Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವನೆ ಪ್ರಕರಣ : ಮೂರಕ್ಕೆ ಏರಿದ ಸಾವಿನ ಸಂಖ್ಯೆ

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ,(ಆ. 02): ನಗರದ ಹೊರವಲಯದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟವರ ಸಂಖ್ಯೆ ಇದೀಗ ಮೂರಕ್ಕೆ ಏರಿಕೆಯಾಗಿದೆ.

ನಿನ್ನೆ (ಮಂಗಳವಾರ) ನಡೆದ ಈ ದುರ್ಘಟನೆಯಲ್ಲಿ ಕಲುಷಿತ ನೀರು ಸೇವಿಸಿ ಮಕ್ಕಳು ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದರು. ನಂತರ ಅಸ್ವಸ್ಥರ ಸಂಖ್ಯೆ 78 ಕ್ಕೆ ಏರಿಕೆಯಾಗಿದ್ದು, ಇವರೆಲ್ಲರೂ ಜಿಲ್ಲಾ ಆಸ್ಪತ್ರೆ, ನಗರದ ಖಾಸಗಿ ಆಸ್ಪತ್ರೆ, ದಾವಣಗೆರೆ ಮತ್ತು ಬೆಂಗಳೂರಿನ ಆಸ್ಪತ್ರೆಯಲ್ಲಿ ಅಸ್ವಸ್ಥರಾದವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರಲ್ಲಿ  ಮಂಜುಳಾ(21) ಎಂಬ ಮಹಿಳೆ ಚಿಕಿತ್ಸೆ ಫಲಿಸದೆ ನಿನ್ನೆ ಬೆಳಿಗ್ಗೆಯೇ ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಸಂಜೆ ವೇಳೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಘು ಮೃತಪಟ್ಟಿದ್ದರು. ಇಂದು ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರವೀಣ್ ಮೃತಪಟ್ಟಿದ್ದು, ಕವಾಡಿಗರಹಟ್ಟಿಯಲ್ಲಿ ಮೃತ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಮೃತರ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿಗಳ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಎಸ್.ಪಿ. ಪರುಶುರಾಮ ಅವರು ಮಾತನಾಡಿ, ಲ್ಯಾಬ್ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!