ಮೈಸೂರು: ಕಾಂಗ್ರೆಸ್ ಸರ್ಕಾರದಲ್ಲಿ ಚೆಲುವರಾಯಸ್ವಾಮಿ ಕೃಷಿ ಸಚಿವರಾಗಿ ಇನ್ನು ಮೂರು ತಿಂಗಳು ಕಳೆದಿದೆ. ಅಷ್ಟರಲ್ಲಿಯೇ ಭ್ರಷ್ಟಾಚಾರದ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಆರೋಪ ಕೇಳಿ ಬಂದಿದೆ. ಈ ಬೆನ್ನಲ್ಲೇ ಈ ಕೇಸನ್ನು ಸಿಐಡಿಗೆ ವಹಿಸಲಾಗಿದೆ. ಈಗಾಗಲೇ ಇದರ ತನಿಖೆ ಶುರುವಾಗಿದೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಪತ್ರವೊಂದು ಬಂದಿದೆ. ಆ ಪತ್ರ ಎಲ್ಲಿಂದ ಬಂರು, ಬರೆದವರು ಯಾರು, ತಲುಪಿಸಿದವರು ಯಾರೂ ಎಂಬ ವಿಚಾರವಾಗಿ ತನಿಖೆ ನಡೆಯುತ್ತಿದೆ. ಸಿಐಡಿ ಅಧಿಕಾರಿಗಳು ಸದ್ಯ ಪತ್ರದ ಹಿಂದೆ ಬಿದ್ದಿದ್ದು, ನಿರಾಸೆಯನ್ನು ಕಂಡಿದ್ದಾರೆ.
ಸಿಐಡಿ ಐಜಿಪಿ ಪ್ರವೀಣ್ ಮಧುಕರ್ ಪವಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಅದರ ಭಾಗವಾಗಿ ನಿನ್ನೆಯೇ ಮಂಡ್ಯ ಕೃಷಿ ಕಚೇರಿಯ ಜಂಟಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಂಟಿ ನಿರ್ದೇಶಕ ಅಶೋಕ್ ಅವರಿಂದಾನೂ ಮಾಹಿತಿ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಆ ಪತ್ರ ಎಲ್ಲಿಂದ ಬಂತು ಎಂಬ ಮಾಹಿತಿಯನ್ನು ಪಡೆದು, ಮಂಡ್ಯದಿಂದ ಮೈಸೂರಿಗೆ ಹೋಗಿದ್ದಾರೆ.
ಮೈಸೂರಿನ ಸರಸ್ವತಿ ಪುರಂ ಅಂಚೆ ಕಚೇರಿಯಿಂದ ಆ ಪತ್ರ ಬೆಂಗಳೂರಿನ ರಾಜ್ಯಪಾಲರ ಕಚೇರಿಗೆ ರವಾನೆಯಾಗಿದೆ. ಜುಲೈ 14ರಂದು ಪತ್ರ ರವಾನೆಯಾಗಿದೆ. ಸಿಐಡಿ ಅಧಿಕಾರಿಗಳು ಅಂಚೆ ಕಚೇರಿಯ ಸಿಬ್ಬಂದಿಗಳನ್ನು ಸುಮಾರು ಒಂದು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಮಾಹಿತಿಯನ್ನು ಕಲೆ ಹಾಕಿದ್ದಾರೆ. ಬಳಿಮ ಸಿಸಿಟಿವಿಯನ್ನು ಪರಿಶೀಲನೆ ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಸರಸ್ವರಿಪುರಂ ಅಂಚೆ ಕಚೇರಿಯಿಂದ ಪತ್ರ ರವಾನೆಯಾಗಿರುವ ಮಾಹಿತಿ ಮಾತ್ರ ಸಿಕ್ಕಿದೆ. ಅಂದಿನ ಸಿಸಿಟಿವಿ ಫೂಟೇಜ್ ಓವರ್ ಲ್ಯಾಪ್ ಆಗಿರುವ ಕಾರಣ, ಸಿಐಡಿ ಅಧಿಕಾರಿಗಳಿಗೆ ಆ ವ್ಯಕ್ತಿಯ ಸುಳಿವು ಸಿಕ್ಕಿಲ್ಲ.