ನವದೆಹಲಿ: ಈ ಬಾರಿಯ ಮುಂಗಾರು ಅಧಿವೇಶನ ಮುಕ್ತಾಯವಾಗಿದೆ. ಸಂಸತ್ ಮುಂಗಾರು ಅಧಿವೇಶನ ಅನಿರ್ಧಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಅದರಲ್ಲೂ ಈ ಬಾರಿಯ ಅಧಿವೇಶನದಲ್ಲಿ ಮಣಿಪುರದ ಘಟನೆ ಸದ್ದು ಮಾಡಿದೆ.
ಮಣಿಪುರದ ಘಟನೆ ವಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಯುದ್ಧ ಸಾರಿತ್ತು. ಪ್ರಧಾನಿ ಮೋದಿಯವರು ಕೂಡ ವಿಪಕ್ಷಗಳ ಮಾತಿಗೆ ಉತ್ತರ ನೀಡಿರಲಿಲ್ಲ. ಆಡಳಿತ ಪಕ್ಷ ಮತ್ತು ವಿಪಕ್ಷಗಳ ತಿಕ್ಕಾಟದಿಂದ ಮುಂಗಾರು ಅಧಿವೇಶನ ಮುಕ್ತಾಯವಾಗಿದೆ.
ಈ ಬಾರಿಯ ಸಂಸತ್ ಅಧಿವೇಶನ ಸಾಕಷ್ಟು ಗಮನ ಸೆಳೆಯಿತು. 17 ದಿನಗಳಲ್ಲಿ ಒಟ್ಟು 44 ಗಂಟೆ 13 ನಿಮಿಷ ಕಾಲ ಅಧಿವೇಶನ ನಡೆಸಿದ್ದೇವೆ ಎಂದು ಸ್ಪೀಕರ್ ಓಂ ಬಿರ್ಲಾ ಮಾಹಿತಿ ನೀಡಿದ್ದಾರೆ. 20 ಮಸೂದೆಗಳನ್ನು ಪರಿಚಯಿಸಿದ್ದು ಒಟ್ಟು 22 ಕರಡು ಮಸೂದೆಗಳನ್ನ ಈ ಬಾರಿ ಅಂಗೀಕರಿಸಲಾಗಿದೆ. ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿ ಇದೀಗ ಆದೇಶ ಹೊರಡಿಸಲಾಗಿದೆ.