Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕವಾಡಿಗರಹಟ್ಟಿ ಘಟನೆ ಮರುಕಳಿಸಬಾರದು : ಜಿಲ್ಲೆಯಾದ್ಯಂತ ವಿನೂತನ ಕಾರ್ಯಕ್ರಮಗಳ ಮೂಲಕ ಬೃಹತ್ ಜನಜಾಗೃತಿ ಸಪ್ತಾಹ : ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ

Facebook
Twitter
Telegram
WhatsApp

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಸುದ್ದಿಒನ್, ಚಿತ್ರದುರ್ಗ,ಆ.14 :  ಕುಡಿಯುವ ನೀರು ಹಾಗೂ ಸ್ವಚ್ಛತೆಯ ಬಗ್ಗೆ ಜಿಲ್ಲೆಯ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಬೃಹತ್ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು.

ಬೃಹತ್ ಜನ ಜಾಗೃತಿ ಸಪ್ತಾಹ ಕಾರ್ಯಕ್ರಮಕ್ಕೆ ಸೋಮವಾರ ಚಿತ್ರದುರ್ಗ ನಗರದ ಒನಕೆ ಓಬವ್ವ ವೃತ್ತದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು
ವಾರದ ಹಿಂದೆ ಚಿತ್ರದುರ್ಗ ನಗರದ ಕವಾಡಿಗರಹಟ್ಟಿಯ ಕಲುಷಿತ ನೀರು ಸೇವನೆಯ ಘಟನೆಯಿಂದ ಐದು ಜನರು ಮರಣ ಹೊಂದಿದ್ದು, ಹಲವು ಜನರು ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಕವಾಡಿಗರಹಟ್ಟಿಯ ಘಟನೆ ಎಲ್ಲಿಯೂ ಮರುಕಳಿಸಬಾರದು .ಹಾಗಾಗಿ ಜಿಲ್ಲೆಯ ಜನರಿಗೆ ಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ ಒಂದು ವಾರ ಸಪ್ತಾಹ ಹಮ್ಮಿಕೊಂಡು ಪ್ರತಿದಿನವೂ ವಿನೂತನ ಕಾರ್ಯಕ್ರಮಗಳ ಮೂಲಕ ಜನಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಜಾಥಾದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ನಗರಸಭೆ ಸಿಬ್ಬಂದಿ ಅವರು ಚಿತ್ರದುರ್ಗ ನಗರದ 35 ವಾರ್ಡ್‍ಗಳಿಗೂ ತೆರಳಿ ಜನರಿಗೆ ವಿವಿಧ ಬಗೆಯ ಕಲಾ ತಂಡಗಳಿಂದ ಬೀದಿ ನಾಟಕ ಪ್ರದರ್ಶನ, ಜಾಗೃತಿ ಸಂದೇಶಗಳ ಭಿತ್ತಿಪತ್ರಗಳ ಪ್ರದರ್ಶನ, ಜಾಗೃತಿ ಘೋಷಣೆಗಳು, ಎಲ್‍ಇಡಿ ವಾಹನದಲ್ಲಿ ವಿಡಿಯೋ ಚಿತ್ರ ಪ್ರದರ್ಶನದ ಮೂಲಕ  ಜಾಗೃತಿ ಮೂಡಿಸಲಾಗುವುದು. ಇದು ಕೇವಲ ಚಿತ್ರದುರ್ಗ ನಗರಕ್ಕೆ ಮಾತ್ರ ಸೀಮಿತವಲ್ಲ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿಯೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಜಾಥಾದ ಮೂಲಕ ಅರಿವು ಮೂಡಿಸಲಾಗುವುದು.

