ಈ ತರಕಾರಿಗಳನ್ನು ಹಸಿಯಾಗಿ ತಿನ್ನಬಾರದು !

1 Min Read

 

ತರಕಾರಿಗಳನ್ನು ಬೇಯಿಸಿ ತಿನ್ನುವುದರಿಂದ ಅದರಲ್ಲಿರುವ ಪೋಷಕಾಂಶ ಎಲ್ಲ ನೀರಿನಲ್ಲಿಯೇ ಹೋಗಿ ಬಿಡುತ್ತೆ, ಹೀಗಾಗಿ ಹಸಿ ಹಸಿಯಾಗಿಯೇ ತಿನ್ನಿ ಅಂತ‌ ಕೂಡ ಹಲವರು ಸಲಹೆ ಮಾಡುತ್ತಾರೆ. ಆದ್ರೆ ಕೆಲವೊಂದು ತರಕಾರಿಯನ್ನು ಹಸಿಯಾಗಿ ತಿಂದರೆ ಅದು ಅನಾರೋಗ್ಯಕ್ಕೂ ಕಾರಣವಾಗುತ್ತದೆ. ಆ ತರಕಾರಿಗಳು ಯಾವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಕೆಲವೊಂದು ತರಕಾರಿಗಳನ್ನು ಹಸಿಯಾಗಿಯೇ ತಿನ್ನಬೇಕು. ಆಗ ಜೀರ್ಣಕ್ರಿಯೆ ಸುಲಭವಾಗುತ್ತದೆ, ಪೋಷಕಾಂಶ ಹೆಚ್ಚಾಗುತ್ತದೆ. ಬೇಯಿಸಿದಾಗ ಅದರೊಳಗಿನ ಅಂಶ ಆವಿಯಾಗಿ, ಪೌಷ್ಟಿಕತೆ ಕಡಿಮೆಯಾಗುತ್ತದೆ. ಹೀಗಾಗಿಯೇ ಕೆಲವೊಂದು ಹಸಿಯಾಗಿ ತಿಂದರೆ ಇನ್ನು ಕೆಲವೊಂದನ್ನು ಬೇಯಿಸಿಯೇ ತಿನ್ನಬೇಕಾಗುತ್ತದೆ.

ಹೀಗೆ ತರಕಾರಿಯನ್ನು ಹಸಿಯಾಗಿ ತಿನ್ನುವುದರಿಂದ ದೇಹಕ್ಕೆ ಬ್ಯಾಕ್ಟೀರಿಯಾಗಳು, ವಿಷಗಳು ಮತ್ತು ಹಾನಿಕಾರಕ ವಸ್ತುಗಳು ಸೇರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳುತ್ತಾರೆ. ಹೀಗಾಗಿ ಯಾವ ತರಕಾರಿಗಳನ್ನು ಹಸಿಯಾಗಿ ತಿನ್ನಬಾರದು ಎಂಬುದನ್ನು ನೋಡೋಣಾ.

ಬಿಸಿ ಬದನೆಯನ್ನು ಹಸಿಯಾಗಿ ತಿನ್ನಬಾರದು. ಅದನ್ನು ಹಸಿಯಾಗಿ ತಿನ್ನುವುದಕ್ಕೂ ಸಾಧ್ಯವಿಲ್ಲ. ಆದರೆ ಚೆನ್ನಾಗಿ ಬೇಯಿಸಬೇಕು. ಒಮ್ಮೊಮ್ಮೆ ಕೈಗೊಜ್ಜು ಅದನ್ನೆಲ್ಲಾ ಮಾಡುವುದಕ್ಕೆ ಅರ್ಧಂಬರ್ಧ ಕೂಡ ಬೇಯಿಸಲಾಗಿರುತ್ತದೆ. ಇದರಿಂದ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.

ಇನ್ನು ಕ್ಯಾಪ್ಸಿಕಂ ತಿನ್ನುವಾಗ ಕೊಂಚ ಎಚ್ಚರ. ಅದರೊಳಗಿನ ಬೀಜಗಳು ಆರೋಗ್ಯಕ್ಕೆ ಹಾಕಿಕಾರಕ. ಹೀಗಾಗಿ ಮೊದಲು ಬೀಜಗಳನ್ನು ಚೆನ್ನಾಗಿ ತೆಗೆದು, ಬಳಿಕ ಬಿಸಿ ನೀರಿನಲ್ಲಿ ಚೆನ್ನಾಗಿ ಕುದಿಸಿ, ಅಡುಗೆ ಮಾಡಿ.

ಎಲೆ ಕೋಸು ಹಾಗೂ ಕೆಸವಿನ ಎಲೆಗಳು ಸಹ ದೇಹಕ್ಕೆ ಹಸಿಯಾಗಿ ತಿನ್ನುವುದಕ್ಕೆ ಒಳ್ಳೆಯದ್ದಲ್ಲ. ಸ್ಯಾಂಡ್ ವಿಜ್ ಎಲ್ಲಾ‌ ಮಾಡಿದಾಗ ಅಥವಾ ಚೈನೀಸ್ ಐಟಂ ರೀತಿಯ ಫುಡ್ ಗಳಲ್ಲಿ ಎಲೆಕೋಸನ್ನು ಹಸಿಯಾಗಿಯೇ ಬಳಕೆ‌ ಮಾಡಲಾಗಿರುತ್ತದೆ.

Share This Article
Leave a Comment

Leave a Reply

Your email address will not be published. Required fields are marked *