Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಿರಿಯೂರಿನ 1156 ಎಕರೆ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಸಚಿವ ಸುಧಾಕರ್ ಅಡ್ಡಗಾಲು : ಶಂಕರಪ್ಪ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ,(ಜು.31) : ಹಿರಿಯೂರು ತಾಲ್ಲೂಕು ಮೇಟಿಕುರ್ಕೆ ಮತ್ತು ಕರಿಯೋಬನಹಳ್ಳಿ ಗ್ರಾಮಗಳ ಹಲವು ಸರ್ವೇ ನಂ. ಜಮೀನುಗಳಲ್ಲಿ ಸುಮಾರು 1156 ಎಕರೆ ಪ್ರದೇಶವನ್ನು ಕೈಗಾರಿಕಾ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸಲು ವಶಪಡಿಸಿಕೊಳ್ಳಲು ರಾಜ್ಯ ಪತ್ರ ಹೊರಡಿಸಿ ಗುರುತಿಸಿರುತ್ತಾರೆ.

ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಇದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹಿರಿಯೂರು ಘಟಕದ ತಾಲ್ಲೂಕು ಅಧ್ಯಕ್ಷರಾದ ಶಂಕರಪ್ಪ ಆರೋಪಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕರ್ನಾಟಕ ಸರ್ಕಾರದ ಅಧೀನ ಸಂಸ್ಥೆ ಇವರು ಪತ್ರಿಕಾ ಪ್ರಕಟಣೆಗಾಗಿ ದಿನಾಂಕ: 14-12-2022 ರಂದು ರಾಜಪತ್ರ ಹೊರಡಿಸಿ, ಹಿರಿಯೂರು ತಾಲ್ಲೂಕು ಮೇಟಿಕುರ್ಕೆ ಮತ್ತು ಕರಿಯೋಬನಹಳ್ಳಿ ಗ್ರಾಮಗಳ ಹಲವು ಸರ್ವೇ ನಂ. ಜಮೀನುಗಳಲ್ಲಿ ಸುಮಾರು 1156 ಎಕರೆ ಪ್ರದೇಶವನ್ನು ಕೈಗಾರಿಕಾ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸಲು ವಶಪಡಿಸಿಕೊಳ್ಳಲು ರಾಜ್ಯ ಪತ್ರ ಹೊರಡಿಸಿ ಗುರುತಿಸಿರುತ್ತಾರೆ.

ರೈತರ ಜಮೀನುಗಳನ್ನುತದನಂತರ ಭೂಸ್ವಾಧೀನಾಧಿಕಾರಿ ಕಛೇರಿ, ದಾವಣಗೆರೆ ರೈತರಿಗೆ ಹಲವು ಬಾರಿ ನೋಟೀಸ್ ನೀಡಿ ಜಿಲ್ಲಾಧಿಕಾರಿಗಳು, ಚಿತ್ರದುರ್ಗ ಇವರ ಸಮ್ಮುಖದಲ್ಲಿ ಬೆಲೆ ನಿಗಧಿಪಡಿಸುವ ಸಲುವಾಗಿ ಎರಡು ಬಾರಿ ರೈತರನ್ನು ಜಿಲ್ಲಾಧಿಕಾರಿಗಳು ಭೇಟಿ ಮಾಡಿ, ಬೆಲೆ ನಿಗಧಿಯ ಹೇಳಿಕೆಗಳನ್ನು ರೈತರಿಂದ ಪಡೆದಿದ್ದು ಸರಿಯಷ್ಟೆ, ನಮಗೆ ಬಂದಿರುವ ಮಾಹಿತಿಯ ಪ್ರಕಾರ ಎಕರೆ ಒಂದಕ್ಕೆ ರೂ. 45.00 ಮತ್ತು 35.00 ಲಕ್ಷ ಬೆಲೆ ನಿಗಧಿಮಾಡಿ, ಮೇಲ್ಕಂಡ ಸಂಸ್ಥೆಗೆ ಶಿಫಾರಸ್ಸು ಮಾಡಿ ಕಳುಹಿಸಿಕೊಟ್ಟಿದ್ದು, ಇದರಂತೆ ದಿನಾಂಕ: 22-03-2023 ರಂದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಸಲಹಾ ಮಂಡಳಿ 384 ನೇ ಸಭೆಯನ್ನು ಕರೆದು ಮೇಲ್ಕಂಡ ಬೆಲೆಯನ್ನು ಅನುಮೋದಿಸಿರುತ್ತಾರೆ. 07-07-2023 ರಂದು ಪರಿಹಾರ ಧನ ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದಾರೆ,

ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಹಿರಿಯೂರು ಕ್ಷೇತ್ರದ ಶಾಸಕರಾದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಇವರು ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ, ಖನಿಜ ಭವನ, ಕರ್ನಾಟಕ ಸರ್ಕಾರ, ಬೆಂಗಳೂರು ದಿನಾಂಕ: 05-06-2023 ರಂದು ಪತ್ರ ಬರೆದು ಈ 1156 ಎಕರೆ ಜಮೀನಿನುಗಳು ಹೆದ್ದಾರಿಗೆ ಹೊಂದಿಕೊಂಡಿದ್ದು, ಇಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಯುತ್ತಿರುತ್ತದೆಂದು ಮತ್ತು ಪ್ರದೇಶದ ಭೂಮಿ ಕೈಗಾರಿಕೆಗೆ ಯೋಗ್ಯವಾಗಿಲ್ಲವೆಂದು ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿರುವುದಿಲ್ಲವೆಂದು ಈ ಪ್ರಸ್ತಾವನೆಯ ಕೈಬಿಡಬೇಕೆಂದು ಕೋರಿರುತ್ತಾರೆ. ‘ಈಗಾಗಲೇ ಸಾಖೆಯಿಂದ ದಿನಾಂಕ: 07-07-2023 ರಂದು ಪರಿಹಾರ ಧನ ಬಿಡುಗ ಆದೇಶ 100 ಕೋಟಿ ಹಣವನ್ನು ಇಲಾಖೆಗೆ ಬಿಡುಗಡೆ ಮಾಡಿ ಸದರಿ ಭೂಸ್ವಾಧೀನ ಕಾಯ್ದೆಯ ನಿಯಮಗಳನ್ವಯ ಭೂ ಮಾಲೀಕರಿಗೆ ಪಾವತಿಸಲು ತಿಳಿಸಿದೆ ಎಂದು ಕರ್ನಾಟಕ ಕೈಗಾರಿಕಾ ಪ್ರವೇಶ ಅಭಿವೃದ್ಧಿ ಮಂಡಳಿಯಿಂದ ವಿಶೇಷ ಭೂ ಸ್ವಾಧೀನಾಧಿಕಾರಿ, ಕೆಐಎಡಿಬಿ ವಲಯ ಕಛೇರಿ, ಕರೂರು ವಲಯ ಪ್ರದೇಶ, ದಾವಣಗೆರೆ ಇವರಿಗೆ ಆದೇಶದ ಪ್ರತಿಯನ್ನು ನೀಡಲಾಗಿದೆ.

ದಿನಾಂಕ: 07-07-2023 ರಿಂದ ಬಂದಿರುವ ಬಿಡುಗಡೆ ಹಣವನ್ನು ಯಾವ ರೈತರಿಗೂ ವಿಲೇವಾರಿ ಮಾಡದ ಮೇಲೆ ಕಾಣಿಸಿದ ಸಚಿವರು ಕೊಟ್ಟಿರುವ ದೂರಿನ ಬಗ್ಗೆ ಮಾತನಾಡುವಿಕೆ ಸಂಬಂಧಪಟ್ಟ ಅಧಿಕಾರಿ ವರ್ಗ ಹತಾಶರಾಗಿ ಕುಳಿತಿರುತ್ತಾರೆ. ಈ ಎಲ್ಲಾ ವಿಷಯಗಳನ್ನು ಸಚಿವರ ಗಮನಕ್ಕೂ ತರಲಾಗಿದೆ. ಈ ಪ್ರದೇಶವು ಅತಿ ಹಿಂದುಳಿದ ಪ್ರದೇಶವಾಗಿದ್ದು, ಇಲ್ಲಿ ಕೈಗಾರಿಕೆಗಳು ಬರುವುದು ಕೂಡ ರೈತರ ಗಮನಕ್ಕೆ ಬರದೆ ಏತನ್ಮಧ್ಯೆ ಹೊರಡಿಸಿ, ರೈತರ ಸಲಹೆಗಳನ್ನು ಪಡೆಯಲು ಕರೆದಂತಹ ಸಭೆಗಳಲ್ಲಿ ಎಲ್ಲಾ ರೈತರು ರಾಜಪತ್ರವನ್ನು ಒಗ್ಗಟ್ಟಾಗಿ ಒಂದು ಎಕರೆಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಮನವಿಯನ್ನು ಕೂಡ ಸಲ್ಲಿಸಿ, ಈ ಪ್ರದೇಶದಲ್ಲಿ ಕೈಗಾರಿಕೆಗಳು ಬಂದರೆ ಸಂಬಂಧಪಟ್ಟ ರೈತರು ರೈತಾಪಿ ಜೀವನದಲ್ಲೇ ಜೀವನವನ್ನು ಸಾಗಿಸುತ್ತಿದ್ದು, ಅವರ ಜೀವನದ ಎಲ್ಲಾ ಅವಲಂಬನೆಗಳನ್ನು ಈ ಜಮೀನಿನಿಂದಲೇ ನಿರ್ವಹಿಸಬೇಕಾಗಿರುತ್ತದೆ ಎಂದು ಅನೇಕ ರೈತರು ಜಿಲ್ಲಾಧಿಕಾರಿಗಳಲ್ಲಿ ಮನವಿಯನ್ನು ಮಾಡಿ, ಜಿಲ್ಲಾಧಿಕಾರಿಗಳ ಗಮನ ಸೆಳೆದಿರುತ್ತಾರೆ. ಈಗಾಗಲೇ ಉತ್ತಮ ಮಳೆಯಾಗಿದ್ದು, ಬಿತ್ತನೆಯೂ ಆಗದೆ ಇತ್ತ ಹಣ ಬಿಡುಗಡೆಯೂ ಆಗದೆ ರೈತ ತುಂಬಾ ಕಳವಳದಿಂದ ಕಾತುರತೆಯಿಂದ ಕಾಯುತ್ತಾ ಕುಳಿತಿರುತ್ತಾರೆ.

