ಜ್ಞಾನವ್ಯಾಪಿ ಮಸೀದಿಯಲ್ಲಿ ಹಿಂದೂ ದೇವಾಲಯದ ಕುರುಹು ಇರುವುದು ಕಂಡು ಬಂದಿದೆ. ಹೀಗಾಗಿ ಅಲ್ಲಿ ಸರ್ವೇಗೆ ಅವಕಾಶ ಕೋರಲಾಗಿತ್ತು. ಈ ಸಂಬಂಧ ವಾರಣಾಸಿ ಜಿಲ್ಲಾ ನ್ಯಾಯಾಲಯ ಮಹತ್ವದ ಆದೇಶ ನೀಡಿತ್ತು. ಸಂಪೂರ್ಣ ಸರ್ವೇ ನಡೆಸಲು ಸೂಚನೆ ನೀಡಲಾಗಿತ್ತು.
ಅದರಂತೆ ಇಂದು ಇಲಾಖೆಯ ಅಧಿಕಾರಿಗಳು ಮಸೀದಿ ಬಳಿ ಸರ್ವೇಗೆ ಹೋಗಿದ್ದರು. ಆದರೆ ಮಸೀದಿಗೆ ಸಂಬಂಧಿಸಿದವರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ನಾವೂ ಅಲಹಬಾದ್ ನ ಹೈಕೋರ್ಟ್ ಗೆ ಹೋಗುತ್ತೇವೆ. ಅಲ್ಲಿಯ ತನಕ ಮಸೀದಿ ಸರ್ವೇಗೆ ತಡೆ ನೀಡುವಂತೆ ಮನವಿ ಮಾಡಿದ್ದರು. ಈ ಮನವಿ ಆಲಿಸಿದ ಸುಪ್ರೀಂ ಕೋರ್ಟ್ ಇದೀಗ ಸರ್ವೇಗೆ ತಡೆ ನೀಡಿದೆ.
ಭಾರತೀಯ ಪುರಾತತ್ವ ಇಲಾಖೆಗೆ ಸೂಚನೆ ನೀಡಿದ್ದು, ಸುಪ್ರೀಂ ತಾತ್ಕಾಲಿಕ ತಡೆ ನೀಡಲಾಗಿದೆ. ಎರಡು ದಿನಗಳ ಕಾಲ ಸರ್ವೆ ನಡೆಸಬಾರದು ಎಂದು ಸೂಚನೆ ನೀಡಲಾಗಿದೆ. ಜುಲೈ 26ರ ಸಂಜೆ 5 ಗಂಟೆ ತನಕ ತನಕ ಸರ್ವೆ ನಡೆಸದಂತೆ ಸೂಚನೆ ನೀಡಲಾಗಿದೆ. ಇದರ ನಡುವೆ ಅಲಹಬಾದ್ ನ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲು ಮಸೀದಿಗೆ ಸೂಚನೆ ನೀಡಿದೆ.