ಹಣದುಬ್ಬರದಿಂದ ದೇಶಾದ್ಯಂತ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ಟೊಮೆಟೊ ಬೆಲೆ ಕೂಡ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸದ್ಯ ದೇಶದೆಲ್ಲೆಡೆ ಟೊಮೆಟೊ ಬೆಲೆ ವಿಚಾರ ಬಾರೀ ಚರ್ಚೆಯಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ಹಣದುಬ್ಬರ ತಡೆಗೆ ಶತಾಯಗತಾಯ ಪ್ರಯತ್ನಿಸುತ್ತಿದೆ. ಹೀಗಿದ್ದರೂ ಎರಡು ತಿಂಗಳಿನಿಂದ ಟೊಮೇಟೊ ಬೆಲೆ ಕಡಿಮೆಯಾಗಿಲ್ಲ. ಈಗಲೂ ದೇಶದ ವಿವಿಧ ನಗರಗಳಲ್ಲಿ ಟೊಮೆಟೊ ಬೆಲೆ ಕೆಜಿಗೆ ರೂ.150ರಿಂದ 180 ರವರೆಗೂ ಮಾರಾಟವಾಗುತ್ತಿದೆ. ಆದರೆ ಹೆಚ್ಚಿನ ನಗರಗಳಲ್ಲಿ ಟೊಮ್ಯಾಟೊ ದರ ಸ್ವಲ್ಪ ಇಳಿಕೆಯಾಗಿದೆ.
ಪ್ರಸ್ತುತ ಅಸ್ಸಾಂನಲ್ಲಿ ಅತ್ಯಂತ ಅಗ್ಗದ ಟೊಮೆಟೊವನ್ನು ಮಾರಾಟ ಮಾಡಲಾಗುತ್ತಿದೆ. ಇಲ್ಲಿನ ಬಾರ್ಪೇಟ್
ಮಾರುಕಟ್ಟೆಯಲ್ಲಿ ಒಂದು ಕಿಲೋ ಟೊಮೆಟೊ ಬೆಲೆ 40 ರೂಪಾಯಿ. ಇಷ್ಟೇ ಅಲ್ಲದೇ ಪಂಜಾಬ್‌ನ ರೋಪರ್‌ನಲ್ಲಿ ಅಗ್ಗದ ಟೊಮೆಟೊಗಳನ್ನು ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಟೊಮೆಟೊ ಬೆಲೆ ಕೆಜಿಗೆ 41 ರೂಪಾಯಿಗಳು.
ಆದರೆ ಪಂಜಾಬ್‌ನ ರಾಜಧಾನಿ ಚಂಡೀಗಢದಲ್ಲಿ ಟೊಮೇಟೊ ಕೆಜಿಗೆ 140 ರೂಪಾಯಿಗೆ ಮಾರಾಟಮಾಡುತ್ತಿದ್ದಾರೆ.
ಇಲ್ಲಿ ಜುಲೈ ತಿಂಗಳಿನಲ್ಲಿ ಅತ್ಯಂತ ದುಬಾರಿ ಬೆಲೆಗೆ ಟೊಮೇಟೊ ಮಾರಾಟವಾಗಿದೆ ಎಂಬುದು ಗಮನಾರ್ಹ. ಆಗ ಟೊಮೆಟೊ ಬೆಲೆ ಕೆಜಿಗೆ 350 ರೂಪಾಯಿ ವರೆಗೂ ಏರಿಕೆಯಾಗಿತ್ತು. ಜಮ್ಮು ಮತ್ತು ಕಾಶ್ಮೀರವು ಅಗ್ಗದ ಟೊಮೆಟೊಗಳ ವಿಷಯದಲ್ಲಿ ಮೂರನೇ ಸ್ಥಾನದಲ್ಲಿದೆ. ಅದರ ರಾಜಧಾನಿ ಶ್ರೀನಗರದಲ್ಲಿ ಒಂದು ಕಿಲೋ ಟೊಮೆಟೊ ಬೆಲೆ 63 ರೂಪಾಯಿ. ವಿಶೇಷವೆಂದರೆ ಇದೇ ರಾಜ್ಯದಲ್ಲಿ ಟೊಮೆಟೊ ಬೆಲೆಯಲ್ಲಿ ಭಾರಿ ವ್ಯತ್ಯಾಸವಾಗಿದೆ. ಜಮ್ಮುವಿನಲ್ಲಿ ಟೊಮೆಟೊ ಕೆಜಿಗೆ 167 ರೂ.ಗೆ ಮಾರಾಟವಾಗುತ್ತಿದೆ.
ಆದರೆ ಜಮ್ಮುವಿಗೆ ಹೋಲಿಸಿದರೆ ಕುಪ್ವಾರದಲ್ಲಿ ಟೊಮೆಟೊ ಬೆಲೆ ತುಂಬಾ ಕಡಿಮೆ. ಇಲ್ಲಿ ಟೊಮೆಟೊ ಕೆಜಿಗೆ 92 ರೂಪಾಯಿ .
ಶ್ರೀನಗರದ ನಂತರ, ಹರ್ಯಾಣದಲ್ಲಿ ಕಡಿಮೆ ಬೆಲೆಗೆ ಟೊಮೆಟೊಗಳನ್ನು ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಒಂದು ಕಿಲೋ ಟೊಮೆಟೊ ಬೆಲೆ 90 ರೂ. ಮುಂದಿನ ದಿನಗಳಲ್ಲಿ ಟೊಮೆಟೊ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ ಎನ್ನುತ್ತಾರೆ ಇಲ್ಲಿನ ವ್ಯಾಪಾರಿಗಳು. ಆದರೆ ಹರಿಯಾಣದ ಎಲ್ಲಾ ಜಿಲ್ಲೆಗಳಲ್ಲಿ ಟೊಮೆಟೊ ಬೆಲೆ ಒಂದೇ ಆಗಿಲ್ಲ. ಗ್ರಾಹಕ ವ್ಯವಹಾರಗಳ ಇಲಾಖೆಯ ವೆಬ್‌ಸೈಟ್ ಪ್ರಕಾರ, ಹರಿಯಾಣದ ಗುರುಗ್ರಾಮ್‌ನಲ್ಲಿ ಒಂದು ಕಿಲೋ ಟೊಮೆಟೊ ಬೆಲೆ 140 ರೂ. ಆದರೆ, ದೆಹಲಿಯಲ್ಲಿಯೂ ಟೊಮೆಟೊ ಬೆಲೆ ಕೆಜಿಗೆ ಕೇವಲ 140 ರೂಪಾಯಿಗಳಾಗಿದೆ. ಒಟ್ಟಿನಲ್ಲಿ ಗಗನಕ್ಕೇರಿದ್ದ ಬೆಲೆ ನಿಧಾನವಾಗಿ ಕಡಿಮೆಯಾಗುತ್ತಿದೆ.