Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜವಾಹರ ನವೋದಯ ವಿದ್ಯಾಲಯ: 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಆಗಸ್ಟ್ 10 ಕೊನೆಯ ದಿನ

Facebook
Twitter
Telegram
WhatsApp

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಸುದ್ದಿಒನ್, ಚಿತ್ರದುರ್ಗ, (ಆ.06):  ಹಿರಿಯೂರು ತಾಲ್ಲೂಕಿನ ಉಡುವಳ್ಳಿಯ ಜವಾಹರ್ ನವೋದಯ ವಿದ್ಯಾಲಯಕ್ಕೆ 2024-24ನೇ ಸಾಲಿಗೆ 6ನೇ ತರಗತಿಗೆ ಪ್ರವೇಶ ಪಡೆಯಲು ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಮಾನ್ಯತೆ ಪಡೆದ ಶಾಲೆಗಳ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಗಸ್ಟ್ 10 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ವೆಬ್‍ಸೈಟ್‍ನಲ್ಲಿ ಅರ್ಜಿ ಸಲ್ಲಿಸಬಹುದು.
2024-25 ರ ಅವಧಿಯ  ಆಯ್ಕೆ ಪರೀಕ್ಷೆಗಾಗಿ  ಆನ್‍ಲೈನ್ ಮೂಲಕ ಜವಾಹರ ನವೋದಯ ವಿದ್ಯಾಲಯದಲ್ಲಿ 6 (ಗಿI) ನೇ ತರಗತಿಯ ಪ್ರವೇಶಕ್ಕಾಗಿ ಆನ್ ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2024ರ ಜನವರಿ 20ರಂದು ಪ್ರವೇಶ ಪರೀಕ್ಷೆ ನಡೆಯಲಿದೆ.

https://cbseitms.rcil.gov.in/nvs/Index/Registration

ವೆಬ್‍ಸೈಟ್‍ನಲ್ಲಿ ಅರ್ಜಿ ಸಲ್ಲಿಸಬಹುದು.

ಕೇಂದ್ರ ಸರ್ಕಾರದ  ಶಿಕ್ಷಣ ಸಚಿವಾಲಯದಿಂದ ಸ್ಥಾಪಿಸಲ್ಪಟ್ಟ ಸ್ವಯತ್ತ ಶಿಕ್ಷಣ ಸಂಸ್ಥೆ ಅಡಿಯಲ್ಲಿ  ದೇಶಾದಾದ್ಯಂತ  ಸ್ಥಾಪಿತದವಾದ  ಸುಮಾರು 660 ನವೋದಯ ವಿದ್ಯಾಲಯಗಳಲ್ಲಿ   1986 ರಲ್ಲಿ ಸ್ಥಾಪಿತವಾದ ಜವಾಹರ ನವೋದಯ ವಿದ್ಯಾಲಯ ಚಿತ್ರದುರ್ಗ, ನವೋದಯವು  ಒಂದು ಉತ್ತಮ ವಸತಿ ವಿದ್ಯಾಲಯವಾಗಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಿಂದ  08 ಕಿಲೋಮೀಟರ್ ದೂರದ ಉಡುವಳ್ಳಿ ಎಂಬ ಗ್ರಾಮದಲ್ಲಿ  32 ಎಕರೆ ವಿಸ್ತೀರ್ಣವುಳ್ಳ  ಸುಂದರ ಹಸಿರು ಪ್ರಕೃತಿಯ ವಾತವರಣದ ಮಧ್ಯೆ  ಕಂಗೊಳಿಸುತ್ತಿರುವ ವಸತಿ ವಿದ್ಯಾಲಯದಲ್ಲಿ  ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ವಿದ್ಯಾಭ್ಯಾಸ ಮತ್ತು  ಉಚಿತ ವಸತಿ ಸೌಲಭ್ಯವನ್ನು ನೀಡಲಾಗುತ್ತಿದೆ.

