ಸುದ್ದಿಒನ್, ಚಿತ್ರದುರ್ಗ, ಆ.20 : ಡಿಆರ್ಡಿಓ ಪರೀಕ್ಷಾರ್ಥ ಮಾನವ ರಹಿತ ಡ್ರೋನ್ ವಿಮಾನ ಪತನಗೊಂಡು ನೆಲಕ್ಕುರುಳಿದೆ.
ಹಿರಿಯೂರು ತಾಲ್ಲೂಕಿನ ವದ್ದಿಕೆರೆ ಗ್ರಾಮದ ಬಳಿ ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಚಿತ್ರದುರ್ಗ : ಡಿಆರ್ಡಿಓ ಪರೀಕ್ಷಾರ್ಥ ವಿಮಾನ ಪಥನ : ತಪ್ಪಿದ ಬಾರೀ ಅನಾಹುತ pic.twitter.com/GoTPUHd1L0
— suddione-kannada News (@suddione) August 20, 2023
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಸಮೀಪದ ಕುದಾಪುರ ಬಳಿಯ ವಾಯುನೆಲೆಯಿಂದ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಭಾನುವಾರ ಬೆಳಿಗ್ಗೆ ಪರೀಕ್ಷಾರ್ಥ ಹಾರಾಟ ನಡೆಸಿತ್ತು. ಸ್ವಲ್ಪ ದೂರ ಕ್ರಮಿಸಿದ ನಂತರ ಈ
ಜೆಟ್ ವಿಮಾನವು ನಿಯಂತ್ರಣ ತಪ್ಪಿ ವದ್ದಿಕೆರೆ ಗ್ರಾಮದ ಹೊಲದಲ್ಲಿ ಪತನವಾಗಿದೆ. ವಿಮಾನ ಹೊಲದಲ್ಲಿ ಪತನವಾಗಿದ್ದರಿಂದ ಬಾರೀ ಅನಾಹುತ ತಪ್ಪಿದಂತಾಗಿದೆ. ಈ ವೇಳೆ ಯಾರಿಗೂ ಯಾವುದೇ ಹಾನಿಯಾಗಿಲ್ಲ ಎಂಬುದು ಪ್ರಾಥಮಿಕವಾಗಿ ತಿಳಿದು ಬಂದಿದೆ.
ಚಿತ್ರದುರ್ಗ : ಡಿಆರ್ಡಿಓ ಪರೀಕ್ಷಾರ್ಥ ವಿಮಾನ ಪಥನ : ತಪ್ಪಿದ ಬಾರೀ ಅನಾಹುತ pic.twitter.com/b2oUTWUsFX
— suddione-kannada News (@suddione) August 20, 2023
ವಿಮಾನ ಬಿದ್ದ ರಭಸಕ್ಕೆ ಜೋರಾಗಿ ಶಬ್ದ ಕೇಳಿ ಬಂದಿದೆ. ತಕ್ಷಣವೇ ಊರಿನ ಗ್ರಾಮಸ್ಥರು ವಿಮಾನ ಬಿದ್ದ ಸ್ಥಳಕ್ಕೆ ದೌಡಾಯಿಸಿದ್ದಾರೆ. ವಿಮಾನದ ಪಳಯುಳಿಕೆಗಳನ್ನು ಕುತೂಹಲದಿಂದ ವೀಕ್ಷಿಸಿ ದೃಶ್ಯಗಳನ್ನು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.
ಚಿತ್ರದುರ್ಗ : ಡಿಆರ್ಡಿಓ ಪರೀಕ್ಷಾರ್ಥ ವಿಮಾನ ಪಥನ : ತಪ್ಪಿದ ಬಾರೀ ಅನಾಹುತ pic.twitter.com/YwumX4dseQ
— suddione-kannada News (@suddione) August 20, 2023
ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಡಿಆರ್ಡಿಓ ಅಧಿಕಾರಿಗಳು ಆಗಮಿಸುತ್ತಿದ್ದಾರೆ. ನಂತರವಷ್ಟೇ ಘಟನೆಗೆ ನಿಖರವಾದ ಕಾರಣ ತಿಳಿದು ಬರಬರಲಿದೆ.