ಉತ್ತರಪ್ರದೇಶ: ಸುಪ್ರೀಂ ಕೋರ್ಟ್ ಇದೀಗ ಯೋಗಿ ಆದಿತ್ಯ ನಾಥ್ ಸರ್ಕಾರಕ್ಕೆ ಕೆಲವೊಂದಿಷ್ಟು ವಿವರಣೆ ಕೇಳಿದೆ. ಎನ್ಕೌಂಟರ್ ವಿವರನ್ನು ನೀಡಲು ಸೂಚನೆ ನೀಡಲಾಗಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಗ್ಯಾಂಗ್ ಸ್ಟಾರ್ ಹಾಗೂ ರಾಜಕಾರಣಿ ಅತಿಕ್ ಹಾಗೂ ಆತನ ಸಹೋದರ ಅಶ್ರಪ್ ಅವರ ಪೊಲೀಸ್ ಕಸ್ಟಡಿ ಸಾವಿನ ಬಗ್ಗೆ ಇದೀಗ ಸುಪ್ರೀಂ ಕೋರ್ಟ್ ಕೇಸನ್ನು ಕೈಗೆತ್ತಿಕೊಂಡಿದೆ.
ಹೀಗಾಗಿ 2017ರಿಂದ ರಾಜ್ಯದಲ್ಲಿ ನಡೆದ 183 ಎನ್ಕೌಂಟರ್ ಗಳ ಬಗ್ಗೆ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್ ಯುಪಿ ಸರ್ಕಾರಕ್ಕೆ ತಿಳಿಸಿದೆ. ಉತ್ತರ ಪ್ರದೇಶದಲ್ಲಿ ಮಾತ್ರವಲ್ಲದೆ ಇತರ ರಾಜ್ಯಗಳಲ್ಲಿಯೂ ಹೆಚ್ಚುತ್ತಿರುವ ಪೊಲೀಸ್ ಎನ್‌ಕೌಂಟರ್‌ಗಳು ಮತ್ತು ಕಸ್ಟಡಿ ಸಾವಿನ ಪ್ರಕರಣಗಳ ಬಗ್ಗೆ ನ್ಯಾಯಮೂರ್ತಿ ಎಸ್‌ಆರ್ ಭಟ್ ನೇತೃತ್ವದ ಪೀಠವು ಕಳವಳ ವ್ಯಕ್ತಪಡಿಸಿದೆ.
ಜೈಲಿನ ಗೋಡೆಯೊಳಗೆ ಇಂತಹ ಘಟನೆಗಳು ಯಾಕೆ ಸಂಭವಿಸುತ್ತವೆ. ಆರೋಪಿಯ ವಿಚಾತಣೆಯ ಹಂತ ಮತ್ತು ಮಾರ್ಗಸೂಚಿಗಳು ಏನು..? ತನಿಖೆಯ ಸ್ಥಿತಿಗತಿಗಳೇನು..? ಯಾವ ಆರೋಪದ ಮೇಲೆ ತನಿಖೆ ನಡೆಸಲಾಗಿತ್ತು..? ಈ ಬೆಳವಣಿಗೆಗಳು ಒಂದು ರಾಜ್ಯವನ್ನು ಮೀರಿ ಯಾಕೆ ವಿವರಿಸುತ್ತಿವೆ..? ಹೀಗೆ ಹಲವು ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್ ಕೇಳಿದೆ. ಇದಕ್ಕೆ ಈಗ ಯೋಗಿ ಸರ್ಕಾರ ದಾಖಲೆಯ ಸಮೇತ ಉತ್ತರ ನೀಡಬೇಕಿದೆ.