ಆಯುಷ್ಮಾನ್ ಭಾರತ್ ಯೋಜನೆ ನರೇಂದ್ರ ಮೋದಿ ಸರ್ಕಾರದ ಮಹತ್ವದ ಯೋಜನೆಯಾಗಿದೆ. ಆದರೆ ಇದರಲ್ಲೂ ಗೋಲ್ಮಾಲ್ ನಡೆದಿದೆ ಎಂದು ಸಿಎಜಿ ವರದಿ ಸಲ್ಲಿಸಿದೆ. ಬಿಪಿಎಲ್ ಕಾರ್ಡುದಾರ ಕುಟುಂಬಗಳಿಗೆ ಸುಮಾರು ಐದು ಲಕ್ಷದವರೆಗಿನ ಚಿಕಿತ್ಸ ಎಉಚಿತವಾಗಿಸುವ ಯೋಜನೆ ಇದಾಗಿದೆ.
ಆಡಿಟರ್ ಅಂಡ್ ಕಂಟ್ರೋಲರ್ ಸಂಪೂರ್ಣವಾಗಿ ಈ ಯೋಜನೆಯನ್ನು ಪರಿಶೀಲಿಸಿದ್ದಾರೆ. ಸಿಎಜಿ ವರದಿ ಪ್ರಕಾರ, ಆಯುಷ್ಮಾನ್ ಯೋಜನೆಯ 7.5 ಲಕ್ಷ ಫಲಾನುಭವಿಗಳ ಮೊಬೈಲ್ ಸಂಖ್ಯೆ ಒಂದೇ ಆಗಿದೆ. ಅದು 9999999999 ಈ ಸಂಖ್ಯೆಯನ್ನು ಆಯುಷ್ಮಾನ್ ಯೋಜನೆಯ ಫಲಾನುಭವಿಗಳ ಸಂಖ್ಯೆಯಾಗಿದೆ. ಒಂದೇ ನಂಬರ್ ನೀಡಿರುವುದೇ ಆಶ್ಚರ್ಯಕ್ಕೆ ಕಾರಣವಾಗಿದೆ.
ಮೊಬೈಲ್ ಸಂಖ್ಯೆಯಲ್ಲಿ ಗೋಲ್ಮಾಲ್ ಕಂಡು ಹಿಡಿಯಲಾಗಿದೆ. ತಪ್ಪು ಮೊಬೈಲ್ ಸಂಖ್ಯೆ ನೀಡಲಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ದೇಶದ ಬಿಪಿಎಲ್ ಕುಟುಂಬಗಳಿಗೆ 5 ಲಕ್ಷ ರೂಪಾಯಿವರೆಗೂ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಸರ್ಕಾರದ ಆರೋಗ್ಯ ವಿಮಾ ಯೋಜನೆಯಲ್ಲಿ ಫಲಾನುಭವಿಗಳು ಸರ್ಕಾರಿ ಆಸ್ಪತ್ರೆಗಳು, ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷ ರೂಪಾಯಿವರೆಗೂ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ಈ ಆಯುಷ್ಮಾನ್ ಭಾರತ್ ಯೋಜನೆ ಮೂಲಕ ಶಸ್ತ್ರಚಿಕಿತ್ಸೆಗೂ ಅವಕಾಶ ಇದೆ. ಆದರೆ ಈ ಮಹತ್ವದ ಯೋಜನೆಯಲ್ಲೇ ಗೋಲ್ ಮಾಲ್ ನಡೆದಿರೋದು ಅಚ್ಚರಿಯ ಸಂಗತಿಯಾಗಿದೆ. ಕರ್ನಾಟಕದಲ್ಲೂ ಸಾವಿರಾರು ಜನ ಆಯುಷ್ಮಾನ್ ಭಾರತ್ ಯೋಜನೆ ಕಾರ್ಡ್ ಮಾಡಿಸಿಕೊಂಡಿದ್ದಾರೆ