ಬೆಂಗಳೂರು: ಮೊದಲಿಗೆ ಅಣ್ಣಾವ್ರು, ನಂತರ ಅಪ್ಪು ಕೆಎಂಎಫ್ ನ ರಾಯಭಾರಿಯಾಗಿದ್ದರು. ಅದು ಒಂದು ಪೈಸೆಯನ್ನು ತೆಗೆದುಕೊಳ್ಳದೆ. ಈಗ ಶಿವಣ್ಣ ಕೆಎಂಎಫ್ ನ ರಾಯಭಾರಿಯಾಗಿದ್ದಾರೆ. ಶಿವಣ್ಣ ಕೂಡ ಹಣವನ್ನು ನಿರೀಕ್ಷೆ ಮಾಡಿಲ್ಲ. ಇಂದಿನಿಂದ ರಾಯಭಾರಿಯಾದ ಶಿವಣ್ಣ ತಿರುಪತಿಯ ಲಡ್ಡು ಪ್ರಸಾದಕ್ಕೆ ತುಪ್ಪ ಕಳುಹಿಸುವ ಟೆಂಡರ್ ನಿಲ್ಲಿಸಿದ್ದರ ಬಗ್ಗೆ ಮಾತನಾಡಿದ್ದಾರೆ.
ನಂದಿನಿ ಎಂಬ ಹೆಮ್ಮೆಯನ್ನು ಬೆಳೆಸಬೇಕು. ನಂದಿನಿ ಭಾರತದ ಹೆಮ್ಮೆ. ಅದನ್ನು ಉಳಿಸಿಕೊಳ್ಳಬೇಕು. ನಾನು ರಾಯಭಾರಿಯಾಗಿದ್ದು ತುಂಬಾ ಖುಷಿ ಇದೆ. ಯಾಕಂದ್ರೆ ಇದು ರೈತರಿಗೆ ಸಂಬಂಧಿಸಿದ ವಿಚಾರ. ಸದ್ಯದಲ್ಲಿಯೇ ನಂದಿನಿ ಪ್ರಾಡಕ್ಟ್ ನ ಜಾಹೀರಾತು ಶೂಟ್ ಆಗುತ್ತೆ.
ಇನ್ನು ತಿರುಪತಿಯಲ್ಲಿ ನಂದಿನಿ ತುಪ್ಪ ಪೂರೈಕೆ ನಿಲ್ಲಿಸಿದ ಬಗ್ಗೆ ಪ್ರತಿಕ್ರಿಯಿಸಿದ ಶಿವಣ್ಣ, ನಂದಿನಿ ಬೇಡಿಕೆ ಯಾವತ್ತೂ ಕಡಿಮೆ ಆಗಲ್ಲ. ನಾವು ಪ್ರತಿ ದಿನ ನಂದಿನಿ ಪ್ರಾಡಕ್ಟ್ ಅನ್ನೇ ಬಳಸುತ್ತೇವೆ. ಇದು ನಮ್ಮ ಸರ್ಕಾರದ್ದು, ನಮ್ಮ ಪ್ರಾಡಕ್ಟ್. ನಮ್ಮ ರೈತರಿಗೋಸ್ಕರ ಯಾವಾಗಲೂ ಜೊತೆಯಲ್ಲಿರುತ್ತೇನೆ. ಇದು ನಮ್ಮ ತ್ಯಾಗ ಅಲ್ಲ ನಮ್ಮ ಕರ್ತವ್ಯ ಎಂದಿದ್ದಾರೆ.