ಮೊದಲು ಒಂದು ಕಾಲ ಇತ್ತು. ಬ್ರಾಂಡೆಡ್ ಚಪ್ಪಲಿಗಳನ್ನೇ ಎಲ್ಲರೂ ಪ್ರಿಫರ್ ಮಾಡ್ತಾ ಇದ್ರು. ಈಗಲೂ ಬ್ರಾಂಡೆಡ್ ಚಪ್ಪಲಿಗಳನ್ನೇ ಹಾಕ್ತಾರೆ. ಆದ್ರೆ ಅದಕ್ಕೂ ಮೀರಿ ಅಂದದ ಚೆಂದದ ಚಪ್ಪಲಿಗಳು ಮಾರುಕಟ್ಟೆಗೆ ಬಂದಿವೆ. ಹೀಗಾಗಿ ಪಾದರಕ್ಷೆಯ ಕಂಪನಿಗಳು ಸವಾಲೊಂದನ್ನು ಎದುರಿಸುತ್ತಿವೆ. ಈ ಬಗ್ಗೆ ವಿಕೆಸಿ ಪ್ರೈಡ್ ಮಾಲೀಕ ಬೇಸರ ಹೊರ ಹಾಕಿದ್ದಾರೆ.
ಟ್ವೀಟ್ ಮಾಡಿರುವ ರಜಾಕ್, 3-40 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ವಲಯಕ್ಕೆ ಈಗ ಬೆಂಬಲದ ಅಗತ್ಯವಿದೆ ಅನ್ನೋದನ್ನ ಒತ್ತಿ ಹೇಳಿದ್ದಾರೆ. ಕ್ವಾಲಿಟಿ ಕಂಟ್ರೋಲ್ ಆರ್ಡರ್ ಮತ್ತು ಅಧಿಕಾರಿಗಳು ತಕ್ಷಣವೇ ಮಧ್ಯೆ ಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. ಭಾರತದ ಆರ್ಥಿಕತೆಗೆ ಪಾದರಕ್ಷೆಯ ಕಂಪನಿಯೂ ಗಮನಾರ್ಹವಾದ ಕೊಡುಗೆ ನೀಡಿದೆ. ಈಗ ಸಂಕಷ್ಟಕ್ಕೆ ಸಿಲುಕಿದೆ ಎಂದು ತಿಳಿಸಿದ್ದಾರೆ.
ಕೋವಿಡ್‌ನಿಂದಾಗಿ ಪೂರೈಕೆಯ ಸರಪಳಿ ಹಾಳಾಗಿಬಿಡ್ತು. ಉತ್ಪಾದನೆ ಸ್ಥಗಿತವಾಯ್ತು. ಗ್ರಾಹಕರ ಬೇಡಿಕೆಯಲ್ಲೂ ಕುಸಿತ ಆಗಿಬಿಡ್ತು. ಇದು ಸಂಪೂರ್ಣ ಉತ್ಪಾದನೆ ಮತ್ತು ಚಿಲ್ಲರೆ ಮಾರ್ಕೆಟ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು ಅನ್ನೋದು ರಜಾಕ್ ಅವರು ವ್ಯಕ್ತಪಡಿಸಿರೋ ಕಳವಳವಾಗಿದೆ.