ಜವಾಹರ ನವೋದಯ ವಿದ್ಯಾಲಯವು ಸಿ.ಬಿ.ಎಸ್.ಇ  ಯ  ಮಾರ್ಗದರ್ಶನದ ಅಡಿಯಲ್ಲಿ  ನಡೆಯುತ್ತಿದೆ. 6 ರಿಂದ 12ನೇ ತರಗತಿಯವರೆಗೆ ಗುಣಾತ್ಮಕ  ಶಿಕ್ಷಣ ನೀಡುವ ವಿದ್ಯಾಲಯವಾಗಿದೆ.11 ಮತ್ತು 12 ನೆಯ ತರಗತಿಯು  ವಿಜ್ಞಾನ ವಿಭಾಗವನ್ನು ಹೊಂದಿದೆ.

ಸೌಲಭ್ಯಗಳು:  ನುರಿತ ಅನುಭವಿ ಶಿಕ್ಷಕರನ್ನು  ನಿಯೋಜಿಸಲಾಗಿದೆ.  ಗುಣಾತ್ಮಕ ಶಿಕ್ಷಣ ನೀಡಲಾಗುವುದು.     ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಒಳಗೊಂಡ ಉತ್ತಮ ಕಟ್ಟಡವಿದೆ.   ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಊಟ ಮತ್ತು ವಸತಿ ಸೌಲಭ್ಯವಿದೆ. ವಿದ್ಯಾರ್ಥಿಗಳಿಗೆ ಹಿಂದಿ ಮಾತನಾಡುವ ರಾಜ್ಯಕ್ಕೆ ವಲಸೆ ಕಳುಹಿಸುವ ಮೂಲಕ ಮಕ್ಕಳಿಗೆ ಬೇರೆ ರಾಜ್ಯದ ಸಂಸ್ಕøತಿಯ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತದೆ. ಉತ್ತಮ  ಕ್ರೀಡೆಯ ಸೌಲಭ್ಯವಿದೆ. ಎನ್ ಸಿ ಸಿ, ಸ್ಕೌಟ್ಸ್ – ಗೈಡ್ಸ್,ಎಸ್.ಪಿ.ಸಿ  ಮತ್ತು ಎನ್ ಎಸ್ ಎಸ್ ಗೆ ಉತ್ತೇಜನ ನೀಡಲಾಗುತ್ತದೆ.      ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳುನ್ನು ಪ್ರತಿ ವಾರ ಹಮ್ಮಿಕೊಳ್ಳಲಾಗುತ್ತದೆ.

ಈ ವಿದ್ಯಾಲಯದಲ್ಲಿ  435 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, 11 ಮತ್ತು 12 ನೆಯ ತರಗತಿಯು  ವಿಜ್ಞಾನ ವಿಭಾಗವನ್ನು ಹೊಂದಿದೆ. ಈ ವಿದ್ಯಾಲಯವು ಉತ್ತಮ ಗ್ರಂಥಾಲಯ, ಕಂಪ್ಯೂಟರ ಲ್ಯಾಬ್, ರಾಸಾಯನ ಶಾಸ್ತ್ರ, ಭೌತ ಶಾಸ್ತ್ರ, ಜೀವಶಾಸ್ತ್ರ ಮತ್ತು  ಗಣಿತ  ಪ್ರಯೋಗಾಲಯಗಳಿವೆ.  ವಿಶೇಷವಾಗಿ  ಅಟಲ್ ಟಿಂಕರಿಂಗ್ ಲ್ಯಾಬ್, ಮತ್ತು  ಕೇಂದ್ರ ಸರ್ಕಾರವು  ದೇಶದಾದ್ಯಂತ ಕೆಲವೇ ವಿದ್ಯಾಲಯಕ್ಕೆ ನೀಡಿರುವ  ವಿಜ್ಞಾನ ಜ್ಯೋತಿ ಕಾರ್ಯಕ್ರಮವು  ಈವಿದ್ಯಾಲಯದ  ವಿಶೇಷತೆಯಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಹೆಣ್ಣುಮಕ್ಕಳಿಗೆ  ವೈಜ್ಞಾನಿಕ ಮನೋಭಾವ  ವೃದ್ಧಿಸುವ ಸಲುವಾಗಿ ವಿದ್ಯಾರ್ಥಿ ವೇತನ ಮತ್ತು  ವಿಜ್ಞಾನಿಗಳಿಂದ ವಿಶೇಷ ಉಪನ್ಯಾಸ ನೀಡಲಾಗುತ್ತಿದೆ. ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವವೃದ್ಧಿಸುವುದಕ್ಕಾಗಿ  ವೈವಿಧ್ಯಮಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಸದನದ ಮಕ್ಕಳನ್ನು ನೋಡಿಕೊಳ್ಳಲು ಶಿಕ್ಷಕ, ಶಿಕ್ಷಕಿಯರೇ ಸದನ ಪಾಲಕ ಪಾಲಕಿಯರಾಗಿರುತ್ತಾರೆ.  ಈ ಮಕ್ಕಳ  ಪ್ರಥಮ  ಚಿಕಿತ್ಸೆಗಾಗಿ ಶೂಶ್ರೂಷಕಿಯರು ( ನರ್ಸ್) ಇರುತ್ತಾರೆ.

