ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ,(ಜು.22) : ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನಪರವಾದ ಕೆಲಸಗಳನ್ನು ಮಾಡದೇ ವಿಧಾನಸೌಧವನ್ನು ವರ್ಗಾವಣೆ ಮಾಡುವ ಸೌಧವನ್ನಾಗಿ ಮಾಡಿಕೊಂಡಿದ್ದಾರೆ. ಸರ್ಕಾರ ಪೂರ್ಣ ಪ್ರಮಾಣದಲ್ಲಿ ಅಧಿಕಾರಿಗಳ ವರ್ಗಾವಣೆಯಲ್ಲಿ ತೂಡಗಿದೆ ಎಂದು ವಿಧಾನ ಪರಿಸತ್ ಸದಸ್ಯರಾದ ಕೆ.ಎಸ್.ನವೀನ್ ಆರೋಪಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಓನಕೆ ಓಬವ್ವ ವೃತ್ತದಲ್ಲಿ ಜನ ವಿರೋಧಿ ಕಾಂಗ್ರೆಸ್ ಸರ್ಕಾರದ ಸ್ಪೀಕರ್ ರವರು ಬಿಜೆಪಿ ಸದಸ್ಯರನ್ನು ವಿಧಾನಸಭೆಯಿಂದ ಅಮಾನತ್ ಮಾಡಿರುವುದನ್ನು ಖಂಡಿಸಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಕಳೆದ ಒಂದೂವರೆ ತಿಂಗಳಿಂದ ಕಾನೂನು ಸುವ್ಯವೆಸ್ಥೆ ಕುಸಿದಿದೆ, ಆಂತಕಕಾರಿ ಬೆಳವಣಿಗೆ ಪ್ರತಿ ನಿತ್ಯ ನಡೆಯುವ ಕೂಲೆಗಳಿರಬಹುದು ಸಿದ್ದರಾಮಯ್ಯ ದುರಾಳಿತದ ವಿರುದ್ದ ಪ್ರತಿಭಟಿಸಿ ಬಿಜೆಪಿ ಹೋರಾಟವನ್ನು ಸದನದ ಒಳಗೂ ಮತ್ತು ಹೂರಗಡೆಯೂ ಸಹಾ ಮಾಡುತ್ತಿದೆ.
ರಾಜ್ಯದ ಉನ್ನತ ಐಎಎಸ್ ಅಧಿಕಾರಿಗಳನ್ನು ಸರ್ಕಾರ ದುರಪಯೋಗ ಮಾಡಿದೆ. ಅರ್ಹತೆ ಇಲ್ಲದವರಿಗೆ ಐಎಎಸ್ ಅಧಿಕಾರಿಗಳಿಂದ ಕೆಲಸವನ್ನು ಮಾಡಿಸಿದ್ದಾರೆ ಇದು ಕನ್ನಡಿಗರಿಗೆ ಮಾಡಿದ ದ್ರೋಹವಾಗಿದೆ. ಕರ್ನಾಟಕದಲ್ಲೇ ಹಲವಾರು ಸಮಸ್ಯೆಗಳು ಒಂದು ಕಡೆಯಲ್ಲಿ ನೆರೆ ಹೆಚ್ಚಾಗಿದ್ದರೆ, ಮತ್ತೊಂದು ಕಡೆಯಲ್ಲಿ ಮಳೆ ಇಲ್ಲದ ವಾತಾವರಣ ಕಂಡು ಬರುತ್ತಿದೆ. ಈ ಸಮಯದಲ್ಲಿ 30 ಜನ ಉನ್ನತ ಅಧಿಕಾರಿಗಳನ್ನು ಸಿದ್ದರಾಮಯ್ಯರವರು ಬೇರೆಯವರ ಸೇವೆಗೆ ನೇಮಿಸಿರುವುದು ರಾಜ್ಯದ ದುರಂತವಾಗಿದೆ ಸಿದ್ದರಾಮಯ್ಯ ರವರು ವಿರುದ್ದ ಕಿಡಿ ಕಾರಿದರು.