ಕರಪತ್ರಗಳ ಹಂಚಿಕೆ, ಕಸ ವಿಲೇವಾರಿ ವಾಹನಗಳಲ್ಲಿ ಧನಿವರ್ಧಕಗಳ ಮೂಲಕ ಜಾಗೃತಿ ಸಂದೇಶಗಳು, ಗ್ರಾಮ ಪಂಚಾಯತಿಗಳಲ್ಲಿ ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸಿ, ಗ್ರಾಮಸ್ಥರಲ್ಲಿ ನೀರು ಹಾಗೂ ನೈರ್ಮಲ್ಯದ ಮಹತ್ವ ಕುರಿತು ಮನವರಿಕೆ ಮಾಡಿಕೊಡುವುದು, ಸ್ತ್ರೀಶಕ್ತಿ ಮತ್ತು ಮಹಿಳಾ ಸ್ವ ಸಹಾಯ ಗುಂಪುಗಳ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು, ವೈಯಕ್ತಿಕ ಸ್ವಚ್ಛತೆ ಕುರಿತು ಜಿಲ್ಲೆಯಾದ್ಯಂತ ಆರೋಗ್ಯ ಇಲಾಖೆಯಿಂದ ಪ್ರಾತ್ಯಕ್ಷಿಕೆಗಳ ಆಯೋಜನೆ, ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ಸಂದರ್ಭದಲ್ಲಿ ಮಕ್ಕಳಲ್ಲಿ ಕುಡಿಯುವ ನೀರು ಮತ್ತು ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ತಿಳುವಳಿಕೆ ನೀಡುವುದು, ಜಿಲ್ಲೆಯಾದ್ಯಂತ ಸಂಜೆಯ ವೇಳೆ ಪಂಜಿನ ಮೆರವಣಿಗೆ ಏರ್ಪಡಿಸಿ ಜನರ ಗಮನ ಸೆಳೆದು ಧ್ವನಿವರ್ಧಕ ಮೂಲಕ ಅವರಿಗೆ ಜಾಗೃತಿಯ ಸಂದೇಶ ನೀಡುವುದು ಹೀಗೆ ಇನ್ನೂ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಜಿಲ್ಲೆಯ ಜನರು ಕಾಯಿಸಿ, ಕುದಿಸಿ, ಆರಿಸಿದ ನೀರನ್ನು ಕುಡಿಯಬೇಕು. ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು. ಶಾಂತಿ ಸಾಗರ ಮತ್ತು ವಿವಿ ಸಾಗರದ ನೀರನ್ನು ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಣ ಮಾಡಿ ಆ ನೀರಿನ ಸ್ಯಾಂಪಲ್‍ಗಳನ್ನು ನಿಯಮಾನುಸಾರ ಅದನ್ನು ಪರೀಕ್ಷೆಗೊಳಪಡಿಸಿ ಶುದ್ಧವಾದ ನಂತರವೇ ನೀರು ಪೂರೈಕೆ ಮಾಡಲಾಗುತ್ತದೆ. ಜನರು ಶುದ್ಧ ಕುಡಿಯುವ ನೀರನ್ನೇ ಸೇವಿಸಬೇಕು. ಜೊತೆಗೆ ಪರಿಸರ ನೈರ್ಮಲ್ಯ, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಅಶುದ್ಧ ನೀರು ಕುಡಿಯುವ ನೀರಿನ ಜೊತೆಗೆ ಸೇರದಂತೆ ತಾವೆಲ್ಲರೂ ಕಾಳಜಿವಹಿಸಬೇಕು ಎಂದು ಮನವಿ ಮಾಡಿದರು.

