ಮತ್ತೊಮ್ಮೆ‌ ಮೋದಿ ಗೆಲುವಿಗಾಗಿ ಶೋಭ ಕರಂದ್ಲಾಜೆ ಅಮರನಾಥ ಯಾತ್ರೆ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗಾಗ ದೇವಸ್ಥಾನಗಳಿಗೆ ಭೇಟಿ‌ ನೀಡಿ, ಪಾದಯಾತ್ರೆಯನ್ನು ಮಾಡುತ್ತಾ ಇರುತ್ತಾರೆ. ಇದೀಗ ಪ್ರಧಾನಿ ಮೋದಿಗಾಗಿ ಮತ್ತೊಮ್ಮೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಅದುವೇ ಅಮರನಾಥ ಯಾತ್ರೆ.

2014ರ ಲೋಕಸಭಾ ಚುನಾವಣೆ ಹತ್ತಿರದಲ್ಲಿದೆ. ಈಗಾಗಲೆ ಎಲ್ಲಾ ಪಕ್ಷಗಳು ಸಾಕಷ್ಟು ತಯಾರಿಯಲ್ಲಿವೆ. ಈ ಬೆನ್ನಲ್ಲೇ ಶೋಭಾ ಕರಂದ್ಲಾಜೆ ಅಮರಯಾತ್ರೆ ಕೈಗೊಂಡಿದ್ದಾರೆ. ಯಾತ್ರೆ ಬಳಿಕ ದೇವರಿಗೆ ವಿಶೇಷ ಪೂಜೆ ಮಾಡಿಸಿದ್ದಾರೆ.

ಪ್ರಧಾನಿ ಮೋದಿಯವರೇ ಮತ್ತೊಮ್ಮೆ ಪ್ರಧಾನಿ ಹುದ್ದೆಗೆ ಬರಬೇಕು ಎಂಬ ಕೋರಿಕೆಯೊಂದಿಗೆ ಶೋಭಾ ಕರಂದ್ಲಾಜೆ ಇದೀಗ ಅಮರಯಾತ್ರೆ ಮಾಡಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈ ಬಗ್ಗೆ ಟ್ವೀಟ್ ಕೂಡ ಮಾಡಿದ್ದಾರೆ. ಅಮರನಾಥ ದೇವಾಲಯವೂ ಜಮ್ಮು‌ ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ತೆಹಸಿಲ್ ನಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *