ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, (ಜು.29) : ಮಹಿಳೆ ಸ್ವಾವಲಂಬಿಯಾಗಿ ಬದುಕುವುದನ್ನು ಕಲಿತಾಗ ಇಡಿ ಕುಟುಂಬವೇ ನೆಮ್ಮದಿಯಿಂದ ಇರಲು ಸಾಧ್ಯ ಎಂದು ರೋಟರಿ, ಇನ್ನರ್‍ವೀಲ್ ಕ್ಲಬ್ ಪಾಸ್ಟ್ ಪ್ರೆಸಿಡೆಂಟ್ ರಾಜೇಶ್ವರಿ ಸಿದ್ದರಾಮ್ ತಿಳಿಸಿದರು.
ಮಠದ ಕುರುಬರಹಟ್ಟಿಯಲ್ಲಿ ಮಹಿಳಾ ವಿವಿದ್ದೋದ್ದೇಶ ಸಂಘ ಉದ್ಗಾಟಿಸಿ ನಂತರ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಮಕ್ಕಳಿಗೆ ನೋಟ್‍ಬುಕ್, ಪೆನ್ಸಿಲ್, ಚಾಕೊಲೇಟ್‍ಗಳನ್ನು ವಿತರಿಸಿ ಮಾತನಾಡುತ್ತ. ಸಂಘಗಳ ಮೂಲಕ ಮಹಿಳೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ದಿ ಕಂಡುಕೊಳ್ಳಬೇಕಲ್ಲದೆ ಕಡ್ಡಾಯವಾಗಿ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿದಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಮಹಿಳಾ ವಿವಿದ್ದೋದ್ದೇಶ ಸಂಘದ ಅಧ್ಯಕ್ಷೆ ಫೈಜುನ್ನಿಸ, ಕಾರ್ಯದರ್ಶಿ ಸೀಮ ತಬ್ಸುಮ್ ಹಾಗೂ ಶಿಕ್ಷಕರುಗಳು ಈ ಸಂದರ್ಭದಲ್ಲಿದ್ದರು.