ನಗರದ ಎಲ್ಲಾ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳು, ವಿವಿಧೆಡೆಯಿಂದ ಆಗಮಿಸಿದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ನಗರಸಭೆ, ಆರೋಗ್ಯ ಇಲಾಖೆ ಸಿಬ್ಬಂದಿ, ಶಿಕ್ಷಕರು, ಜಾನಪದ ಕಲಾ ತಂಡಗಳು ಸೇರಿ ಸುಮಾರು 10 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಜನರು ಈ ಬೃಹತ್ ಜಾಥಾ ಕಾರ್ಯಕ್ರಮದಲ್ಲಿ ಭಾಗಹಿಸಿದ್ದರು.  ಜಾಥಾ ನಡಿಗೆಯು ನಗರದ ಎಲ್ಲ 35 ವಾರ್ಡ್‍ಗಳಲ್ಲಿಯೂ ಸಾಗಿ, ಜನರಲ್ಲಿ ಕುಡಿಯುವ ನೀರು ಹಾಗೂ ನೈರ್ಮಲ್ಯ ಕುರಿತು ಜಾಗೃತಿ ಸಂದೇಶಗಳೊಂದಿಗೆ ನೆರವೇರಿತು.

ಮೊಳಕಾಲ್ಮೂರಿನ ಜಾನಪದ ಕಲಾ ತಂಡದ ಗಾಯಕರು ಸ್ವಚ್ಛತೆ ಕುರಿತು ಗಾಯನ ಪ್ರಸ್ತುತ ಪಡಿಸಿದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು ವೀರಗಾಸೆ ಹಾಗೂ ಸಂಗೀತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಸಮವಸ್ತ್ರ ಧರಿಸಿ, ಕೈಯಲ್ಲಿ ಜಾಗೃತಿ ಫಲಕಗಳನ್ನು ಹಿಡಿದ ವಿದ್ಯಾರ್ಥಿಗಳು, ಕಾಯಿಸಿ ಆರಿಸಿದ ನೀರನ್ನು ಕುಡಿಯುವುದು, ಕೈಗಳ ಸ್ವಚ್ಛತೆ, ಬಯಲು ಮುಕ್ತ ಶೌಚದ ಕುರಿತು ಘೋಷಣೆಗಳನ್ನು ಸಾರುತ್ತಾ, ಮದಕರಿ ನಾಯಕ ವೃತ್ತ, ಅಂಬೇಡ್ಕರ್ ವೃತ್ತ, ತಹಶೀಲ್ದಾರ್ ಕಚೇರಿ, ಕೆಳಗೋಟೆ ಸೇರಿದಂತೆ ವಿವಿಧ ವಾರ್ಡ್ ಹಾಗೂ ಬಡಾವಣೆಗಳಿಗೆ ಪ್ರಭಾತ್ ಫೇರಿ ನಡೆಸುತ್ತಾ ಸಾಗಿದರು.
ಜನಪದ ಕಲಾ ತಂಡಗಳು ನಗರದ ಪ್ರಮುಖ ಏರಿಯಾಗಳಿಗೆ ತೆರಳಿ, ಸ್ವಚ್ಛತೆ ಜಾಗೃತಿ ಗೀತೆ ಹಾಗೂ ಬೀದಿ ನಾಟಗಳನ್ನು ಪ್ರಸ್ತುತ ಪಡಿಸಿದರು. ಇದೇ ಸಂದರ್ಭದಲ್ಲಿ ನಗರದ ಪ್ರತಿ ವಾರ್ಡಗಳಲ್ಲಿ ಆಟೋ ಮೂಲಕ ಹಾಗೂ ವಿಡಿಯೋ ವಾಹನದಲ್ಲಿ ಜಾಗೃತಿ ಸಂದೇಶದ ದೃಶ್ಯಗಳೊಂದಿಗೆ ಪ್ರಚಾರ ನಡೆಸಲಾಯಿತು.

ಓಬವ್ವ ವೃತ್ತದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೂಗಪ್ಪ ಅವರು, ಡಿಹೆಚ್‍ಒ ಡಾ. ರಂಗನಾಥ್ ಅವರ ಮಾರ್ಗದರ್ಶನದಲ್ಲಿ ಸ್ವಚ್ಛವಾಗಿ ಕೈ ತೊಳೆಯುವ ಕ್ರಮ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಇದೇ ಸಂದರ್ಭದಲ್ಲಿ ಮನವರಿಕೆ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ, ಬಿಇಒ ನಾಗಭೂಷಣ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್, ನಗರಸಭೆ ಪೌರಾಯುಕ್ತ ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ತಹಸಿಲ್ದಾರ್ ನಾಗವೇಣಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಆಶಾ-ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕೊರೋನರಿ ಕ್ಯಾಲ್ಸಿಯಂ ಸ್ಕ್ಯಾನ್ ಎಂದರೇನು ?