ಈ ಎಲ್ಲಾ ವಿಷಯಗಳನ್ನು ಮನಗಂಡು ಜಿಲ್ಲಾ ಮಂತ್ರಿಗಳು ಕೈಗಾರಿಕಾ ಪ್ರಗತಿಯನ್ನು ಮತ್ತು ಕ್ಷೇತ್ರದ ಅಭಿವೃದ್ಧಿಯನ್ನು ಮನಗಂಡು ದೊರೆಯುವಂತಹ ಅನೇಕ ವಿದ್ಯಾವಂತ ನಿರುದ್ಯೋಗಿ ಪ್ರಕ್ರಿಯೆ ಚಲಾವಣೆಗೆ ಯುವಕರಿಗೆ ಬರುವುದನ್ನು ಮನಗಂಡು, ಕ್ಷೇತ್ರವೂ ಕೆಲಸ ಸಂಪದ್ಭರಿತವಾಗಲು ತಮ್ಮ ವಿಶೇಷ ಗಮನವನ್ನು ಹರಿಸಿ, ಸಂಬಂಧಪಟ್ಟ ಮಂತ್ರಿಗಳು ಮತ್ತು ಅಧಿಕಾರಿಗಳ ಗಮನವನ್ನು ಸೆಳೆದು, ತಾವು ನೀಡಿರುವ ಪತ್ರವನ್ನು ವಾಪಾಸ್ ಪಡೆದು, ಸಂಬಂಧಪಟ್ಟ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು. ಮನವಿ ಮಾಡಲಾಯಿತು.

ಗೋಷ್ಠಿಯಲ್ಲಿ ತಾಲ್ಲೂಕು ಪ್ರಧಾನ ಕಾರ್ಯದರ್ಶೀ ಎಂ.ಕೆ.ವೀರೇಂದ್ರವ ಕುಮಾರ್, ಎಸ್ಸಿ ಮೂರ್ಚಾದ ಅಧವ್ಯಕ್ಷರಾದ ಎನ್.ಸಂತೋಷ ಕುಮಾರ್, ಉಪಾಧ್ಯಕ್ಷರಾದ ಬಸವರಾಜನಾಯಕ್, ತಿಪ್ಪೇಸ್ವಾಮಿ, ಟಿ.ಎಲ್.ರಾಜು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ಜಿಲ್ಲಾ ಬೇಡ ಜಂಗಮ ಸಮಾಜದ 2025ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ , ಡಿ. 22 : ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆ ವತಿಯಿಂದ 2025ನೇ ಸಾಲಿನ

ಸರ್ಕಾರಿ ನೌಕರರು ಹುಟ್ಟಿದ ಊರನ್ನೆ ಮರೆಯಬಾರದು : ಸಂಸದ ಗೋವಿಂದ ಎಂ.ಕಾರಜೋಳ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಡಿಸೆಂಬರ್. 22 : ತುಳಿತಕ್ಕೊಳಗಾಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಮೇಲೆ ಬರುವಂತೆ

ಸುಂದರ ಸಮಾಜ ನಿರ್ಮಾಣಕ್ಕೆ ಜಯದೇವ ಶ್ರೀಗಳ ಕೊಡುಗೆ ಅನನ್ಯ : ಸಂಸದ ಗೋವಿಂದ ಕಾರಜೋಳ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ,ಡಿ. 22 : ಮಾನವ ಕುಲ ಒಂದೇ ಗಂಡು ಹೆಣ್ಣು ಮಾತ್ರವೇ ಎರಡು ಜಾತಿ ಎಂಬ ಸಂದೇಶವನ್ನು

error: Content is protected !!