ನವದೆಹಲಿ: ಮಣಿಪುರದ ಹಿಂಸಾಚಾರದ ಘಟನೆಗೆ ಎಲ್ಲೆಡೆ ಖಂಡನೆ ವ್ಯಕ್ತವಾಗಿತ್ತು. ಇಂದಿನ ರಾಜ್ಯಸಭಾ ಕಲಾಪದಲ್ಲೂ ಮಣಿಪುರ ಹಿಂಸಾಚಾರ ಕೋಲಾಹಲ ಎಬ್ಬಿಸಿದೆ. ಆಮ್ ಆದ್ಮಿ ಪಕ್ಷದ ಸದಸ್ಯ ಸಂಜಯ್ ಸಿಂಗ್ ಅಧಿವೇಶನದಲ್ಲಿ ಈ ವಿಚಾರವಾಗಿ ಮಾತನಾಡಿದ್ದರು. ಕಲಾಪದಿಂದ ಅವರನ್ನು ಅಧಿವೇಶನದ ಅಮಾನತು ಮಾಡಿದ್ದಾರೆ.
ಸಂಜಯ್ ಸಿಂಗ್ ಅಮಾನತು ಬಳಿಕ ಪ್ರತಿಕ್ರಿಯೆ ನೀಡಿದ, ಎಎಪಿ ನಾಯಕ ಸೌರಭ ಭಾರಧ್ವಾಜ್, ನಮ್ಮ ಸಂಸದರು ಸತ್ಯವನ್ನು ಹೇಳಿದ್ದಕ್ಕೆ ಅಮಾನತು ಮಾಡಿದ್ದಾರೆ. ಇದರಿಂದ ನಾವೂ ಧೃತಿಗೆಡುವುದಿಲ್ಲ. ನಮ್ಮ ಕಾನೂನು ಹೋರಾಟದ ತಂಡ, ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡ್ತಿದೆ. ಮಣಿಪುರದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಕಲಾಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಬೇಕು.
ಅಲ್ಲಿ ಏನಾಗ್ತಿದೆ ಅನ್ನೋದನ್ನು ದೇಶದ ಜನರಿಗೆ ತಿಳಿಸಬೇಕು ಅಂತಾ ವಿಪಕ್ಷಗಳು ಆಗ್ರಹಿಸುತ್ತಿವೆ. ಇದೇ ವಿಚಾರವನ್ನು ಇಟ್ಟುಕೊಂಡು ಕಲಾಪದ ವೇಳೆ ವಿಪಕ್ಷಗಳು ಗಲಾಟೆ ಮಾಡುತ್ತಿವೆ. ದೇಶಾದ್ಯಂತ ಈ ಘಟನೆ ಸಾಕಷ್ಟು ವಿರೋಧಕ್ಕೆ ಒಳಗಾಗಿದೆ.