ರಾಜ್ಯದಲ್ಲಿ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಜನ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಮನೆಗಳು ಕುಸಿಯುತ್ತಿವೆ, ರಸ್ತೆಗಳು ಮುಚ್ಚುತ್ತಿವೆ. ರಾಜ್ಯದಲ್ಲಿ ಇಂಥಹದ್ದೆ ಘಟನೆಗಳು ಹೆಚ್ಚಾಗುತ್ತಿದೆ.
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯ ಡ್ಯಾಮ್ ಗೆ ಒಳಹರಿವು ಹೆಚ್ಚಳವಾದ ಹಿನ್ನೆಲೆ, ಕಾವೇರಿ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಹಾರಂಗಿ ಜಲಾಶಯಕ್ಕೆ 20,000 ಕ್ಯೂಸೆಕ್ ಒಳಹರಿವು, ಜಲಾಶಯದಿಂದ 5000 ಕ್ಯೂಸೆಕ್ ನೀರು ಹೊರಹರಿವು ಹೆಚ್ಚಾಗಿದೆ. ಹೀಗಾಗಿಯೇ ನೀರನ್ನು ಬಿಡುಗಡೆ ಮಾಡಲಾಗಿದೆ.
ಭಾರಿ ಮಳೆಗೆ ಬೋರನಾಕಿ ಗ್ರಾಮದಲ್ಲಿ ಎರಡು ಮನೆಗಳು ಕುಸಿತವಾಗಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೋರನಾಕಿ ಗ್ರಾಮ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೋಪಾಲ್ ಹಾಗೂ ಹಿರೇಕರ್ ಗೆ ಸೇರಿದ ಮನೆಗಳು ಕುಸಿತಗೊಂಡಿವೆ. ನಂದಗಡ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕೊಡಗಿನಲ್ಲೂ ಮಳೆಗೆ ಮನೆಗಳು ಕುಸಿತಗೊಂಡಿವೆ. ಧಾರಾಕಾರ ಮಳೆಗೆ ಮನೆಯ ಮೇಲ್ಚಾವಣಿ ಕುಸಿದಿದೆ. ಸೋಮವಾರ ಪೇಟೆಯ ಮಾದೇಶ್ವರ ಬ್ಲಾಕ್ ನಲ್ಲಿ ಈ ಘಟನೆ ನಡೆದಿದೆ. ವಿಜಯಮ್ಮ ಎಂಬುವರಿಗೆ ಸೇರಿದ ಮನೆ ಮೇಲ್ಚಾವಣಿ ಕುಸಿತಗೊಂಡಿದೆ.