ಉಚಿತ ಸೌಲಭ್ಯಗಳು: ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಸಮವಸ್ತ್ರ, ಪಠ್ಯಪುಸ್ತಕಗಳು, ನೋಟ್ ಬುಕ್ ಹಾಗೂ ದೈನಂದಿನ ಉಪಯೋಗಿ ಮೂಲಭೂತ ಅವಶ್ಯಕ ವಸ್ತುಗಳನ್ನು ನೀಡಲಾಗುವುದು. ಪೌಷ್ಠಿಕಾಂಶವುಳ್ಳ ಉಚಿತ ಊಟದ ಸೌಲಭ್ಯವಿದೆ.

ರಕ್ಷಣೆ ಮತ್ತು ಭದ್ರತೆ: ರಕ್ಷಣೆ ಮತ್ತು ಭದ್ರತೆಯ ವಿಷಯದಲ್ಲಿ  ನವೋದಯ ವಿದ್ಯಾಲಯವು ವಿಶೇಷ ಆದ್ಯತೆ ನೀಡುತ್ತದೆ. ಸದನ ಪಾಲಕ,ಪಾಲಕಿಯರು ಮಕ್ಕಳ ಮನೋಭಾವವನ್ನರಿತು  ಅವರ ಸರ್ವತೋಮುಖ ಏಳ್ಗೆಗಾಗಿ ಶ್ರಮಿಸುತ್ತಾರೆ. ಮಕ್ಕಳ ಮಾನಸಿಕ ತುಮುಲಗಳನ್ನು ಪರಿಹರಿಸಲು  ಮನೋವೈಜ್ಞಾನಿಕ ಸಲಹೆಗಾರರಿರುತ್ತಾರೆ. ಬಾಲಕಿಯರಿಗಾಗಿ  ಮ್ಯಾಟ್ರನ್ ವ್ಯವಸ್ಥೆಯಿದೆ.

ವಿದ್ಯಾಲಯದ ಗತಿವಿಧಿ: ಬೆಳಗ್ಗೆ 5:30ಕ್ಕೆ ವ್ಯಾಯಮ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಗತಿವಿಧಿ ಆರಂಭವಾಗುತ್ತದೆ. 7-15 ಕ್ಕೆ ಪ್ರಾರ್ಥನಾ ಸಭೆ ನಡೆಯುತ್ತದೆ, ತದನಂತರ 7-40 ರಿಂದ 1-30 ರ ವರಗೆ ಶೈಕ್ಷಣಿಕ ಗತಿವಿಧಿಗಳು ನಡೆಯುತ್ತವೆ. 3-00 ರಿಂದ 4-30 ರವರಗೆ ಉಪಚಾರಾತ್ಮಕ ಶಿಕ್ಷಣ.         ( ರೆಮಿಡಿಯಲ್) 4-40 ರಿಂದ 5-45 ವರೆಗೆ  ಕ್ರೀಡೆಗಳು ನಡೆಯುತ್ತವೆ. 6-30ರಿಂದ 8-00 ಮಕ್ಕಳ ಸ್ವ- ಅಧ್ಯಯನ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ನಡೆಯುತ್ತದೆ. ಪರೀಕ್ಷೆಯ ಸಂದರ್ಭದಲ್ಲಿ ಮಕ್ಕಳಿಗಾಗಿ ವಿಶೇಷ ತರಗತಿಗಳನ್ನು ತಗೆದುಕೊಳ್ಳಲಾಗುವುದು.

