ಮಂಗಳೂರು: ಧರ್ಮಸ್ಥಳದ ಸೌಜನ್ಯ ಹತ್ಯೆ ಕೇಸ್ ಮರುತನಿಖೆ ನಡೆಯುತ್ತಿದೆ. ಸೌಜನ್ಯ ಕೊಲೆಯಾಗಿ ಹತ್ತು ವರ್ಷ ಕಳೆದರೂ ಇನ್ನು ಆ ಕೊಲೆಗೊಂದು ನ್ಯಾಯ ಸಿಕ್ಕಿಲ್ಲ. ಹೀಗಾಗಿ ಸೌಜನ್ಯ ಸಾವಿಗೆ ನ್ಯಾಯ ಬೇಕು ಅಂತ ರಾಜ್ಯಾದ್ಯಂತ ಜನ ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ಮಾತನಾಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸರ್ಕಾರದ ಮಟ್ಟದಲ್ಲಿ ಮರು ತನಿಖೆಗೆ ತೀರ್ಮಾನವಾಗಲಿದೆ ಎಂದು ತಿಳಿಸಿದ್ದಾರೆ.
ಸೌಜನ್ಯ ಪ್ರಕರಣದ ಮರುತನಿಖೆಯ ವಿಚಾರದಲ್ಲಿ ಸರ್ಕಾರ ಎಲ್ಲವನ್ನು ಗಮನಿಸುತ್ತಿದೆ. ಎಲ್ಲಾ ಕಡೆಗಳಿಂದಾನು ಮಾಹಿತಿ ಪಡೆಯುತ್ತಿದೆ. ಸಿಬಿಐ ಈಗಾಗಲೇ ವರದಿಯನ್ನು ಕೊಟ್ಟಿದೆ. ಆದರೆ ಈಗ ಸಾಕಷ್ಟು ಜನ ಇದರ ಮರುತನಿಖೆಗೆ ಆಗ್ರಹಿಸಿದ್ದಾರೆ. ಇದು ಸರ್ಕಾರದ ಮಟ್ಟದಲ್ಲಿದೆ. ಹೀಗಾಗಿ ಸರ್ಕಾರ ಎಲ್ಲಾ ರೀತಿಯ ಮಾಹಿತಿಯನ್ನು ಪಡೆದುಕೊಳ್ಳುತ್ತಿದೆ. ಸಿಎಂ ಮತ್ತು ಗೃಹ ಇಲಾಖೆ ಕೇಸ್ ನ ಡಿಟೈಲ್ ಬರಲಿದೆ ಎಂದು ತಿಳಿಸಿದೆ. ನಾನು ಕೂಡ ಗೃಹ ಇಲಾಖೆಯಿಂದ ಮಾಹಿತಿ ಪಡೆಯುತ್ತೇನೆ ಎಂದಿದ್ದಾರೆ.
ಸೌಜನ್ಯ ಪ್ರಕರಣದಲ್ಲಿ ಇನ್ನು ನ್ಯಾಯ ಸಿಕ್ಕಿಲ್ಲ. ಅವರತಂದೆ ತಾಯಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಆರೋಪಿ ಎಂದು ಅರೆಸ್ಟ್ ಆಗಿದ್ದಾತ ಆರೋಪಿಯಾಗಿರಲಿಲ್ಲ. ಇದೀಗ ಸೌಜನ್ಯಾಳ ಸಾವಿಗೆ ನ್ಯಾಯ ಬೇಕು ಅಂತ ಸೋಷಿಯಲ್ ಮೀಡಿಯಾ ಸೇರಿದಂತೆ, ಸಾಕಷ್ಟು ಜನರಿಂದ ಒತ್ತಾಯ ಕೇಳಿ ಬರುತ್ತಿದೆ.