ನಾಳೆಯಿಂದ ಪ್ರತಿ ಲೀಟರ್ ಹಾಲಿನ ದರ 3 ರೂಪಾಯಿ ಹೆಚ್ಚಳವಾಗಲಿದೆ. ಕೆಎಂಎಫ್ ಪ್ರತಿ ಲೀಟರ್ ಗೆ 5 ರೂಪಾಯಿ ಹೆಚ್ಚಳ ಮಾಡುವಂತೆ ಮನವಿ ಸಲ್ಲಿಸಿತ್ತು. ಆದ್ರೆ ರಾಜ್ಯ ಸರ್ಕಾರ 3 ರೂಪಾಯಿ ಹೆಚ್ಚಳ ಮಾಡಿದೆ. ಈ ಹಣ ನೇರವಾಗಿ ರೈತರ ಅಕೌಂಟಿಗೆ ಹೋಗಲಿದೆ.
ಆಗಸ್ಟ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ಮತ್ತೊಂದೆಡೆ ಹಾಲಿನ ದರ ಏರಿಕೆ ಜೇಬು ಕಚ್ಚಲಿದೆ. ಜೊತೆಗೆ ಹೋಟೆಲ್ ತಿಂಡಿ ಮತ್ತು ಊಟದ ವೆಚ್ಚಗಳಲ್ಲೂ ಏರುಪೇರಾಗುವ ಸಾಧ್ಯತೆಗಳಿವೆ. ಹಾಲು ಉತ್ಪಾದಕರಿಗೆ ದರ ಹೆಚ್ಚಳದಿಂದ ಸಿಗುವ ಲಾಭಾಂಶವನ್ನು ವರ್ಗಾವಣೆ ಮಾಡುವುದಾಗಿ ಸರ್ಕಾರ ಹೇಳಿದೆ. ಹೀಗಾಗಿ 23 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರು ದರ ಏರಿಕೆಯ ಪ್ರಯೋಜನ ಪಡೆಯುತ್ತಿದ್ದಾರೆ.
ಟೋನ್ಡ್ ಹಾಲು₹39 ರಿಂದ ₹42, ಹೋಮೋಜಿನೈಸ್ಡ್₹40 ರಿಂದ ₹43, ಸ್ಪೆಷಲ್ ಹಾಲು₹45 ರಿಂದ ₹48, ಶುಭಂ ಹಾಲು₹45ರಿಂದ ₹48, ಸಮೃದ್ಧಿ ಹಾಲು₹50 ರಿಂದ ₹53, ಸಂತೃಪ್ತಿ ಹಾಲು₹52 ರಿಂದ ₹55, ಡಬ್ಬಲ್ ಟೋನ್ಡ್ ಹಾಲು₹38 ರಿಂದ ₹41, ಮೊಸರು ಪ್ರತಿ ಲೀ.ಗೆ₹47 ರಿಂದ ₹50 ಆಗಿದೆ.