ವಲಸೆ ಪದ್ಧತಿ  : ಪ್ರತಿವರ್ಷವು 9 ನೆಯ ತರಗತಿಯ ಪ್ರತಿಶತ 30%  ಮಕ್ಕಳು ಈ ವಿದ್ಯಾಲಯದಿಂದ ಮಧ್ಯಪ್ರದೇಶ ರಾಜ್ಯದ ಜವಾಹರ ನವೋದಯ ವಿದ್ಯಾಲಯ ದೇವಾಸ್ ಜಿಲ್ಲೆಗೆ ಒಂದು  ವರ್ಷಕ್ಕೆ ಅಧ್ಯಯನ ಮಾಡಲು ವಲಸೆ ವಿದ್ಯಾರ್ಥಿಗಳಾಗಿ ಹೋಗುತ್ತಾರೆ. ಈ ನೀತಿಯು ಮಕ್ಕಳಲ್ಲಿ ರಾಷ್ಟ್ರೀಯ ಐಕ್ಯತ ಮನೋಭಾವವನ್ನು ಬೆಳೆಸುವುದಾಗಿದೆ. ಇದರ ಜೊತೆಗೆ ಅನ್ಯ ಭಾಷೆ ಮತ್ತು ಸಂಸ್ಕೃತಿಯನ್ನು ಕಲಿಯುತ್ತಾರೆ.

ಈ ವಿದ್ಯಾಲಯವು ಗ್ರಾಮೀಣ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಮೀಸಲಿದೆ. ಈ ವಿದ್ಯಾಲಯದ ಪ್ರವೇಶ ಪರೀಕ್ಷೆಯು ರಾಷ್ಟೀಯ ಮಟ್ಟದ   ಸ್ಪರ್ಧಾತ್ಮಕ ಪರೀಕ್ಷೆಯಾಗಿದ್ದು ಈ ಜಿಲ್ಲೆಯಲ್ಲಿ 5ನೇಯ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶವಾಗಿದ್ದು ಈ ಮೇಲೆ ಕಾಣಿಸಿದ ಎಲ್ಲಾ ಸೌಕರ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು  ಜವಾಹರ ನವೋದಯ ವಿದ್ಯಾಲಯ ಉಡುವಳ್ಳಿ,ಚಿತ್ರದುರ್ಗದ  ಮಾನನೀಯ ಪ್ರಾಚಾರ್ಯರಾದ ಡೆನಿಯಲ್ ರೆತ್ನಕುಮಾರ ಅವರು  ನಿವೇದಿಸಿಕೊಳ್ಳುತ್ತಿದ್ದಾರೆ.

ಅರ್ಜಿ ಸಲ್ಲಿಸಲು  ಯಾವುದೇ ಸಮಸ್ಯೆ ಇದ್ದಲ್ಲಿ ಉಪನ್ಯಾಸಕ ಅಂಟೋನಿ ಸ್ಟೆನ್ಲಿ – 9740133395, ದ್ವಿತೀಯ ದರ್ಜೆ ಸಹಾಯಕಿ ರೂಪಾ -8310337524 ಅವರನ್ನು ಸಂಪರ್ಕಿಸಬಹದು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

error: Content is protected !!