ಬೆಂಗಳೂರು: ಮದ್ಯಪ್ರಿಯರಿಗೆ ಇಂದಿನಿಂದ ಜೇಬಿಗೆ ಹೊರೆ ಜಾಸ್ತಿಯಾಗಲಿದೆ. ಮದ್ಯದ ಬೆಲೆಯಲ್ಲಿ ಹೆಚ್ಚಳವಾಗಿದೆ. ಎಲ್ಲಾ ಮದ್ಯಗಳ ಮೇಲೂ ಬೆಲೆ ಏರಿಕೆಯಾಗಿದ್ದು, ಶೇಕಡ 20 ರಷ್ಟು ದರ ಏರಿಕೆಯಾಗಿದೆ. ಬಿಯರ್ ಮೇಲಿನ ಅಬಕಾರಿ ಸುಂಕ ಮಾತ್ರ ಶೇಕಡ 10ರಷ್ಟು ಏರಿಕೆಯಾಗಿದೆ. ರಮ್, ವಿಸ್ಕಿ, ಬ್ರಾಂದಿ, ಜಿನ್ ಗಳ ಮೇಲೆ ಶೇಕಡ 20 ರಷ್ಟು ಏರಿಕೆಯಾಗಿದೆ.
ಸರ್ಕಾರದ ಆದೇಶದಂತೆ ಇಂದಿನಿಂದ ಮದ್ಯದ ಮೇಲಿನ ದರ ಹೆಚ್ಚಳವಾಗಿದೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ 14ನೇ ಬಜೆಟ್ ನಲ್ಲಿ ಮದ್ಯದ ದರವನ್ನು ಘೋಷಣೆ ಮಾಡಿದ್ದರು. ಜುಲೈ 7ರಂದು ಬಜೆಟ್ ಮಂಡನೆಯಲ್ಲಿ ಮದ್ಯದ ದರ ಹೆಚ್ಚಾಗಲಿದೆ ಎಂದು ಘೋಷಿಸಿದ್ದರು. ಅದರಂತೆ ಇದೀಗ ಇಂದಿನಿಂದ ಮದ್ಯದ ದರದಲ್ಲಿ ದರ ಏರಿಕೆಯಾಗಿದೆ.
ಮೊದಲೇ ದರ ಏರಿಕೆ ಬಿಸಿಯ ತಲೆನೋವಿನಲ್ಲಿದ್ದರು. ಆ ತಲೆನೋವಿನಿಂದ ನೊಂದವರಿಗೆ ಮದ್ಯವೂ ದುಬಾರಿಯಾಗಿದೆ. ಇಂದಿನಿಂದ ಇನ್ನಷ್ಟು ಬೆಲೆ ತರಬೇಕಾಗುತ್ತದೆ. ಕೆಲವೊಂದು ಬಾರ್ ಗಳಲ್ಲಿ ನಿನ್ನೆಯಿಂದಾನೇ ಬೆಲೆ ಏರಿಕೆಯಾಗಿದೆ.