ಇದೊಂದು ರೀತಿಯ ಹೃದಯದ ಸ್ಕ್ಯಾನಿಂಗ್ ಪರೀಕ್ಷೆಯಾಗಿದ್ದು, ಹೃದಯಕ್ಕೆ ರಕ್ತ ಪೂರೈಸುವ ರಕ್ತನಾಳಗಳ ಒಳಭಾಗದಲ್ಲಿ ಶೇಖರಣೆಗೊಂಡ ಕ್ಯಾಲ್ಸಿಯಂನ ಪ್ರಮಾಣವನ್ನು ಪತ್ತೆ ಹಚ್ಚುವ ಪರೀಕ್ಷೆಯಾಗಿರುತ್ತದೆ. ಹೃದಯಾಘಾತವಾಗುವ ಸಾಧ್ಯತೆಗಳನ್ನು ಈ ಕ್ಯಾಲ್ಸಿಯಂ ಅಂಕದಿಂದ ನಿರ್ಧರಿಸಲಾಗುತ್ತದೆ. ಆರೋಗ್ಯವಂತ ವ್ಯಕ್ತಿಗಳಲ್ಲಿ ಕ್ಯಾಲ್ಸಿಯಂ

ಈ ರಾಶಿಯ ಹೆಣ್ಣು ಮಕ್ಕಳಿಗೆ ಸರಕಾರಿ ನೌಕರಿ ಅತಿ ಶೀಘ್ರದಲ್ಲಿ ಸಿಗಲಿದೆ

ಈ ರಾಶಿಯ ಹೆಣ್ಣು ಮಕ್ಕಳಿಗೆ ಸರಕಾರಿ ನೌಕರಿ ಅತಿ ಶೀಘ್ರದಲ್ಲಿ ಸಿಗಲಿದೆ, ಈ ರಾಶಿಯ ವ್ಯವಹಾರಗಳಲ್ಲಿ ಬರೀ ಅಡಚಣೆ ಎದುರಿಸಬೇಕಾಗುವುದು, ಬುಧವಾರ-ನವೆಂಬರ್-27,2024 ಸೂರ್ಯೋದಯ: 06:31, ಸೂರ್ಯಾಸ್: 05:35 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ

ಸಂವಿಧಾನದ ಆಶಯಗಳು ಭಾವನಾತ್ಮಕ ಆಚರಣೆಗೆ ಸೀಮಿತವಾಗದಿರಲಿ: ಡಾ. ಎಂ. ಎಸ್. ಶೇಖರ್

  ಶಂಕರಘಟ್ಟ, ನ. 26: ಅಂಬೇಡ್ಕರ್ ಅವರ ವಿಚಾರಧಾರೆಗಳು ಮತ್ತು ಸಂವಿಧಾನದ ಆಶಯಗಳನ್ನು ಭಾವನಾತ್ಮಕ ಮಾತುಗಳಿಗೆ ಸೀಮಿತಗೊಳಿಸದೆ, ಬದ್ಧತೆಯೊಂದಿಗೆ ಅನುಷ್ಠಾನಗೊಳಿಸಬೇಕಾದ ಹೊಣೆಗಾರಿಕೆಯನ್ನು ನಾವೆಲ್ಲರೂ ನಿರ್ವಹಿಸಬೇಕೆಂದು ಸಾಹಿತಿ ಮತ್ತು ಚಿಂತಕ ಡಾ. ಎಂ. ಎಸ್. ಶೇಖರ್

error: Content is protected !!