆಲೋಚಿಸಲಾಗಿದೆ. ಇದಕ್ಕೆ ಇದೇ ಆಗಸ್ಟ್ ತಿಂಗಳಿನಿಂದಾನೇ ಆರಂಭಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಲಾಗಿದೆ.
ಒಂದು ತರಗತಿಗೆ ಕನಿಷ್ಠ 20 ಮಕ್ಕಳು ಗರಿಷ್ಠ 30 ಮಕ್ಕಳು ಮಾತ್ರ ದಾಖಲಿಸಿಕೊಳ್ಳಬೇಕು. 4-5 ವರ್ಷದ ಒಳಗಿನ ಮಕ್ಕಳನ್ನು ದಾಖಲಿಸಿಕೊಳ್ಳಬೇಕು. ಸುಸಜ್ಜಿತ ಕೊಠಡಿ ಮೀಸಲಿಡಲಾಗುತ್ತಿದೆ. ಚಿತ್ರಕಲಾ ಶಿಕ್ಷಕರನ್ನ ಬಳಸಿಕೊಂಡು ಆಕರ್ಷಕವಾಗಿ ಚಿತ್ರ ಬಿಡಿಸಿ ಪಾಠ ಮಾಡಬೇಕು. ಅಗತ್ಯ ಸಾಧನ ಸಾಮಾಗ್ರಿಗಳನ್ನು ನಿಯಮಾನುಸಾರ ಖರೀದಿಸಲು ಸೂಚನೆ ನೀಡಲಾಗಿದೆ. ಈ ಮೂಲಕ ಪೋಷಕರ ಹೊರೆಯನ್ನು ತಪ್ಪಿಸಲು ಶಿಕ್ಷಣ ಇಲಾಖೆ ನಿರ್ಷದರಿಸಿದೆ. ಈ ರೀತಿ ಸರ್ಕಾರಿ ಶಾಲೆಯಲ್ಲಿಯೇ ತರಗತಿಗಳು ಆರಂಭವಾದರೆ ಪೋಷಕರಿಗೂ ಹಣದ ಹೊರೆಯೂ ತಪ್ಪುತ್ತದೆ.