ಸುದ್ದಿಒನ್, ಚಿತ್ರದುರ್ಗ, ಆ.15 : ಸ್ವಾತಂತ್ರ್ಯ ತಂದು ಕೊಟ್ಟ ಮಹನೀಯರನ್ನು ನೆನಪಿಸಿಕೊಂಡು ಅವರ ತ್ಯಾಗ ಬಲಿದಾನಗಳನ್ನು ಜಗತ್ತಿಗೆ ಸಾರಿ ಹೇಳುವ, ಭಾರತಾಂಬೆ ದಾಸ್ಯದ ಸಂಕೋಲೆಗಳನ್ನು ಕಿತ್ತೊಗೆದು ಭಾರತವು ಸ್ವಾತಂತ್ರ್ಯ ಪಡೆದ ಮಹತ್ತರ ದಿನವೇ ಈ ಆಗಸ್ಟ್ 15 ಅದರ ನೆನಪಿಗಾಗಿ ಪ್ರತಿವರ್ಷವು ಈ ದಿನವನ್ನು ದೇಶಭಾಂದವರೆಲ್ಲರೂ ಹಬ್ಬವಾಗಿ ಆಚರಿಸುತ್ತಿದ್ದೇವೆ ಎಂದು ದಾವಣಗೆರೆ ಲೋಕಸಭಾ ಸದಸ್ಯ ಜಿ.ಎಮ್. ಸಿದ್ದೇಶ್ವರ ಹೇಳಿದರು.
ತಾಲ್ಲೂಕಿನ ಭೀಮಸಮುದ್ರದ ಶ್ರೀ ಭೀಮೇಶ್ವರ ಬಾಲವಿಕಾಸ ಕನ್ನಡ ಮಾಧ್ಯಮ ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ದ್ವಜಾರೋಹಣ ಮಾಡಿ ಅವರು ಮಾತನಾಡಿದರು.
ಭಾರತದ ಚರಿತ್ರೆಯಲ್ಲಿ ಕರಾಳವಾದ ವಿಷಯವೆಂದರೆ ಅದು ಭಾರತ ದೇಶವು ಇಬ್ಬಾಗವಾಗಿದ್ದು, ಅದೊಂದು ಭಾರತದ ಚರಿತ್ರೆಯಲ್ಲಿ ಕಪ್ಪು ಚುಕ್ಕೆಯಾಗಿ ಉಳಿದುಕೊಂಡಿದ್ದು, ಮುಂದೊಂದು ದಿನ ಅಖಂಡ ಭಾರತವನ್ನು ಕಾಣುವ ದಿನ ಬರಬೇಕೆಂದೂ, ಮಹಾತ್ಮ ಗಾಂಧೀಜಿ, ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಲಾಲ್ ಬಹುದ್ದೂರ್ ಶಾಸ್ತ್ರಿ ಮುಂತಾದ ಮಹಾನಿಯರು ದೇಶಕ್ಕಾಗಿ ಸರ್ವವನ್ನು ತ್ಯಾಗಮಾಡಿದ್ದು, ಮಕ್ಕಳು ಅಂತವರ ಚರಿತ್ರೆಗಳನ್ನು ಗುರುಗಳಿಂದ ಕೇಳಿ ತಿಳಿದುಕೊಂಡು ಅವರ ಆದರ್ಶಗಳನ್ನು ಪಾಲಿಸಬೇಕು. ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ರಂತಹ ಮಹಾನೀಯರು ಭಾರತದಲ್ಲಿ ಮತ್ತೇ ಹುಟ್ಟಿ ಬರಬೇಕೆಂದರು. ಚರಿತ್ರೆಯಲ್ಲಿ ಸ್ಥಾನ ಪಡೆಯದ ಹಲವಾರು ಭಾರತ ದೇಶದ ಹೆಮ್ಮೆಯ ಪುತ್ರರು ಭಾರತದಲ್ಲಿದ್ದರೆಂದೂ ಗುರುಗಳು ಮಕ್ಕಳಿಗೆ ಅಂತಹ ಸ್ವಾತಂತ್ರ್ಯ ಯೋಧರ ಜೀವನ ಚರಿತ್ರೆಗಳನ್ನು ತಿಳಿಸಬೇಕೆಂದು ಕರೆನೀಡಿದರು.