ರಾಜ್ಯ ಸರ್ಕಾರ ನ್ಯಾಯಲಯದಿಂದ ಬೇಲ್ ಪಡೆದ ವ್ಯಕ್ತಿಗೆ ಶಾಸಕ ಎಂದು ನೇಮಕ ಮಾಡಿ ಅತನಿಗೆ ಸಕಲ ಗೌರವವನ್ನು ಸರ್ಕಾರದವತಿಯಿಂದ ನೀಡಲಾಗಿದೆ. ಇವರ ಪರಿಚಾರಕರಾಗಿ ಐಎಎಸ್ ಅಧಿಕಾರಿಯಾಗಿ ನೇಮಕ ಮಾಡುವುದರ ಮೂಲಕ ರಾಜ್ಯದ ಮಾನವನ್ನು ತೆಗೆದಿದ್ದಾರೆ. ಇದನ್ನು ವಿಧಾನಸಭೆಯಲ್ಲಿ ಪ್ರಶ್ನೆ ಮಾಡಿದ ಬಿಜೆಪಿ ಶಾಸಕರನ್ನು ಸಭೆಯಿಂದ ಮಾರ್ಷಲ್‍ಗಳ ಮೂಲಕ ಹೂರ ಹಾಕುತಾರೆ ಎಂದರೆ ಪ್ರಜಾಪ್ರಭುತ್ವದ ಕಗ್ಗೂಲೆ ಮಾಡುತ್ತಿದ್ದಾರೆ ಎಂದು ದೂರಿದ ಅವರು, ವಿರೋಧ ಪಕ್ಷ ಇರುವುದು ಆಡಳಿತ ರೂಢ ಪಕ್ಷ ಮಾಡಿದ ತಪ್ಪುಗಳನ್ನು ತೋರಿಸುವುದಕ್ಕೆ ಆದರೆ ಸಿದ್ದರಾಮಯ್ಯ ಸರ್ಕಾರ ಇದನ್ನು ಧಿಕ್ಕರಿಸಿ ತೂಘಲಕ ದರ್ಬಾರನ್ನು ನಡೆಸುತ್ತಿದ್ದಾರೆ. ಇದು ಕರಾಳ ದಿನಗಳಾಗಿದೆ ನಿಜ ಜೀವನದಲ್ಲಿ ಇವರು ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆ ಎಂದರು.
ವಿಧಾನಸಭೆಯಲ್ಲಿ ಸಣ್ಣ ವಿಷಯಕ್ಕೆ ಆಡಳಿತ ರೂಢ ಸರ್ಕಾರ ಬಿಜೆಪಿಯವರನ್ನು ಸಭೆಯಿಂದ ಹೂರಗಡೆ ಹಾಕಿದೆ ಆದರೆ ಇದೇ ತಪ್ಪನ್ನು ಮಾಡಿದ ಅವರ ಶಾಸಕರ ಮೇಲೆ ಯಾವುದೇ ರೀತಿ ಕ್ರಮವನ್ನು ತೆಗೆದುಕೊಳ್ಳದೆ ಹಾಗೇ ಬಿಟ್ಟಿದ್ದಾರೆ. ಸಿದ್ದರಾಮಯ್ಯ ರವರಿಗೆ ಅಧಿಕಾರದ ಮದ ಏರಿದೆ ನಮ್ಮನ್ನು ಕೇಳುವವರು ಯಾರು ಇಲ್ಲ ಎಂದು ಈ ರೀತಿಯಾಗಿ ಮಾಡುತ್ತಿದ್ದಾರೆ.
ವಿಧಾನಸಭೆಯಲ್ಲಿ ಜನತೆಯ ಪರವಾದ ವಿಷಯಗಳು ಚರ್ಚೆಯಾಗಬೇಕಿದೆ ಆದರೆ ಸರ್ಕಾರ ಇದನ್ನು ಬಿಟ್ಟು ಇಲಾಖೆಯ ಅಧಿಕಾರಿಗಳ ವರ್ಗಾವಣೆಯಲ್ಲಿ ನಿರತವಾಗಿದೆ. ಒಂದು ವರ್ಗಾವಣೆಗೆ ಇಂತಿಷ್ಟು ಹಣವನ್ನು ನಿಗಧಿ ಮಾಡಿ ವರ್ಗಾವಣೆಯನ್ನು ಮಾಡಿ ವಿಧಾನಸೌಧವನ್ನು ವರ್ಗಾವಣೆಯ ಸೌಧವನ್ನಾಗಿ ಮಾಡಲಾಗುತ್ತಿದೆ ಎಂದು ನವೀನ್ ದೂರಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ದುಷ್ಟ ಶಕ್ತಿಗಳು ಹೆಚ್ಚಾಗಿ ಮೆರೆಯುತ್ತಿವೆ. ಸರ್ಕಾರ ಇವರನ್ನು ಮಟ್ಟ ಹಾಕುವುದನ್ನು ಬಿಟ್ಟು ಅವರಿಗೆ ಬೆಂಬಲವಾಗಿ ಸರ್ಕಾರ ನಿಂತಿದೆ. ಹಾಡು ಹಗಲಿಲ್ಲಯೇ ಕಚೇರಿಗೆ ನುಗ್ಗಿ ಕೂಲೆಯನ್ನು ಮಾಡಲಾಗಿದೆ. ಇದರ ಬಗ್ಗೆ ಸರ್ಕಾರ ಬಿಗಿಯಾದ ನಿಲುವನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಇದರ ಬಗ್ಗೆ ಗೃಹ ಇಲಾಖೆ ನಿರ್ಲಕ್ಷವಾದ ಧೋರಣೆಯನ್ನು ತಾಳಿದೆ ಶಾಂತಿಯ ತೋಟವಾದ ಕರ್ನಾಟಕ ಇಂದು ಉಗ್ರ ಗಾಮಿಗಳ ತೋಟವಾಗಿದೆ.
ಉಗ್ರಗಾಮಿಗಳನ್ನು ಮಟ್ಟ ಹಾಕುವುದನ್ನು ಬಿಟ್ಟು ಅವರನ್ನು ಸಹೋದರರು ಎಂದು ಹೇಳಳಾಗುತ್ತಿದೆ ಇದು ನಮ್ಮ ದೌಭಾಗ್ಯವಾಗಿದೆ. ಬರಗಾಲದಿಂದ ರೈತ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ ಇದರ ಬಗ್ಗೆ ಸರ್ಕಾರ ಗಮನ ನೀಡಿಲ್ಲ, ಬಿಜೆಪಿ ಸರ್ಕಾರ ನೀಡುತ್ತಿದ್ದ ಕೃಷಿ ಸನ್ಮಾನ ಹಣವನ್ನು ಕಾಂಗ್ರೆಸ್ ಸರ್ಕಾರ ವಾಪಾಸ್ಸ್ ಪಡೆದಿದೆ, ದಲಿತರಿಗೆ ಇಟ್ಟ ಹಣವನ್ನು ಸರ್ಕಾರ ವಾಪಾಸ್ ಪಡೆದು ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾದ್ಯಕರಾದ ಎ. ಮುರಳಿ, ಜಯಪಾಲ್ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಹೊನ್ನಾಳ್, ಸೂರನಹಳ್ಳಿ ವಿಜಯಣ್ಣ, ಮಾಜಿ ಕೂಡಾ ಅದ್ಯಕ್ಷ ಸುರೇಶ್ ಸಿದ್ದಾಪುರ ಸಂಪತ್ ಕೆ ಮಲ್ಲಿಕಾರ್ಜುನ್ ವಕ್ತಾರರಾದ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್ , ನವೀನ್ ಚಾಲುಕ್ಯ, ಶಿವಣ್ಣಾಚಾರ್, ವೆಂಕಟೇಶ್ ಯಾದವ್, ಡಿ ಕೆ ಜಯ್ಯಣ್ಣ, ರೇಖಾ ಕಿರಣ್, ಶಂಭು ಯಶವಂತ್, ಶಂಭು, ವೀರೇಶ್ ಜಾಲಿಕಟ್ಟೆ, ಕಲ್ಲೇಶಯ್ಯ, ಹರೀಶ್, ತಿಮ್ಮಣ್ಣ, ಸಂತೋಷ್, ಬಸಮ್ಮ, ಪಾಂಡು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತಿ ಇದ್ದರು.