ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಚಿತ್ರದುರ್ಗ,(ಜು.27) : ನೇತ್ರ ಜ್ಯೋತಿ ಕಾಲೇಜಿನ 3 ವಿದ್ಯಾರ್ಥಿನಿಯರ ಮೇಲೆ ಕಠಿಣ ಕ್ರಮ ತೆಗೆದುಕೊಂಡು ಈ ಕುರಿತು ಜಿಲ್ಲಾಡಳಿತ ಸೂಕ್ತ ರೀತಿಯ ತನಿಖೆಯನ್ನು ನಡೆಸಿ ತಪ್ಪಿತಸ್ಥರ ಮೇಲೆ ಕಾನೂನಾತ್ಮಕ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಎಬಿವಿಪಿ ಈ ಮೂಲಕ ಆಗ್ರಹಿಸಿದೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆಯನ್ನು ನಡೆಸಿದ ಪದಾಧಿಕಾರಿಗಳು, ಈಗಾಗಲೇ ರಾಜ್ಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಉಡುಪಿಯ ನೇತ್ರ ಜ್ಯೋತಿ ಕಾಲೇಜಿನಲ್ಲಿ ಹಿಂದೂ ಯುವತಿಯರು ಶೌಚಾಲಯವನ್ನು ಬಳಸುವ ವೀಡಿಯೋವನ್ನು ಮುಸ್ಲಿಂ ಯುವತಿಯರಾದ ಶಬನಾಜ್, ಅಲ್ವಿಯಾ ಮತ್ತು ಅಲಿಮಾತುಲ್ ಶಾಫಿಯಾ ಇವರುಗಳು ಮಾಡಿ ಅದನ್ನು ತಮ್ಮ ಕೋಮಿನವರೊಂದಿಗೆ ಹಂಚಿಕೊಂಡು ಹಿಂದೂ ವಿದ್ಯಾರ್ಥಿನಿಯರನ್ನು ಜಿಹಾದ್ ಬಲೆಗೆ ಸಿಕ್ಕಿಸುವ ಆತಂಕಕಾರಿ ಘಟನೆ ಸದ್ದು ಮಾಡುತ್ತಿದೆ ಎಂದು ದೂರಿದ್ಧಾರೆ.
ಘಟನೆಯ ಸೂಕ್ಷ್ಮತೆ ಮತ್ತು ಗಂಭೀರತೆಯನ್ನು ಗಮನಿಸಿ ಇಂತಹ ಘಟನೆಯು ಇತರೆ ಕಾಲೇಜಿನಲ್ಲಿ ಮರುಕಳಿಸದಂತೆ ಇದಕ್ಕಾಗಿ ಜಿಲ್ಲೆಯ ಪ್ರತೀ ಕಾಲೇಜಿನಲ್ಲೂ ಈ ಕುರಿತು ಅರಿವು ಮೂಡಿಸುವುದು ಮತ್ತು ಇಂತಹ ಘಟನೆಯನ್ನು ವರದಿ ಮಾಡಲು ಪ್ರತೀ ಕಾಲೇಜಿನಲ್ಲೂ ಒಂದು ವಿಶೇಷ ಸೆಟ್ ಮಾಡುವಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು ಮತ್ತು ಇದನ್ನು ಗಮನಿಸಲು ಜಿಲ್ಲಾ ಮಟ್ಟದ ಒಂದು ತಂಡವನ್ನು ಸಹ ರಚಿಸಬೇಕು ಎಂದು ಎಬಿವಿಪಿ ಆಗ್ರಹಿಸುತ್ತದೆ.
ಈಗಾಗಲೇ ಮಾಧ್ಯಮಗಳಲ್ಲಿ ಬಂದಂತೆ ತಮಾಷೆಗಾಗಿ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದೇವೆ ಎಂಬುದು ತೀರ ಬಾಲಿಷ ಹಾಗೂ ಪ್ರಕರಣವನ್ನು ದಾರಿ ತಪ್ಪಿಸುವ ಹೇಳಿಕೆ ಶೌಚ ಕ್ರಿಯೆ ಮಾಡುವಂತ ಖಾಸಗಿ ಜಾಗದಲ್ಲಿ ವಿಡಿಯೋ ಚಿತ್ರೀಕರಣ ಮಾಡುವಂತ ಹೇಯ ಕೃತ್ಯದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಒಳಗಾಗದೆ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮ ತೆಗೆದುಕೊಂಡು ಇದರ ಹಿಂದಿರುವಂತ ಷಡ್ಯಂತ್ರವನ್ನು ಬಯಲಿಗೆಳೆಯಬೇಕು.
ಪ್ರಕರಣದ ಹಿಂದೆ ಬಲವಾದ ಜಿಹಾದಿ ಜಾಲವೊಂದು ಕೆಲಸ ಮಾಡಿರುವುದರ ಕುರಿತು ಯಾವ ಸಂಶಯವೂ ಇಲ್ಲ. ಹಾಗಾಗಿ ಈ ಪ್ರಕರಣವನ್ನು ಇಲಾಖೆ ಸಮರ್ಥವಾಗಿ ಭೇದಿಸಿ ಇದರ ಹಿಂದಿರುವ ಜಾಲವನ್ನು ಬಯಲಿಗೆಳೆಯಬೇಕೆಂಬುದು ಪರಿಷತ್ತಿನ ಒಕ್ಕೊರಲ ಬೇಡಿಕೆಯಾಗಿದೆ ಎಂದಿದ್ದು ಈ ಕುರಿತು ಜಿಲ್ಲಾಡಳಿತ ಸೂಕ್ತ ರೀತಿಯ ತನಿಖೆಯನ್ನು ನಡೆಸಿ ತಪ್ಪಿತಸ್ಥರ ಮೇಲೆ ಕಾನೂನಾತ್ಮಕ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಎಬಿವಿಪಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಸುದರ್ಶನ್ ನಾಯ್ಕ.ಎಸ್ ರಾಜ್ಯ ಕಾರ್ಯಕಾರಣಿ ಸದಸ್ಯರು, ಕನಕರಾಜ್ ತಾ. ಸಂಚಾಲಕರು, ಮನೋಜ್ ಹಾಸ್ಟೆಲ್ ಪ್ರಮುಖ್, ದಯಾನಂದ್ ನಗರ ಕಾರ್ಯಕಾರಣಿ, ಚೈತ್ರ ವಿದ್ಯಾರ್ಥಿನಿ ಪ್ರಮುಖ್, ಪೂರ್ಣಿಮ, ಸುಮನ್ ಮುಂತಾದವರು ಉಪಸ್ಥಿತರಿದ್ದರು.