ಚಿಕ್ಕಬಳ್ಳಾಪುರ: ರಾಜ್ಯದೆಲ್ಲೆಡೆ ಮಳೆ ನಾಪತ್ತೆಯಾಗಿದೆ. ಮಳೆ ಸರಿಯಾದ ಸಮಯಕ್ಕೆ ಬಂದಿದ್ದರೆ, ಇಷ್ಟೊತ್ತಿಗೆ ಹೊಲದಲ್ಲಿ ಬೀಜ ಮೊಳಕೆಯೊಡೆಯಬೇಕಿತ್ತು. ಆದರೆ ಮಳೆ ಗಗನ ಕುಸುಮವಾಗಿದೆ. ರೈತನ ನಿರೀಕ್ಷೆಯನ್ನೇ ಹುಸಿಗೊಳಿಸಿದೆ. ಮಳೆ ಬಾರದೆ ಇದ್ದಲ್ಲಿ ಸರ್ಕಾರ ಮೋಡ ಬಿತ್ತನೆ ಮಾಡುವ ಸಂಪ್ರದಾಯವಿಟ್ಟುಕೊಂಡಿದೆ. ಇತ್ತ ಜನ ಕೂಡ ಮಳೆಗಾಗಿ ಕಪ್ಪೆಗಳ ಮದುವೆ ಮಾಡಿಸುತ್ತಾರೆ. ಆದ್ರೆ ಚಿಕ್ಕಬಳ್ಳಾಪುರದಲ್ಲಿ ತುಂಬಾ ವಿಚಿತ್ರವಾದ ಸಂಪ್ರದಾಯವೊಂದು ಇದೆ.
ಬಾಗೇಪಲ್ಲಿಯ ಮಾಡಪ್ಪಲ್ಲಿಯ ಗ್ರಾಮದಲ್ಲಿನ ಜನ ಮಳೆಗಾಗಿ ದೇವರನ್ನೇ ಸುಡುತ್ತಾರೆ. ಮಳೆಗಾಗಿ ದೇವರನ್ನೇ ಸುಟ್ಟಿದ್ದಾರೆ. ಊರಿನ ಜನರು ಗ್ರಾಮದೇವತೆಗಳಿಗೆ ಬೆಂಕಿ ಹಚ್ಚಿ, ಪ್ರಾರ್ಥನೆ ಸಲ್ಲಿಸಿದ್ದಾರೆ. ವಿಶೇಷ ಅಂದ್ರೆ ಮದುವೆಯಾಗದ ಯುವಕರಿಂದ ಈ ಆಚರಣೆ ಮಾಡಿಸಿದ್ದಾರೆ. ಈ ರೀತಿ ಆಚರಣೆ ಮಾಡುವುದರಿಂದ ಮಳೆ ಬರುತ್ತೆ ಎಂದೇ ಇಲ್ಲಿನ ಮಂದಿ ನಂಬಿದ್ದಾರೆ.
ಹೀಗಾಗಿ ಇಲ್ಲಿನ ವಿಚಿತ್ರ ಸಂಪ್ರದಾಯ ಕಂಡು ಎಲ್ಲರು ಅಚ್ಚರಿಗೊಂಡಿದ್ದಾರೆ. ಗ್ರಾಮದೇಚತೆಗಳನ್ನು ಸುಡುವಾಗ ಗಂಗಮ್ಮನ ಸುಡ್ರೋ.. ಚೌಡೇಶ್ವರಿಯನ್ನು ಸುಡ್ರೋ ಅಂತೆಲ್ಲಾ ಘೋಷಣೆ ಕೂಗಿದ್ದಾರೆ. ಈ ರೀತಿ ಕೂಗಿಕೊಂಡು ಆಚರಣೆ ಮಾಡಿದ್ದಾರೆ.