ಭಾರತವು ಇಬ್ಭಾಗವಾದ ದಿನದಂದು ಹಲವಾರು ದೇಶವಾಸಿಗಳು ವಲಸೆ ಹೋಗಬೇಕಾಗಿ ಬಂದೀತು, ಅದೇ ರೀತಿಯಾಗಿ ಹಲವಾರು ಜನ ನಿರ್ಗತಿಕರಾದರು, ಇಲ್ಲಿನವರು ಅಲ್ಲಿಗೆ ಅಲ್ಲಿಯವರು ಇಲ್ಲಿಗೆ ಹೋಗಬೇಕಾಗಿ ಬಂದಿತು ಇದೊಂದು ಕರಾಳ ಚರಿತ್ರೆ ಎಂದು ತಿಳಿಸಿದರು. ಮಕ್ಕಳು ಉತ್ತಮವಾಗಿ ದೇಶ ನಾಯಕರ ವೇಷ ಗಳನ್ನು ತೊಟ್ಟು ಅಂತಹ ಮಹಾನ್ ನಾಯಕರ ನೆನಪನ್ನು ನನಗೆ ತಂದರೆಂದು ತಿಳಿಸಿದರು.
ದ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ,ಜಿ. ದೇವಕುಮಾರ್, ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಶಾಲೆಯ ಕಾರ್ಯದರ್ಶಿ ತಿಪ್ಪೇಸ್ವಾಮಿಯವರು, ನಿರ್ದೇಶಕರುಗಳಾದ ಟಿ. ಬಸವರಾಜಪ್ಪ, ಶರತ್ ಪಟೇಲ್, ಗ್ರಾಮಸ್ಥರಾದ ಶ್ರೀ ಟಿ.ಜಿ. ಮಲ್ಲಿಕಾರ್ಜುನ್ ಶಾಲೆಯ ಮುಖ್ಯ ಶಿಕ್ಷಕರಾದ ಹೆಚ್. ನಾಗರಾಜ್, ಆಂಗ್ಲ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಮಂಜಣ್ಣ, ಭರತ್, ಹಾಗೂ ಶಾಲೆಯ ಎಲ್ಲಾ ಶಿಕ್ಷಕ / ಶಿಕ್ಷಕಿಯರು ಉಪಸ್ಥಿತರಿದ್ದರು. ಮಕ್ಕಳ ಆಕರ್ಷಕ ಧ್ವಜಾವಂದನಾ ಕಾರ್ಯಕ್ರಮ ಹಾಗೂ ಪ್ರಬಾತ್ ಪೇರಿ ಕಾರ್ಯಕ್ರಮವು ನೆರೆವೇರಿತು.
ಶ್ರೀ ಭೀಮೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ತಿಪ್ಪೇಸ್ವಾಮಿ ಶ್ರೇಷ್ಠಿ ವಹಿಸಿಕೊಂಡು ಮಾತನಾಡಿದರು.
ಮಕ್ಕಳು ಸ್ವಾತಂತ್ರ್ಯ ಸೇನಾನಿಗಳ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಪ್ಪೇಸ್ವಾಮಿ ಶ್ರೇಷ್ಟಿ ಹೇಳಿದರು. ದೇಶವು ಸುಲಭವಾಗಿ ಸ್ವಾತಂತ್ರ್ಯವನ್ನು ಪಡೆದುಕೊಳ್ಳಲಿಲ್ಲ. ಅದಕ್ಕಾಗಿ ಹಲವಾರು ಮಹನೀಯರು ತಮ್ಮ ಪ್ರಾಣಗಳನ್ನು ದೇಶಮಾತೆಗೆ ಅರ್ಪಿಸಿ ನಮಗೆ ಸ್ವಾತಂತ್ರವನ್ನು ತಂದುಕೊಟ್ಟಿದ್ದು, ಅದನ್ನು ಉಳಿಸಿಕೊಂಡು ಬೆಳಸಿಕೊಂಡು ಹೋಗುವ ಕಾರ್ಯವನ್ನು ನಾವು ಮಾಡಬೇಕೆಂದು ಹಾಗೂ ದೇಶವನ್ನು ಬಲಿಷ್ಟವಾಗಿ ಕಟ್ಟಬೇಕೆಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ ಹೆಚ್. ಮಂಜಣ್ಣ, ಭರತ್, ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ ನಾಗರಾಜ್, ಜಿಲ್ಲಾ ಪ್ರಶಸ್ತಿ ಪಡೆದ ಶಿಕ್ಷಕರಾದ ಎಮ್.ಎನ್.ರಾಮು, ಎರಡೂ ಶಾಲೆಯ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು,